ಸಿದ್ಧಕಟ್ಟೆ ಸಂತ ಪ್ಯಾಟ್ರಿಕ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಶತಮಾನ ಸಂಭ್ರಮದಲ್ಲಿದ್ದು, ಹಿರಿಯ ವಿದ್ಯಾರ್ಥಿ ಸಂಘ, ಶಾಲಾ ಆಡಳಿತ ಮಂಡಳಿ, ಶಿಕ್ಷಕ ರಕ್ಷಕ ಸಂಘದ ಸಹಯೋಗದೊಂದಿಗೆ ಬುಧವಾರ ಬೆಳಗ್ಗೆ ಶಾಲೆಯಲ್ಲಿ ಶತಮಾನೋತ್ಸವ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.
ಶಾಲಾ ಸಂಚಾಲಕ ರೆ.ಫಾ.ಎಲಿಯಾಸ್ ಡಿಸೋಜ ಶತಮಾನೋತ್ಸವ ಹಿನ್ನೆಲೆ ಸಾಂಕೇತಿಕವಾಗಿ ತೆಂಗಿನ ಗಿಡವನ್ನು ನೆಟ್ಟು ಆಶೀರ್ವಚನ ನೀಡಿ, ಶಾಲೆಯಲ್ಲಿ ದುಡಿದ ಎಲ್ಲರಿಗೂ ಹಾಗೂ ಕಲಿತ ಎಲ್ಲ ವಿದ್ಯಾರ್ಥಿಗಳಿಗೂ ಶಾಂತಿ, ನೆಮ್ಮದಿ ದೊರಕಲೆಂದು ಆಶಯ ವ್ಯಕ್ತಪಡಿಸಿ, ಶತಮಾನೋತ್ಸವ ಸಮಾರಂಭ ಯಶಸ್ವಿಯಾಗಿ ನೆರವೇರಲಿ, ಕಲಿತ ಎಲ್ಲ ವಿದ್ಯಾರ್ಥಿಗಳೂ ಸತ್ಪ್ರಜೆಗಳಾಗಿ ಬಾಳಲಿ, ಸಮಾಜಕ್ಕೆ ಉತ್ತಮ ಮಾರ್ಗದರ್ಶನ ನೀಡುವಂತಾಗಲಿ ಎಂದು ಶುಭ ಹಾರೈಸಿದರು.
ಶ್ರೀ ಕ್ಷೇತ್ರ ಪೂಂಜ ಪ್ರಧಾನ ಅರ್ಚಕ ಪ್ರಕಾಶ್ ಆಚಾರ್ಯ ಶಾಲಾ ಪ್ರವೇಶದ್ವಾರದ ಭೂಮಿಪೂಜೆ ನೆರವೇರಿಸಿ, ಶಾಲೆಯ ಶತಮಾನೋತ್ಸವ ಕಾರ್ಯಕ್ರಮಗಳು ನಿರ್ವಿಘ್ನವಾಗಿ ಸಾಗಲಿ ಎಂದು ಹಾರೈಸಿದರು.
ಅಧ್ಯಕ್ಷತೆಯನ್ನು ಶತಮಾನೋತ್ಸವ ಸಮಿತಿ ಅಧ್ಯಕ್ಷ ಸಂದೀಪ್ ಶೆಟ್ಟಿ ಪೊಡುಂಬ ವಹಿಸಿ ಸರ್ವರ ಸಹಕಾರ ಕೋರಿದರು. ಬೆಳ್ಳಿಪ್ಪಾಡಿ ಯಜಮಾನರಾದ ಬಿ.ಸಂಜೀವ ರೈ, ಕಾರ್ಕಳ ವರ್ಧಮಾನ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಶಶಿಕಲಾ ಹೆಗ್ಡೆ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ಸುದೀಪ್ ಕುಮಾರ್, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಕೆ.ರಮೇಶ್ ನಾಯಕ್ ರಾಯಿ, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಸುನೀಲ್ ಸಿಕ್ವೇರ, ಶತಮಾನೋತ್ಸವ ಸಮಿತಿ ಕಾರ್ಯದರ್ಶಿ ರತೀಶ್ ಶೆಟ್ಟಿ, ಶತಮಾನೋತ್ಸವ ಸಮಿತಿ ಸಂಚಾಲಕ ಮೈಕಲ್ ಡಿಕೋಸ್ತಾ, ಚರ್ಚ್ ಪಾಲನಾ ಮಂಡಳಿ ಕಾರ್ಯದರ್ಶಿ ಪ್ರವೀಣ್ ಕ್ರಾಸ್ತಾ, ಮುಖ್ಯೋಪಾಧ್ಯಾಯಿನಿ ರೀಟಾ ತಾವ್ರೊ, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ರತ್ನಾಕರ ಪೂಜಾರಿ, ಅಭುದಾಬಿ ಉದ್ಯಮಿ ಜಾನ್ಸನ್ ಶೈಲೇಶ್ ಮೊರಾಸ್, ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು, ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ರಿಚರ್ಡ್ ಡಿಕೋಸ್ಟ, ಪ್ರಮುಖರಾದ ನೋಣಯ್ಯ ಶೆಟ್ಟಿಗಾರ್, ಮೆಲ್ ರಿಚ್ ಎಂಟರ್ ಪ್ರೈಸಸ್ ಮಾಲೀಕರಾದ ಮೈಕಲ್ ಮೊರಾಸ್, ವೀರೇಂದ್ರ ಶೆಟ್ಟಿಗಾರ್, ಅರ್ಕಕೀರ್ತಿ ಇಂದ್ರ, ದಾಮೋದರ ಶೆಟ್ಟಿಗಾರ್, ರೊನಾಲ್ಡ್ ಮೊರಾಸ್ ಅಲಕ್ಕೆ, ಕರುಣಾಕರ ಶೆಟ್ಟಿ, ಸುರೇಶ್ ಶೆಟ್ಟಿ, ದುರ್ಗಾದಾಸ್ ಶೆಟ್ಟಿ, ಟೀನಾ ಡಿಕೋಸ್ತ, , ಐರಿನ್ ರೊಡ್ರಿಗಸ್, ರಾಜನ್ ಸಾಂತ್ ಮಾಯರ್, ಮಧ್ವರಾಜ ಜೈನ್ ,ಹರೀಶ್ ಶೆಟ್ಟಿ, ಸೀತಾರಾಮ ಶೆಟ್ಟಿ, ಹುಸೇನ್ ಕೆರೆಬಳಿ, ಮೋನಕ್ಕ ಕಲ್ಕುರಿ, ನೋಣಯ್ಯ ಮೂಲ್ಯ ಮತ್ತಿತರರು ಉಪಸ್ಥಿತರಿದ್ದರು.