ಪ್ರಮುಖ ಸುದ್ದಿಗಳು

ಅಮೀಬಿಕ್ ಮೆನಿಂಜೈಟಿಸ್ (Naegleria fowleri ಸೋಂಕು) ಬಗ್ಗೆ ಸಾರ್ವಜನಿಕ ಜಾಗೃತಿ – ಆರೋಗ್ಯ ಇಲಾಖೆ ಪ್ರಕಟಣೆಯಲ್ಲೇನಿದೆ, ಓದಲೇಬೇಕಾದ ಮಾಹಿತಿ ಇಲ್ಲಿದೆ

ಅಮೀಬಾ ಸೋಂಕಿನಿಂದ ಸಾವು ಸಂಭವಿಸಿಲ್ಲ: ಜಿಲ್ಲಾ ಆರೋಗ್ಯಾಧಿಕಾರಿ ಸ್ಪಷ್ಟನೆ

ಅಮೀಬಾ ಸೋಂಕಿನಿಂದ ಸಾವು ಸಂಭವಿಸಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ ಈ ಕುರಿತು ಪ್ರಕಟಣೆಯೊಂದನ್ನು ಹೊರಡಿಸಿದ್ದಾರೆ.  

ಇದು Naegleria fowleri ಅಂದರೆ “ಮೆದುಳು ತಿನ್ನುವ ಅಮೀಬಾ”ದಿಂದ ಉಂಟಾಗುವ ಅಪರೂಪದ, ಆದರೆ ಅತ್ಯಂತ ಗಂಭೀರವಾದ ಮೆದುಳಿನ ಸೋಂಕು ಇದರ ಕುರಿತು ಮಾಹಿತಿ ಇಲ್ಲಿದೆ ಕೊನೆಯವರೆಗೂ ಓದಿರಿ.

ಜಾಹೀರಾತು

ಈ ಅಮೀಬಾ ಸಾಮಾನ್ಯವಾಗಿ ಬೆಚ್ಚಗಿನ ಸಿಹಿನೀರಿನ ಮೂಲಗಳಾದ ಕೊಳ, ಕೆರೆ, ಕಾಲುವೆ, ನಿಂತ ನೀರು ಮತ್ತು ಸರಿಯಾಗಿ ನಿರ್ವಹಿಸದ ಈಜುಕೊಳಗಳಲ್ಲಿ ಕಂಡುಬರುತ್ತದೆ. ಸ್ನಾನ, ಈಜು, ಧುಮುಕುವುದು ಅಥವಾ ನೀರಿನಲ್ಲಿ ಆಡುವಾಗ ಕಲುಷಿತ ನೀರು ಮೂಗಿನ ಮೂಲಕ ದೇಹ ಸೇರಿದಾಗ ಸೋಂಕು ಉಂಟಾಗುತ್ತದೆ. ನಂತರ ಅಮೀಬಾ ಮೆದುಳಿಗೆ ತಲುಪಿ ತೀವ್ರ ಸೋಂಕನ್ನು ಉಂಟುಮಾಡಬಹುದು.

ಗಮನಿಸಬೇಕಾದ ಅಂಶವೆಂದರೆ ಈ ಸೋಂಕು ಕಲುಷಿತ ನೀರು ಕುಡಿಯುವುದರಿಂದ ಹರಡುವುದಿಲ್ಲ ಮತ್ತು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ.

ಮೂಗಿನ ಶಸ್ತ್ರಚಿಕಿತ್ಸೆಯ ಇತಿಹಾಸವಿರುವ ಅಥವಾ ಮೂಗಿನ ವಿಕೃತಿಗಳಿರುವ ವ್ಯಕ್ತಿಗಳು ನೀರಿನ ಸಂಪರ್ಕಕ್ಕೆ ಬರುವಾಗ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.

ಲಕ್ಷಣಗಳು ಹೀಗಿರಬಹುದು: – ತೀವ್ರ ತಲೆನೋವು, – ಜ್ವರ – ವಾಂತಿ – ಕುತ್ತಿಗೆ ಬಿಗಿತ – ಪ್ರಜ್ಞೆಯಲ್ಲಿ ಬದಲಾವಣೆ / ಗೊಂದಲ – ಪ್ರಜ್ಞೆ ತಪ್ಪುವುದು – ಸೆಳವು

Visual concept of deadly brain-eating amoeba infection. 3d illustration

ಸೋಂಕಿಗೆ ಒಳಗಾದ 1 ರಿಂದ 12 ದಿನಗಳ ಒಳಗೆ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಮತ್ತು ವೇಗವಾಗಿ ಉಲ್ಬಣಗೊಳ್ಳಬಹುದು.

ಎರಡು ಮೂರು ದಿನಗಳಿಂದ ಜಿಲ್ಲೆಯಲ್ಲಿ ಈ ಬಗ್ಗೆ ಸೋಂಕಿನಿoದ ಮೃತಪಟ್ಟಿರುತ್ತಾರೆಂದು ಮಾಧ್ಯಮಗಳಲ್ಲಿ ವರದಿಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ರೀತಿ ಯಾವುದೇ ಸೋಂಕು ವರದಿಯಾಗಿರುವುದಿಲ್ಲ ಎಂದು ಸಾರ್ವಜನಿಕರಿಗೆ ಸ್ಪಷ್ಟಪಡಿಸಿದೆ.

 ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಮೀಬಿಕ್ ಮೆನಿಂಜೈಟಿಸ್‌ನ ಯಾವುದೇ ಖಚಿತ ಪ್ರಕರಣಗಳು ಪತ್ತೆಯಾಗಿಲ್ಲ. ಕೆಲವು ಮಾದರಿಗಳಲ್ಲಿ ಪ್ರಸ್ತುತ ಪತ್ತೆಯಾಗಿರುವ ಜೀವಿಗಳು ಇತರ ರೋಗಗಳಿಗೆ ಸಂಬಂಧಿಸಿದ ಚಲನಶೀಲ ಬ್ಯಾಕ್ಟೀರಿಯಾಗಳಾಗಿವೆ, Naegleria fowleri ಅಲ್ಲ.

ಮುನ್ನೆಚ್ಚರಿಕೆ ಕ್ರಮಗಳು:————–

– ನಿಂತ ನೀರಿನ ಅಥವಾ ಬೆಚ್ಚಗಿನ ಸಿಹಿನೀರಿನ ಕೊಳ, ಕೆರೆ ಮತ್ತು ಕಾಲುವೆಗಳಲ್ಲಿ ಸ್ನಾನ ಅಥವಾ ಈಜುವುದನ್ನು ತಪ್ಪಿಸಿ

– ಅಂತಹ ನೀರಿನ ಮೂಲಗಳಿಗೆ ಧುಮುಕುವುದು ಅಥವಾ ಜಿಗಿಯುವುದನ್ನು ತಪ್ಪಿಸಿ

– ಈಜುವಾಗ ಮೂಗಿನ ಕ್ಲಿಪ್‌ಗಳನ್ನು ಬಳಸಿ

– ಮೂಗಿಗೆ ನೀರು ಹೋಗದಂತೆ ತಡೆಯಿರಿ

– ಆಳವಿಲ್ಲದ ನೀರಿನಲ್ಲಿ ಕೆಸರು ಅಥವಾ ಮಣ್ಣನ್ನು ಕೆದಕುವುದನ್ನು ತಪ್ಪಿಸಿ

– ಈಜುಕೊಳಗಳನ್ನು ಸರಿಯಾಗಿ ಕ್ಲೋರಿನೇಟ್ ಮಾಡಿ ಉತ್ತಮವಾಗಿ ನಿರ್ವಹಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಿ

– ಮೂಗನ್ನು ಸ್ವಚ್ಛಗೊಳಿಸಲು / ಸೈನಸ್ ತೊಳೆಯಲು ಕುದಿಸಿ ಆರಿಸಿದ ನೀರು ಅಥವಾ ಡಿಸ್ಟಿಲ್ಡ್ ನೀರನ್ನು ಮಾತ್ರ ಬಳಸಿ

ನೀರಿನ ಮೂಲಗಳ ಸಂಪರ್ಕದ ನಂತರ ಯಾವುದೇ ವ್ಯಕ್ತಿಯಲ್ಲಿ ಜ್ವರ, ತೀವ್ರ ತಲೆನೋವು, ವಾಂತಿ, ಕುತ್ತಿಗೆ ಬಿಗಿತ ಅಥವಾ ಪ್ರಜ್ಞೆಯಲ್ಲಿ ಬದಲಾವಣೆ ಕಂಡುಬಂದರೆ, ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಬೇಕು.

ಬೇಗನೆ ವೈದ್ಯಕೀಯ ಗಮನ ಸಿಕ್ಕರೆ ಜೀವ ಉಳಿಸಬಹುದು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.