
ಬಂಟ್ವಾಳ: ಬಿ.ಸಿ.ರೋಡ್ ಶ್ರೀ ಅನ್ನಪೂರ್ಣೇಶ್ವರಿ ನಾಗದೇವರ ದೇವಸ್ಥಾನದಲ್ಲಿ ಅರ್ಧ ಏಕಾಹ ಭಜನಾ ಮಹೋತ್ಸವ, ವಾರ್ಷಿಕ ಜಾತ್ರೆ ಹಾಗೂ ಗುಳಿಗ ದೈವದ ಕೋಲಸೇವೆ ಜ.29 ಹಾಗೂ 31ರಂದು ಕೀಕಾಂಗೋಡು ಬ್ರಹ್ಮಶ್ರೀ ಅರವತ್ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.
ಜ.29ರಂದು ಬೆಳಗ್ಗೆ ಸೂರ್ಯಾಸ್ತಮಾನದಿಂದ ಸಂಜೆಯವರೆಗೆ ಭಜನೆ, ನವಚಂಡಿಕಾಹೋಮ, ರಾತ್ರಿ ವಾಸ್ತುಹೋಮ ನಡೆಯಲಿದೆ.ಜ.30ರಂದು ಬೆಳಗ್ಗೆ ಗಣಪತಿ ಹೋಮ, ನವಚಂಡಿಕಾ ಹೋಮ, ವಿಶೇಷ ನಾಗಾರಾಧನೆ, ಹೋಮ ಪೂರ್ಣಾಹುತಿ, ಮಧ್ಯಾಹ್ನ ಮಹಾಪೂಜೆ, ಭಜನೆ, ಅನ್ನಸಂತರ್ಪಣೆ, ರಾತ್ರಿ ದೇವರ ಬಲಿ, ಜ.31ರಂದು ಗುಳಿಗ ದೈವಕ್ಕೆ ಕೋಲ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.


Be the first to comment on "B.C.Road: ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಜಾತ್ರೆ"