ಕೆಲ ದಿನಗಳಿಂದ ಮಳೆಯ ಪ್ರಮಾಣ ಏರಿಕೆ ಕಂಡಿರುವುದು ಹಾಗೂ ನೇತ್ರಾವತಿ ನದಿಯ ನೀರಿನ ಹರಿವು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬಂಟ್ವಾಳದ ಕಂಚಿಕಾರಪೇಟೆಯಲ್ಲಿರುವ ನೇತ್ರಾವತಿ ನದಿ ನೀರಿನ ಮಾಪನದಲ್ಲಿ ಏರಿಕೆ ಕಂಡಿದೆ.
ನದಿಯ ಮಟ್ಟ ಶನಿವಾರ (ಆಗಸ್ಟ್ 1) 5.6 ಮೀಟರ್ ಇತ್ತು. ಇದು ಈ ವರ್ಷದಲ್ಲಿ ಮೊದಲ ಬಾರಿ ಈ ಮಟ್ಟವನ್ನು ತಲುಪಿದೆ ಎನ್ನಲಾಗಿದೆ. ಇದುವರೆಗೂ ನಾಲ್ಕು, ಐದು ಮೀಟರ್ ಒಳಗೆ ಹರಿಯುತ್ತಿದ್ದ ನೇತ್ರಾವತಿ ನದಿ ನೀರಿನ ಮಟ್ಟ ಏರಿಕೆಯಾಗಿರುವುದು ಕೃಷಿಕರಲ್ಲಿ ಸಂತಸ ಮೂಡಿಸಿದೆ.
ಆದರೆ ನದಿ ನೀರಿನ ಒಳಹರಿವು ನಿರಂತರವಾಗಿ ಮಳೆಗಾಲವಿಡೀ ಹೆಚ್ಚಳವಾಗುವುದೋ ಅಥವಾ ನಾಲ್ಕೈದು ದಿನಗಳಲ್ಲಿ ತಗ್ಗಬಹುದೋ ಎಂಬ ಕುತೂಹಲವಿದೆ. ಭಾರಿ ಮಳೆಯ ನಿರೀಕ್ಷೆ ಇದ್ದರೂ ಶನಿವಾರ ಬೆಳಗಿನ ಜಾವ ಬಿಸಿಲು ಇಣುಕಿತ್ತು. ಶಾಲೆಗಳು ಪಿಯುವರೆಗೆ ಈಗಾಗಲೇ ರಜೆ ಘೋಷಿಸಲಾಗಿದೆ.
Rs.5 ಲಕ್ಷ ಬಡ್ಡಿರಹಿತ ಬೆಳೆ ಸಾಲ | ಅಡಿಕೆಯ ಪರ್ಯಾಯ ಬಳಕೆ ಸಂಶೋಧನೆಗೆ ಒತ್ತು | ‘ಅಡಿಕೆ ಜೈವಿಕ ಆರ್ಥಿಕತೆ…