ಪ್ರಮುಖ ಸುದ್ದಿಗಳು

ತಮಿಳುನಾಡು –ಡಿಎಂಕೆ ಹಿಂದಿಕ್ಕಿದ ಟಿವಿಕೆ, ಯಾರಿಗೆ ‘ವಿಜಯ’ಮಾಲೆ

ತಮಿಳುನಾಡು –ಡಿಎಂಕೆ ಹಿಂದಿಕ್ಕಿದ ಟಿವಿಕೆ, ಯಾರಿಗೆ ‘ವಿಜಯ’ಮಾಲೆ

ದೇಶದಾದ್ಯಂತ ಕುತೂಹಲ ಕೆರಳಿಸಿರುವ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಮತ ಎಣಿಕೆ ನಡೆಯುತ್ತಿದೆ. ಇದೀಗ ಮುನ್ನಡೆಯ ಲೆಕ್ಕಾಚಾರಗಳು ಆಗುತ್ತಿದ್ದು, ಯಾವುದೇ ಹಂತದಲ್ಲಿ ಇದು ಬದಲಾವಣೆ ಆಗಲೂಬಹುದು. ಪರಿಪೂರ್ಣ ಫಲಿತಾಂಶ ಬಂದರಷ್ಟೇ ಸರಿಯಾದ ಲೆಕ್ಕಾಚಾರ, ಬಲಾಬಲಗಳು ದೊರಕುತ್ತದೆ.  ಸದ್ಯದ ಮಾಹಿತಿ ಹೀಗಿದೆ.

VNR GOLD

ಕೇರಳಂ, ಪುದುಚೇರಿ (ಕೇಂದ್ರಾಡಳಿತ ಪ್ರದೇಶ), ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಚುನಾವಣೆ ನಡೆದಿದೆ. ಇದರಲ್ಲಿ ಕೇರಳಂ ನಲ್ಲಿ ಎಲ್.ಡಿ.ಎಫ್, ಪ.ಬಂಗಾಳದಲ್ಲಿ ಟಿಎಂಸಿ, ತಮಿಳುನಾಡಿನಲ್ಲಿ ಡಿಎಂಕೆ, ಪುದುಚೇರಿಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಅಸ್ಸಾಂನಲ್ಲಿ ಮಾತ್ರ  ಬಿಜೆಪಿ ಅಧಿಕಾರದಲ್ಲಿತ್ತು. ಇದೀಗ ಮತ ಎಣಿಕೆ ಹಾಗೂ ಟ್ರೆಂಡಿಂಗ್ ನೋಡಿದರೆ, ಕೇರಳಂನಲ್ಲಿ ಎಲ್.ಡಿ.ಎಫ್. 25, ಯುಡಿಎಫ್ 73ರಲ್ಲಿ ಮುನ್ನಡೆಯಲ್ಲಿದೆ. ವಿಶೇಷವೆಂದರೆ ಬಿಜೆಪಿ 13 ಸ್ಥಾನಗಳಲ್ಲಿ ಮುನ್ನಡೆಯಿದೆ. ಪಶ್ಚಿಮ ಬಂಗಾಲದಲ್ಲಿ ಬಿಜೆಪಿ 124 ಸ್ಥಾನದಲ್ಲಿ ಮುನ್ನಡೆಯಲ್ಲಿದ್ದರೆ, ಟಿಎಂಸಿ 110 ಸ್ಥಾನದಲ್ಲಿ ಮುನ್ನಡೆಯಲ್ಲಿದೆ. ಅಸ್ಸಾಂನಲ್ಲಿ ಬಿಜೆಪಿ ವಿಜಯದ ಮೆಟ್ಟಿಲು ಹತ್ತಿಯಾಗಿದೆ. ಬಿಜೆಪಿ 83, ಕಾಂಗ್ರೆಸ್ 26 ಸ್ಥಾನದಲ್ಲಿ ಮುನ್ನಡೆಯಲ್ಲಿದೆ. ಪುದುಚೇರಿಯಲ್ಲೂ ಬಿಜೆಪಿ 6, ಕಾಂಗ್ರೆಸ್ 2 ಸ್ಥಾನ ಗಳಿಸಿದ್ದು, ಬಿಜೆಪಿ ಮುನ್ನಡೆಯಲ್ಲಿದೆ. ವಿಶೇಷವೆಂದರೆ ತಮಿಳುನಾಡು ಫಲಿತಾಂಶ. ಚಿತ್ರನಟ ವಿಜಯ್ ಅವರ ಟಿವಿಕೆ ಪಕ್ಷ ಡಿಎಂಕೆಯನ್ನೂ ಹಿಂದಿಕ್ಕಿ ಮುಂದಿದೆ. ಪ್ರಸ್ತುತ ಸನ್ನಿವೇಶದಲ್ಲಿ ವಿಜಯ್ ಅವರ ಟಿವಿಕೆ 83 ಸ್ಥಾನದಲ್ಲಿ ಮುಂದೆ ಇದ್ದರೆ, ಎಐಎಡಿಎಂಕೆ 61 ಮತ್ತು ಡಿಎಂಕೆ 54 ಸ್ಥಾನದಲ್ಲಿ ಮುನ್ನಡೆಯಲ್ಲಿದೆ.

ಜಾಹೀರಾತು
ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.