ಸ್ಥಳೀಯ ಸಾರಿಗೆ ಮತ್ತು ಸೇವೆಗಳಿಗೆ ಡಿಜಿಟಲ್ ಸೇತುವೆ: ಪುತ್ತೂರು, ವಿಟ್ಲ, ಉಜಿರೆ, ಬೆಳ್ತಂಗಡಿ ಪ್ರದೇಶಗಳಿಗೆ ‘ಪಿನ್ ಮಾಡಿ’

📞 ವಿವರಗಳಿಗೆ ಸಂಪರ್ಕಿಸಿ: 7019941258
🌐 ವೆಬ್‌ಸೈಟ್: www.pinmaadi.com
📲 ಆ್ಯಪ್ ಡೌನ್‌ಲೋಡ್: Pinmaadi (Play Store)

ನಗರ ಪ್ರದೇಶಗಳಲ್ಲಾದರೆ ಆಟೊ, ಕ್ಯಾಬ್ ಬೇಕಿದ್ದರೆ, ಆಪ್ ಮೂಲಕ ಬುಕ್ ಮಾಡಲು ಸಾಧ್ಯ ಆದರೆ ನಮ್ಮೂರಲ್ಲಾದರೆ ಏನು ಮಾಡುವುದು? ಪಿನ್ ಮಾಡಿ…

ಪುತ್ತೂರು, ವಿಟ್ಲ, ಉಜಿರೆ, ಬೆಳ್ತಂಗಡಿ ಈ ಪ್ರದೇಶಗಳಲ್ಲಿ ಸ್ಥಳೀಯ ಆಟೊ, ಕ್ಯಾಬ್ ಅಥವಾ ಸಾಗಾಣಿಕೆ ವಾಹನ ಸಂಪರ್ಕ ವ್ಯವಸ್ಥೆಗೆ ಹೀಗೊಂದು ಆಪ್ ಅನ್ನು ಸ್ಥಳೀಯ ಉತ್ಸಾಹಿ ಸಾಫ್ಟ್ ವೇರ್ ತಜ್ಞರು ಸಿದ್ಧಪಡಿಸಿದ್ದಾರೆ.

ಜಾಹೀರಾತು
www.flylinkworld.com

ಊರಿನ ಅಭಿವೃದ್ಧಿಯ ಬಗ್ಗೆ ಕಾಳಜಿ ಹೊಂದಿರುವ ತಂತ್ರಜ್ಞಾನ ಸಹೋದ್ಯೋಗಿಗಳು ಸೇರಿ ‘ಪಿನ್ ಮಾಡಿ (Pin Maadi)’ ಎಂಬ ಹೊಸ ಮೊಬೈಲ್ App ಇದು. ಗ್ರಾಮೀಣ ಹಾಗೂ ಉಪನಗರ ಪ್ರದೇಶಗಳಿಗೆ ಡಿಜಿಟಲ್ ಸೌಲಭ್ಯ ತಲುಪಿಸುವ ಉದ್ದೇಶದಿಂದ ಈ ಆ್ಯಪ್ ರೂಪುಗೊಂಡಿದೆ.

‘ಪಿನ್ ಮಾಡಿ’ ಮೂಲತಃ ಸ್ಥಳೀಯ ಮಟ್ಟದಲ್ಲಿ APP ಆಧಾರಿತ service ಒದಗಿಸುವ ಪ್ರಯತ್ನವಾಗಿದೆ. ಬಳಕೆದಾರರು ತಮ್ಮ ಸುತ್ತಮುತ್ತಲಿನ ಆಟೋ, ಕ್ಯಾಬ್, ಬೈಕ್ ಟ್ಯಾಕ್ಸಿ, ಪಿಕಪ್ ವಾಹನ, ಟೆಂಪೋ ಮೊದಲಾದ ಸಾಗಾಣಿಕೆ ವಾಹನಗಳನ್ನು ಆ್ಯಪ್ ಮೂಲಕ ನೇರವಾಗಿ ಸಂಪರ್ಕಿಸಬಹುದು. ತುರ್ತು ಸಂದರ್ಭಗಳಲ್ಲಿ ಅಥವಾ ಸರಕು ಸಾಗಾಣಿಕೆಗೆ ಹತ್ತಿರದಲ್ಲಿರುವ ಚಾಲಕರನ್ನು ಸುಲಭವಾಗಿ ಕಂಡುಹಿಡಿಯುವ ವ್ಯವಸ್ಥೆ ಇದರಲ್ಲಿ ಅಳವಡಿಸಲಾಗಿದೆ. ಬಳಕೆದಾರರು ತಮ್ಮ ಸುತ್ತಮುತ್ತಲಿನ ಯಾರಿದ್ದಾರೆ ಎಂಬುದನ್ನು ತಕ್ಷಣ ನೋಡಬಹುದು ಮತ್ತು ಬೇಕಾದರೆ ಅವರನ್ನು ನೇರವಾಗಿ ಸಂಪರ್ಕಿಸಬಹುದು.

ಈಗಾಗಲೇ ಸುಬ್ರಹ್ಮಣ್ಯ, ಪುತ್ತೂರು, ವಿಟ್ಲ, ಉಪ್ಪಿನಂಗಡಿ, ಗುರುವಾರ್ಯನಕೆರೆ, ಕಲ್ಲೇರಿ, ಕುದ್ರಡ್ಕ, ಬಳ್ಳಮಂಜ, ಮಡಂತ್ಯಾರು, ಉಜಿರೆ, ಧರ್ಮಸ್ಥಳ ಸೇರಿದಂತೆ ವಿವಿಧ ಪ್ರದೇಶಗಳಿಂದ 120ಕ್ಕೂ ಹೆಚ್ಚು ಆಟೋ ರಿಕ್ಷಾ ಚಾಲಕರು ಹಾಗೂ 25ಕ್ಕೂ ಹೆಚ್ಚು ಕ್ಯಾಬ್ ಚಾಲಕರು ನೋಂದಾಯಿಸಿಕೊಂಡಿದ್ದಾರೆ. ಇದು ಗ್ರಾಮೀಣ ಪ್ರದೇಶದಲ್ಲಿ ಈ ಸೇವೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವುದನ್ನು ತೋರಿಸುತ್ತದೆ.

ಆಟೋ, ಕ್ಯಾಬ್, ಬೈಕ್ ಟ್ಯಾಕ್ಸಿ ಅಥವಾ ಇತರೆ ಸಾರ್ವಜನಿಕ ಸೇವಾ ವಾಹನ ಚಾಲಕರು ‘ಪಿನ್ ಮಾಡಿ’ ಆ್ಯಪ್ ಅನ್ನು ಡೌನ್ಲೋಡ್ ಮಾಡಿ ಸ್ವತಃ ನೋಂದಾಯಿಸಿಕೊಳ್ಳಬೇಕು. ನೋಂದಣಿ ಮಾಡಿದ ನಂತರವೇ ಅವರ ವಾಹನವು ‘ಪಿನ್ ಮಾಡಿ’ ಮ್ಯಾಪ್ನಲ್ಲಿ ಗೋಚರಿಸುತ್ತದೆ. ಚಾಲಕರ ಗೌಪ್ಯತೆಯನ್ನು ಗೌರವಿಸುವ ಉದ್ದೇಶದಿಂದ, ಅವರು ಖಾಸಗಿ ಕೆಲಸಗಳಲ್ಲಿ ನಿರತರಾಗಿರುವಾಗ ಅಥವಾ ಸೇವೆಗೆ ಲಭ್ಯವಿರದ ಸಂದರ್ಭಗಳಲ್ಲಿ ತಮ್ಮ ಲೊಕೇಶನ್ ಅನ್ನು ತಾತ್ಕಾಲಿಕವಾಗಿ ‘ಆಫ್’ ಮಾಡಿಕೊಳ್ಳುವ ಅಥವಾ ತಮ್ಮನ್ನು ಮ್ಯಾಪ್ನಿಂದ ಮರೆಮಾಡಿಕೊಳ್ಳುವ (Hide) ಅವಕಾಶವನ್ನೂ ನೀಡಲಾಗಿದೆ. ಇದರಿಂದ ಉದ್ಯೋಗ ಮತ್ತು ವೈಯಕ್ತಿಕ ಜೀವನದ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.

ಶಾಲಾ ಬಸ್ ಲೈವ್ ಟ್ರ್ಯಾಕಿಂಗ್ – ಸುರಕ್ಷತೆಗೆ ಆದ್ಯತೆ

ಈ ಆ್ಯಪ್ನ ಪ್ರಮುಖ ಆಕರ್ಷಣೆಯಾಗಿ ಲೈವ್ ಟ್ರ್ಯಾಕಿಂಗ್ ವ್ಯವಸ್ಥೆ ಗಮನ ಸೆಳೆಯುತ್ತದೆ. ಆಟೋ ಹಾಗೂ ಕ್ಯಾಬ್ಗಳ ಜೊತೆಗೆ ಶಾಲಾ ಬಸ್ಗಳ ಲೈವ್ ಟ್ರ್ಯಾಕಿಂಗ್ ಸೌಲಭ್ಯವನ್ನೂ ಒಳಗೊಂಡಿದೆ. ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಿರುವ ಈ ವ್ಯವಸ್ಥೆಯಲ್ಲಿ ಗೌಪ್ಯತೆಗೆ ವಿಶೇಷ ಮಹತ್ವ ನೀಡಲಾಗಿದೆ. ಬಸ್ ನ ಸ್ಥಳ ಮಾಹಿತಿ, ಶಾಲಾ ಆಡಳಿತ ಮತ್ತು ಅಧಿಕೃತ ಪೋಷಕರಿಗಷ್ಟೇ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಪೋಷಕರು ಮಕ್ಕಳ ಪ್ರಯಾಣವನ್ನು ಸುಲಭವಾಗಿ ಗಮನಿಸಬಹುದು.

ವಾಹನ ಮಾಲೀಕರಿಗೆ ಏಕೈಕ ವೇದಿಕೆ

‘ಪಿನ್ ಮಾಡಿ’ ಆ್ಯಪ್ನ ಮತ್ತೊಂದು ಮಹತ್ವದ ವೈಶಿಷ್ಟ್ಯವೆಂದರೆ, ಒಂದಕ್ಕಿಂತ ಹೆಚ್ಚು ವಾಹನಗಳನ್ನು ಹೊಂದಿರುವ ಮಾಲೀಕರಿಗೆ ಒಂದೇ ವೇದಿಕೆಯಲ್ಲಿ ಅವುಗಳನ್ನು ಖಾಸಗಿಯಾಗಿ ನಿರ್ವಹಿಸುವ ಅವಕಾಶ. ಆಟೋ, ಕ್ಯಾಬ್, ಬೈಕ್ ಟ್ಯಾಕ್ಸಿ, ಪಿಕಪ್ ಅಥವಾ ಟೆಂಪೋ ಸೇರಿದಂತೆ ಹಲವು ವಾಹನಗಳ ವಿವರಗಳನ್ನು ಒಂದೇ ಖಾತೆಯಲ್ಲಿ ಸೇರಿಸಿ ಹಾಗೂ ಕಾರ್ಯಾಚರಣೆಯನ್ನು ಸುಗಮವಾಗಿ ನಿರ್ವಹಿಸಬಹುದು. ಇದು ಸಣ್ಣ ಮಟ್ಟದ ಸಾರಿಗೆ ಉದ್ಯಮಿಗಳಿಗೆ ಹೆಚ್ಚು ಉಪಯುಕ್ತವಾಗಲಿದೆ.

ಸ್ಥಳೀಯ ಜಾಹೀರಾತುಗಳಿಗೆ ಮಾತ್ರ ಆದ್ಯತೆ

ಈ ಆ್ಯಪ್ನ ಇನ್ನೊಂದು ವಿಶೇಷತೆ ಜಾಹೀರಾತು ವ್ಯವಸ್ಥೆ. ‘ಪಿನ್ ಮಾಡಿ’ಯಲ್ಲಿ ಕಾಣಿಸುವ ಜಾಹೀರಾತುಗಳು ಸಂಪೂರ್ಣವಾಗಿ ಸ್ಥಳೀಯ ವ್ಯಾಪಾರಿಗಳದ್ದಾಗಿರುತ್ತವೆ. ಬಳಕೆದಾರರು ಇರುವ ಪ್ರದೇಶಕ್ಕೆ ಸಂಬಂಧಿಸಿದ ಜಾಹೀರಾತುಗಳನ್ನಷ್ಟೇ ಪ್ರದರ್ಶಿಸಲಾಗುತ್ತದೆ. ಅಗತ್ಯವಿಲ್ಲದ ಪ್ರದೇಶಗಳ ಜಾಹೀರಾತುಗಳನ್ನು ಎಲ್ಲೆಡೆ ತೋರಿಸುವ “ಸ್ಪ್ಯಾಮಿಂಗ್” ಕ್ರಮ ಇಲ್ಲ. ಇದರಿಂದ ಬಳಕೆದಾರರಿಗೆ ಉಪಯುಕ್ತ ಮಾಹಿತಿ ದೊರೆಯುತ್ತದೆ ಮತ್ತು ಸ್ಥಳೀಯ ವ್ಯಾಪಾರಿಗಳಿಗೆ ನೇರವಾಗಿ ತಮ್ಮ ಗ್ರಾಹಕರನ್ನು ತಲುಪುವ ಅವಕಾಶ ಸಿಗುತ್ತದೆ.

ಸ್ಥಳೀಯ ವ್ಯಾಪಾರಿಗಳಿಗೆ ಡಿಜಿಟಲ್ ಸೇತುವೆ

ಸಾರಿಗೆ ಸೇವೆಗಳಷ್ಟೇ ಅಲ್ಲದೆ, ಹೂ ಅಂಗಡಿ, ಕಿರಾಣಿ, ಹೋಟೆಲ್, ಗೃಹೋಪಯೋಗಿ ಮತ್ತು ತಾಂತ್ರಿಕ ಸೇವೆಗಳು, ಲಾಡ್ಜ್ ಹಾಗೂ ವಾಸ್ತವ್ಯ ಸೌಲಭ್ಯಗಳವರೆಗೆ ವಿವಿಧ ಸ್ಥಳೀಯ ಸೇವೆಗಳ ಮಾಹಿತಿಯನ್ನೂ ಈ ಆ್ಯಪ್ನಲ್ಲಿ ಸೇರಿಸಬಹುದು. ವ್ಯಾಪಾರಿಗಳು ಹಾಗೂ ಸೇವೆ ಒದಗಿಸುವವರು ತಮ್ಮ ವಿವರಗಳನ್ನು ನೋಂದಾಯಿಸಿಕೊಂಡು ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಗ್ರಾಹಕರಿಗೆ ತಲುಪುವ ಅವಕಾಶ ಪಡೆಯುತ್ತಾರೆ.

ಭವಿಷ್ಯದ ಗುರಿ – ಸ್ಥಳೀಯ ಬಸ್ ಹಾಗೂ ಗ್ಯಾಸ್ ಸರಬರಾಜು ವಾಹನ ಟ್ರ್ಯಾಕಿಂಗ್

ಆ್ಯಪ್ ನ ಮುಂದಿನ ಯೋಜನೆ ಸ್ಥಳೀಯ ಬಸ್ ಸೇವೆಗಳಿಗೂ ಈ ತಂತ್ರಜ್ಞಾನವನ್ನು ವಿಸ್ತರಿಸುವುದು. ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸುವ ಖಾಸಗಿ ಹಾಗೂ ಸ್ಥಳೀಯ ಬಸ್ಗಳ ಸಮಯಪಟ್ಟಿ ಮತ್ತು ಲೈವ್ ಲೊಕೇಶನ್ ಮಾಹಿತಿಯನ್ನು ಆ್ಯಪ್ ಮೂಲಕ ಒದಗಿಸುವ ಉದ್ದೇಶ ಹೊಂದಲಾಗಿದೆ. ಇದು ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ದೈನಂದಿನ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವನ್ನು ನೀಡಲಿದೆ.

ಜೊತೆಗೆ, ಗ್ರಾಮೀಣ ಪ್ರದೇಶಗಳಲ್ಲಿ ಗ್ಯಾಸ್ ಸಿಲಿಂಡರ್ ಸರಬರಾಜು ಮಾಡುವ ಪಿಕಪ್ ವಾಹನಗಳ ಲೈವ್ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಕೂಡ ಸೇರಿಸುವ ಯೋಜನೆ ಇದೆ. ಹಲವಾರು ಗ್ರಾಮಗಳಲ್ಲಿ ಗ್ಯಾಸ್ ವಾಹನ ಬರುವ ಸಮಯ ತಿಳಿಯದೆ ಜನರು ಸಿಲಿಂಡರ್ಗಳನ್ನು ರಸ್ತೆ ಬದಿಯಲ್ಲಿ ಇಟ್ಟು ಕಾಯುತ್ತಿರುವುದು ಸಾಮಾನ್ಯ ದೃಶ್ಯ. ಕೆಲವೊಮ್ಮೆ ನಿರ್ಲಕ್ಷ್ಯದಿಂದ ಇಡಲಾಗಿರುವ ಸಿಲಿಂಡರ್ಗಳು ಕಳ್ಳತನವಾಗುವ ಘಟನೆಗಳೂ ಕಂಡುಬರುತ್ತಿವೆ. ಈ ಸಮಸ್ಯೆಯನ್ನು ಮನಗಂಡು, ಗ್ಯಾಸ್ ಸರಬರಾಜು ವಾಹನದ ಲೈವ್ ಲೊಕೇಶನ್ ಮಾಹಿತಿ ಲಭ್ಯವಾಗುವಂತೆ ಮಾಡುವ ಮೂಲಕ, ಜನರು ಸರಿಯಾದ ಸಮಯದಲ್ಲಿ ಮನೆಮೇಲೆ ಸಿಲಿಂಡರ್ ಒದಗಿಸಿಕೊಳ್ಳಲು ಮತ್ತು ಕಳ್ಳತನದಂತಹ ಸಮಸ್ಯೆಗಳನ್ನು ತಪ್ಪಿಸಲು ನೆರವಾಗುವ ಉದ್ದೇಶ ಹೊಂದಲಾಗಿದೆ.

ಕನ್ನಡ ಭಾಷಾ ಬೆಂಬಲ, ಬಳಕೆದಾರ ಸ್ನೇಹಿ ವಿನ್ಯಾಸ ಮತ್ತು “ಲೋಕಲ್ಗೆ ವೋಕಲ್” ಪರಿಕಲ್ಪನೆಯೊಂದಿಗೆ ‘ಪಿನ್ ಮಾಡಿ’ ಆ್ಯಪ್ ಸಣ್ಣ ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶಗಳಿಗೆ ಹೊಸ ಡಿಜಿಟಲ್ ದಿಕ್ಕನ್ನು ತೋರಿಸುತ್ತಿದೆ. ಸ್ಥಳೀಯ ಸೇವೆಗಳು ಮತ್ತು ಗ್ರಾಹಕರನ್ನು ಒಂದೇ ವೇದಿಕೆಯಲ್ಲಿ ಸಂಪರ್ಕಿಸುವ ಈ ಪ್ರಯತ್ನ, ನಮ್ಮ ಊರುಗಳ ಅಭಿವೃದ್ಧಿಗೆ ಮಹತ್ವದ ಹೆಜ್ಜೆಯಾಗಿದೆ

ಜಾಹೀರಾತು

About the Author

Harish Mambady
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಸ್ಥಳೀಯ ಸಾರಿಗೆ ಮತ್ತು ಸೇವೆಗಳಿಗೆ ಡಿಜಿಟಲ್ ಸೇತುವೆ: ಪುತ್ತೂರು, ವಿಟ್ಲ, ಉಜಿರೆ, ಬೆಳ್ತಂಗಡಿ ಪ್ರದೇಶಗಳಿಗೆ ‘ಪಿನ್ ಮಾಡಿ’"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*