
ಜಮಿಯತುಲ್ ಫಲಾಹ್ ಬಂಟ್ವಾಳ ಘಟಕ ವತಿಯಿಂದ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಬಿ.ಸಿ.ರೋಡ್ ಲಯನ್ಸ್ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಘಟಕಾಧ್ಯಕ್ಷ ಅಬ್ಬಾಸ್ ಆಲಿ ವಹಿಸಿದರು. ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಅಭಿನಂದನಾ ಮಾತುಗಳನ್ನಾಡಿದರು.

ಮುಖ್ಯ ಅತಿಥಿಗಳಾಗಿ ದ.ಕ. ಶಾಲಾ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ಧೇಶಕ ಶಶಿಧರ್ ಜಿ., ಡಯಟ್ ಮಂಗಳೂರು ಹಿರಿಯ ಉಪನ್ಯಾಸಕಿ ಫಾತಿಮಾ ಬಿ., ಜೆ.ಎಫ್.ಸಿ.ಸಿ. ಜಿಲ್ಲಾ ಕಾರ್ಯದರ್ಶಿ ಮಹಮ್ಮದ್ ಹನೀಫ್ ಮಾಸ್ಟರ್, ಅಜೀವ ಸದಸ್ಯರಾದ ಹನೀಫ್ ಹಾಜಿ ಗೋಳ್ತಮಜಲು, ಮೊಹಮ್ಮದ್ ಇಸಾಕ್ ಅರ್ಕುಳ, ಟಿ.ಮಹಮ್ಮದ್ ಟೋಪ್ಕೋ, ಖಜಾಂಜಿ ಅಬ್ದುಲ್ ಲತೀಫ್ ನೇರಳಕಟ್ಟೆ ವೇದಿಕೆಯಲ್ಲಿದ್ದರು.

ಲೆಕ್ಕಪರಿಶೋಧಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಕುಕ್ಕಾಜೆ ನಿವಾಸಿ ಮೊಹಮ್ಮದ್ ಶಿಹಾಬುದ್ದೀನ್ ಕುಕ್ಕಾಜೆ ಅವರನ್ನು ಸನ್ಮಾನಿಸಲಾಯಿತು. ಬಂಟ್ವಾಳ ಘಟಕದ ಎಂ.ಎಚ್.ಇಕ್ಬಾಲ್, ಪಿ. ಮೊಹಮ್ಮದ್, ಮೊಹಮ್ಮದ್ ನಾರಂಕೋಡಿ, ಮೊಹಮ್ಮದ್ ರಫೀಕ್ ಹಾಜಿ ಆಲಡ್ಕ, ಶೇಖ್ ರಹಮತುಲ್ಲಾಹ್, ಬಿ.ಎ.ಮೊಹಮ್ಮದ್ ನೀಮಾ, ಅಬ್ದುಲ್ ಕರೀಂ ಕೋಟೆಕಣಿ, ಇಬ್ರಾಹಿಂ ಮೊಯಿದಿನ್ ನಂದಾವರ, ರಶೀದ್ ವಿಟ್ಲ, ಶಾಕಿರ್ ಅಳಕೆಮಜಲು, ವಿ.ಎಚ್.ಅಶ್ರಫ್, ಹರ್ಷದ್ ಸರವು ಮತ್ತಿತರರು ಉಪಸ್ಥಿತರಿದ್ದರು. ಕೆ.ಎಸ್.ಮೊಹಮ್ಮದ್ ಕಿರಾತ್ ಪಠಿಸಿದರು, ಹಕೀಂ ಕಲಾಯಿ ಸ್ವಾಗತಿಸಿದರು, ಅಹ್ಮದ್ ಮುಸ್ತಫಾ ಕಾರ್ಯಕ್ರಮ ನಿರೂಪಿಸಿದರು, ಆಶಿಕ್ ಕುಕ್ಕಾಜೆ ವಂದಿಸಿದರು.


Be the first to comment on "ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕ ವತಿಯಿಂದ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ"