ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿಯ ಅಂಡರ್ ಪಾಸ್ ಇರುವ ಪಾಣೆಮಂಗಳೂರಿನಿಂದ ನರಿಕೊಂಬಿಗೆ ತೆರಳುವ ರಸ್ತೆಯ ಎತ್ತರದ ಭಾಗವನ್ನು ಅಭಿವೃದ್ಧಿ ಮಾಡುವ ಹಿನ್ನೆಲೆಯಲ್ಲಿ ನರಿಕೊಂಬು, ಶಂಭೂರಿಗೆ ತೆರಳುವ ಮುಖ್ಯ ರಸ್ತೆಯನ್ನು ಬಂದ್ ಮಾಡಲಾಗಿದೆ.
ಪಾಣೆಮಂಗಳೂರು ಕಲ್ಲುರ್ಟಿ ಸನ್ಜಿಧಿ ಬಳಿಯಿಂದ ನರಿಕೊಂಬು ಕಡೆಗೆ ಅಂಡರ್ ಪಾಸ್ ಸಮೀಪದಿಂದ ಮುಂದಕ್ಕೆ ಮೇಲೇರುವ ರಸ್ತೆ ಅಗಲೀಕರಣ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಮೂಲಕ ಹೆದ್ದಾರಿ ಅಭಿವೃದ್ದಿ ಗುತ್ತಿಗೆ ಸಂಸ್ಥೆ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ರಸ್ತೆಯ ಅಭಿವೃದ್ಧಿ ಮಾಡುವ ಕಾರ್ಯ ಆರಂಭಗೊಂಡಿದೆ. ಮೊದಲ ಹಂತವಾಗಿ ಲಕ್ಷ್ಮೀನರಸಿಂಹ ದೇವಸ್ಥಾನದ ದ್ವಾರವನ್ನು ಮಂಗಳವಾರ ತೆರವುಗೊಳಿಸಲಾಯಿತು. ಸುಮಾರು ಒಂದು ತಿಂಗಳಿಗೂ ಅಧಿಕ ದಿನಗಳ ಕಾಲ ಕಾಮಗಾರಿ ನಡೆಯುವ ಸಾಧ್ಯತೆ ಇದೆ.
ಹೆದ್ದಾರಿಯ ನೆಹರೂನಗರ ಸಮೀಪದಿಂದ ವೀರಮಾರುತಿ ವ್ಯಾಯಾಮ ಶಾಲೆ ಕಡೆಗೆ ತೆರಳುವ ರಸ್ತೆ ಮಾರ್ಗವಾಗಿ ನರಿಕೊಂಬಿಗೆ ಹೋಗಬಹುದು. ಅಥವಾ ಪಾಣೆಮಂಗಳೂರು ಹಳೇಸೇತುವೆ ಬಳಿ ಭಯಂಕೇಶ್ವರ ದೇವಸ್ಥಾನದ ಸಮೀಪ ಜೈನರಪೇಟೆ ಮೂಲಕ ನರಿಕೊಂಬು ತಲುಪಬಹುದು. ಈ ರಸ್ತೆ ಅಗಲಕಿರಿದಾಗಿದ್ದು, ಲಾರಿಯಂಥ ಘನವಾಹನ ಸಂಚಾರ ಸಾಧ್ಯವಿಲ್ಲ.
| ಪುರಸಭಾ ವ್ಯಾಪ್ತಿಯ ಜನರಲ್ಲಿ ಸಹಕಾರಕ್ಕೆ ಪ್ರಾಜೆಕ್ಟ್ ಡೈರೆಕ್ಟರ್ ಸಂತೋಷ್ ಕುಮಾರ್ ಮನವಿ | ನೀರು ಶುದ್ಧೀಕರಣ ಘಟಕಕ್ಕೆ ಭೇಟಿ,…