- Bantwalnews
- ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬಂಟ್ವಾಳ ತಾಲೂಕಿನ ಬ್ರಹ್ಮರಕೂಟ್ಲು ಟೋಲ್ ಗೇಟ್ ನಲ್ಲಿ ಸಿಬ್ಬಂದಿಗಳ ಜೊತೆ ಜಗಳ ಮಾಡಿ, ಟೋಲ್ ಹಾನಿಗೊಳಿಸಿ, ಹಲ್ಲೆ ನಡೆಸಿದ ದೂರಿನನ್ವಯ ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಚಿಕ್ಕಮಗಳೂರು ಮೂಲದ ಆರೋಪಿಗಳಾದ ಲಾರಿ ಚಾಲಕ ಭರತ್ (23) ಮತ್ತು ಲಾರಿಯಲ್ಲಿದ್ದ ಕ್ಲೀನರ್ ತೇಜಸ್ (26) ಎಂಬಿಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ

ಈ ಕುರಿತು ಟೋಲ್ ಇನ್ ಚಾರ್ಜ್ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಸೋಮವಾರ ಬೆಳಗ್ಗೆ ಘಟನೆ ನಡೆದಿದೆ. ಲಾರಿಯೊಂದನ್ನು ನಿಲ್ಲಿಸಿ, ಟೋಲ್ ಹಣ ಕೇಳಿದ ವೇಳೆ ಹಣ ನೀಡಲು ನಿರಾಕರಿಸಿ ಮುಂದಕ್ಕೆ ಚಲಾಯಿಸಿ, ಟೋಲ್ ಗೇಟ್ ಗೆ ಆರೋಪಿಗಳು ಹಾನಿ ಮಾಡಿದ್ದಾರೆ. ಲಾರಿಯ ಚಾಲಕ ಹಾಗೂ ಇನ್ನೋರ್ವ ಆರೋಪಿ, ಟೋಲ್ ಸಿಬ್ಬಂದಿಗಳಾದ ಅಂಕಿತ್ ಹಾಗೂ ರೋಹಿತ್ ಎಂಬವರಿಗೆ ಬೈದು ಹಲ್ಲೆ ನಡೆಸಿದ್ದಾಗಿ ದೂರಲಾಗಿದೆ. ಇನ್ನೊಂದು ಪಿಕಪ್ ವಾಹನದಲ್ಲಿದ್ದ ಇಬ್ಬರು ವ್ಯಕ್ತಿಗಳನ್ನು ಕರೆದುಕೊಂಡು ಟೋಲ್ ಬೂತ್ ಒಳಗಡೆ ಅಕ್ರಮವಾಗಿ ಪ್ರವೇಶಿಸಿ, ಇಬ್ಬರಿಗೆ ಮತ್ತೆ ಹಲ್ಲೆ ನಡೆಸಿರುತ್ತಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Be the first to comment on "ಬ್ರಹ್ಮರಕೂಟ್ಲು ಟೋಲ್ ನಲ್ಲಿ ಸಿಬ್ಬಂದಿಗೆ ಹಲ್ಲೆ: ಇಬ್ಬರು ವಶಕ್ಕೆ"