ವಿಷು ಹಬ್ಬದ ಆಚರಣೆ ವಿಶೇಷ ಸಂದರ್ಭ ನಾವಿದ್ದೇವೆ. ಬೇವು-ಬೆಲ್ಲದ ವಿಶೇಷತೆಯನ್ನು ಅರಿತವರಾಗಿದ್ದೇವೆ. ಸಿಹಿ-ಕಹಿ, ಸುಖ-ದುಃಖ ಸಂಸಾರದಲ್ಲಿ ಸಾಮಾನ್ಯ. ಅದನ್ನು ಸಮಾನವಾಗಿ ಸ್ವೀಕರಿಸಲು ತಯಾರಿರಬೇಕು. ಯೋಜನೆಯು ವ್ಯಕ್ತಿ ವಿಕಾಸದ ಮೂಲಕ ರಾಷ್ಟ್ರ ವಿಕಾಸ ಪರಿಕಲ್ಪನೆಯಲ್ಲಿ ಕಾರ್ಯ ನಡೆಸುವ ಉದ್ದೇಶವನ್ನಿರಿಸಿಕೊಂಡಿದೆ. ಮಾತೃಶಕ್ತಿಯಿಂದ ಸಮಾಜದಲ್ಲಿ ದೊಡ್ಡ ಪರಿವರ್ತನೆಯನ್ನು ತರಲು ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.
ಒಡಿಯೂರುಶ್ರೀಗ್ರಾಮವಿಕಾಸಯೋಜನೆಯ’ಸಂಸ್ಕೃತಿ-ಸಂಸ್ಕಾರ’ ಕಾರ್ಯಕ್ರಮದಲ್ಲಿ ಶ್ರೀಗಳು ಸಂದೇಶ ನೀಡಿದರು
ನಮಗೆಎಲ್ಲವೂ ಉಚಿತ ಲಭಿಸಿದರೂ ಜೀವನದಲ್ಲಿ ತೃಪ್ತಿಯಿಲ್ಲ. ಸಮಾಧಾನವೂ ಇಲ್ಲ. ಕಾರಣ ನಾವು ಆಂತರಿಕವಾಗಿ ಸಿದ್ಧತೆಯಲ್ಲಿಲ್ಲ. ನಮಗೆ ತೃಪ್ತಿಯಾದರೆ ಎಲ್ಲವೂ ಸರಿಯಾದಂತೆ. ಮನಸ್ಸನ್ನು ನಿಯಂತ್ರಣದಲ್ಲಿಡಲು ಪ್ರಯತ್ನ ಬರಬೇಕು. ಶುದ್ಧಮನಸ್ಸು ನಮ್ಮದಾಗಬೇಕು. ಆರ್ಥಿಕ ಮತ್ತು ಮಹಿಳಾ ಸಬಲೀಕರಣಮತ್ತುಬದುಕಿನ ವಿಕಾಸ ಇದುಯೋಜನೆಯ ಉದ್ದೇಶ. ಆತ್ಮವಿಶ್ವಾಸವನ್ನುವೃದ್ಧಿಸಲು ನಾವು ಪ್ರತೀತಿಂಗಳುಸಂಸ್ಕೃತಿ-ಸಂಸ್ಕಾರಕಾರ್ಯಕ್ರಮವನ್ನುಜೋಡಿಸಲಾಗಿದೆ. ಸಂಸ್ಕೃತಿಯ ಹೃದಯವೇ ಸಂಸ್ಕಾರ. ನಿರಂತರಚಟುವಟಿಕೆಗಳಲ್ಲಿ ತೊಡಗಿಕೊಂಡಾಗ ಎಲ್ಲವೂ ಸಾಧ್ಯಎಂದು ಶ್ರೀಗಳು ನುಡಿದರು
.ಬೆಳ್ತಂಗಡಿ ತಾಲೂಕಿನ ಯೋಜನೆಯ ಬಂಧುಗಳು ನಿರ್ವಹಿಸಿದ ಕಾರ್ಯಕ್ರಮವು ಸಾಮೂಹಿಕ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಯೋಜನಾ ನಿರ್ದೇಶಕ ಶ್ರೀ ಕಿರಣ್ ಉರ್ವ, ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ ಮಾತೇಶ್ ಭಂಡಾರಿ, ಬೆಳ್ತಂಗಡಿ ತಾಲೂಕು ಮೇಲ್ವಿಚಾರಕ ಯೋಶಧರ ಸಾಲ್ಯಾನ್ ದೀಪ ಪ್ರಜ್ವಲಿಸಿದರು. ಸುಮಾರು ೧೬ ಒಡಿಯೂರು ಶ್ರೀ ವಿಕಾಸವಾಹಿನಿ ಸ್ವ-ಸಹಾಯ ಸಂಘಗಳಿಗೆ ರೂ.೩,೪೪,೫೨೫.೦೦ ಮೊತ್ತ ಲಾಭಾಂಶದ ಚೆಕ್ಕನ್ನು ಪೂಜ್ಯ ಸ್ವಾಮೀಜಿಯವರು ನೀಡಿ ಹರಸಿದರು.
ಆರಂಭದಲ್ಲಿ ಧ್ಯಾನ-ಪ್ರಾಣಾಯಾಮ, ಶ್ರೀಮದ್ಭಗವದ್ಗೀತೆ ಹಾಗೂ ಹನುಮಾನ್ ಚಾಲೀಸಾ ಪಠಣ, ನಾಮ ಸಂಕೀರ್ತನೆ ಜರಗಿದವು. ಸೇವಾದೀಕ್ಷತೆಯರಾದ ಗಿರಿಜಾ ಸ್ವಾಗತಿಸಿ, ಪುಷ್ಪಲತಾ ಕಾರ್ಯಕ್ರಮ ನಿರೂಪಿಸಿದರು. ಸೇವಾದೀಕ್ಷಿತರಾದ ರತ್ನಾಕರ ವಂದಿಸಿದರು.
| ಹೋರಾಟ ಸಮಿತಿ ಸಭೆಯಲ್ಲಿ ನಿರ್ಧಾರ | ಮಾಜಿ ಸಚಿವ ರಮಾನಾಥ ರೈ ಅಧ್ಯಕ್ಷತೆಯಲ್ಲಿ ನಡೆದ ಸಭೆ (more…)
ಅಮೀಬಾ ಸೋಂಕಿನಿಂದ ಸಾವು ಸಂಭವಿಸಿಲ್ಲ: ಜಿಲ್ಲಾ ಆರೋಗ್ಯಾಧಿಕಾರಿ ಸ್ಪಷ್ಟನೆ (more…)