ಅರಣ್ಯ ಇಲಾಖೆಯ ಕರ್ನಾಟಕ ಅರಣ್ಯ ಸುಸ್ಥಿರ ಅರಣ್ಯ ನಿರ್ವಹಣೆ ಮತ್ತು ಜೀವ ವೈವಿಧ್ಯ ಸಂರಕ್ಷಣಾ ಯೋಜನೆಯಲ್ಲಿ ಸ್ಥಾಪಿಸಲಾದ ವೀರಕಂಭ ಗ್ರಾಮ ಅರಣ್ಯ ಸಮಿತಿಯ ಹೊಸ ನಿರ್ವಹಣಾ ಸಮಿತಿ ರಚನೆಯಾಗಿದ್ದು ಮುಂದಿನ ಐದು ವರ್ಷಗಳ ಕಾಲಕ್ಕೆ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ವಿಶ್ವನಾಥ ಎಂ. ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ. ಸಮಿತಿ ಸದಸ್ಯರಾಗಿ ಎಂ.ಆರ್.ನೋಣಯ್ಯ, ರೇವತಿ, ಅಬ್ದುಲ್ ಖಾದರ್, ಮೀನಾಕ್ಷಿ, ಸಂತೋಷ್ ಕಲ್ಮಲೆ, ಬೇಬಿ ಜೆ.ಆಳ್ವ, ಚಂದ್ರಶೇಖರ ಬಂಗೇರ, ಜಯಪ್ರಸಾದ್ ಶೆಟ್ಟಿ, ಗಿರಿಜ, ತೇಜಾಕ್ಷಿ ಅವರನ್ನು ಆಯ್ಕೆ ಮಾಡಲಾಯಿತು. ವಿಟ್ಲ ಕಂದಾಯ ನಿರೀಕ್ಷಕ ಎಂ.ಎನ್.ರವಿ ಚುನಾವಣಾ ಅಧಿಕಾರಿಯಾಗಿ ಆಗಮಿಸಿದ್ದರು. ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿ ರವಿರಾಜ್ ಬಿ. ಗಸ್ತು ಅರಣ್ಯ ಪಾಲಕರಾದ ಶೋಭಿತ್ ಕುಮಾರ್, ದಯಾನಂದ, ರಾಘವೇಂದ್ರ, ಅರಣ್ಯ ವೀಕ್ಷಕರಾದ ಕಿರಣ್, ಪ್ರವೀಣ್ ಉಪಸ್ಥಿತರಿದ್ದರು.
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ವೀರಕಂಭ ಗ್ರಾಮ ಅರಣ್ಯ ನಿರ್ವಹಣಾ ನೂತನ ಸಮಿತಿ ಸಭೆ"
Be the first to comment on "ವೀರಕಂಭ ಗ್ರಾಮ ಅರಣ್ಯ ನಿರ್ವಹಣಾ ನೂತನ ಸಮಿತಿ ಸಭೆ"