ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮುಲ್ಕಿ ತಾಲೂಕು ಘಟಕದ ವತಿಯಿಂದ ಕಾರ್ನಾಡು ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ದ.ಕ. ಜಿಲ್ಲಾಮಟ್ಟದ ಸೌಹಾರ್ದ ಕ್ರೀಡಾಕೂಟ ಪಂಚಾಯತ್ ರಾಜ್ ಟ್ರೋಫಿ 2026ರಲ್ಲಿ ಬಂಟ್ವಾಳ ತಾಲೂಕು ತಂಡ ಗಮನಾರ್ಹ ಸಾಧನೆ ಮಾಡಿದೆ.
ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್ ಕುಮಾರ್ ನೇತೃತ್ವದ ಟೀಂ ಬಂಟ್ವಾಳ ಕ್ರಿಕೆಟ್ ತಂಡ ಅತ್ಯುತ್ತಮ ಪ್ರದರ್ಶನ ನೀಡಿ ದ್ವಿತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.
ಲೀಗ್ ಪಂದ್ಯಗಳಲ್ಲಿ ಕಡೇಶ್ವಾಲ್ಯ ಗ್ರಾಮ ಪಂಚಾಯತ್ ಸಿಬ್ಬಂದಿ ನಾಗರಾಜ್ ಮತ್ತು ವೀರಕಂಭ ಗ್ರಾಮ ಪಂಚಾಯತ್ ಸಿಬ್ಬಂದಿ ಮಿಥುನ್ ಅವರು ತಮ್ಮ ಆಲ್ ರೌಂಡ್ ಪ್ರದರ್ಶನಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ಬೌಲಿಂಗ್ ವಿಭಾಗದಲ್ಲಿ ಶಿಸ್ತುಬದ್ಧ ದಾಳಿ ಸಂಘಟಿಸಿದ ತಾಲೂಕು ಪಂಚಾಯತ್ ನರೇಗಾ ಎಂಐಎಸ್ ಸಂಯೋಜಕ ಜೋಯಲ್ ಡಿಸೋಜ ಅವರು ಅತ್ಯುತ್ತಮ ಬೌಲರ್ ಪ್ರಶಸ್ತಿ ಮುಡಿಗೇರಿಸಿಕೊಂಡರು.
ಹಗ್ಗಜಗ್ಗಾಟದಲ್ಲಿ ಚಾಂಪಿಯನ್:
ಬಲಪ್ರದರ್ಶನದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಬಂಟ್ವಾಳ ತಂಡವು ಅಪ್ರತಿಮ ಸಾಮರ್ಥ್ಯ ತೋರಿ ಪ್ರಥಮ ಸ್ಥಾನವನ್ನು ಪಡೆಯುವ ಮೂಲಕ ವಿಜೇತ ಟ್ರೋಫಿಯನ್ನು ಎತ್ತಿ ಹಿಡಿಯಿತು.