ಸುಮಾರು ೨೫೦ ವರ್ಷಗಳ ಹಿಂದೆ ಅಮ್ಟೂರು ಗ್ರಾಮದ ಕರಿಂಗಾಣದಲ್ಲಿ ಆರಂಭಗೊಂಡ ಮೊಗರ್ನಾಡು ದೇವಮಾತಾ ಚರ್ಚ್‌ನ ೨೫೦ನೇ ಜ್ಯುಬಿಲಿ ವರ್ಷಾಚರಣೆ ೨೦೨೫ನೇ ವರ್ಷಪೂರ್ತಿ ನಡೆದು ಇದೀಗ ಅದರ ಸಮಾರೋಪ ಸಮಾರಂಭವು ಜ. ೧ರಂದು ಸಂಜೆ ೪ಕ್ಕೆ ದೇವಮಾತಾ ಚರ್ಚಿನ ಆವರಣದಲ್ಲಿ ನಡೆಯಲಿದೆ ಎಂದು ಚರ್ಚ್ ಪ್ರಧಾನ ಧರ್ಮಗುರು ರೆ.ಫಾ.ಅನಿಲ್ ಕೆನ್ಯುಟ್ ಡಿಮೆಲ್ಲೊ ಹೇಳಿದರು.
ಅವರು ಶನಿವಾರ ಬಿ.ಸಿ.ರೋಡಿನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಮಾಹಿತಿ ನೀಡಿದರು.

Press Meet
೧೭೭೫ರಲ್ಲಿ ಮೊಡಂಕಾಪು ಚರ್ಚಿನಿಂದ ಬೇರ್ಪಟ್ಟು ಆರಂಭಗೊಂಡ ಮೊಗರ್ನಾಡು ಚರ್ಚ್ ಗ್ರಾಮೀಣ ಪ್ರದೇಶದ ಮಕ್ಕಳ ಶಿಕ್ಷಣದ ಅಗತ್ಯತೆಯನ್ನು ಮನಗಂಡು ೧೮೯೦ರಲ್ಲಿ ಚರ್ಚ್ ವತಿಯಿಂದ ಅಂದಿನ ಧರ್ಮಗುರು ವಂ.ಲೂವಿಸ್ ಕಜೇತನ್ ಕುಟಿನ್ಹಾ ಅವರು ೧ರಿಂದ ೫ನೇ ತರಗತಿವರೆಗೆ ಕನ್ನಡ ಮಾಧ್ಯಮ ಶಾಲೆಯನ್ನು ಆರಂಭಿಸಿ ೧೯೭೬ರಲ್ಲಿ ಅಂದಿನ ಧರ್ಮಗುರು ವಂ.ಹೆರಾಲ್ಡ್ ಮಿನೇಜಸ್ ಅವರು ೭ನೇ ತರಗತಿವರೆಗೆ ವಿಸ್ತರಿಸಿ, ೨೦೦೫ರಲ್ಲಿ ಧರ್ಮಗುರು ವಂ.ಲಿಯೋ ಲೋಬೊ ಅವರು ಆಂಗ್ಲ ಮಾಧ್ಯಮ ಶಾಲೆಯನ್ನು ಆರಂಭಿಸಿ, ೨೦೦೮ರಲ್ಲಿ ಅನುದಾನರಹಿತ ಪ್ರೌಢಶಾಲೆ ಆರಂಭಗೊಂಡಿರುತ್ತದೆ. ಕಳೆದ ವರ್ಷಾಂತ್ಯಕ್ಕೆ ೨೫೦ನೇ ವರ್ಷಾಚರಣೆಯು ಆರಂಭಗೊಂಡು ನಿರಂತರವಾಗಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಸಮಾರೋಪ ಕಾರ್ಯಕ್ರಮದಲ್ಲಿ ಡಿ. ೨೮ರಂದು ಮಧ್ಯಾಹ್ನ ೨.೩೦ಕ್ಕೆ ಕಲ್ಲಡ್ಕ ಕೆ.ಸಿ.ರಸ್ತೆಯಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದ್ದು, ಜ. ೧ರಂದು ಸಂಜೆ ೪ಕ್ಕೆ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಡಾ.ಪೀಟರ್ ಪಾವ್ಲ್ ಸಲ್ಡಾನಾ ಅಧ್ಯಕ್ಷತೆಯಲ್ಲಿ ಬಲಿಪೂಜೆ ನೆರವೇರಲಿದ್ದು, ೨೫೦ಕ್ಕೂ ಅಧಿಕ ಧರ್ಮಗುರುಗಳು ಭಾಗವಹಿಸಲಿದ್ದಾರೆ. ಸಂಜೆ ೬ಕ್ಕೆ ಸಭಾ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ವಂ.ಫಾ.ಐವನ್ ಮೈಕಲ್ ರೊಡ್ರಿಗಸ್, ವಂ.ಫಾ.ಸ್ಟೇನಿ ಡಿಸೋಜ, ವಂ.ಸಿ.ಕ್ಲಾರಾ ಮಿನೇಜಸ್, ವಂ.ಫಾ.ಪೀಟರ್ ಅರುನ್ಹಾ, ವಂ.ಫಾ.ಲಿಯೋ ಲೋಬೊ, ವಂ.ಫಾ.ಮಾರ್ಕ್ ಕ್ಯಾಸ್ತಲಿನೋ, ವಂ.ಫಾ.ಪಾವ್ಲ್ ಪಿಂಟೊ ಮೊದಲಾದ ಗಣ್ಯರು ಭಾಗವಹಿಸಲಿದ್ದು, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಚರ್ಚ್ ಪ್ರಮುಖರಾದ ಸಂತೋಷ್ ಡಿಸೋಜ, ವಿಲ್ರೆಡ್ ಲೋಬೊ, ಎಮಿಲಿಯಾನಾ ಡಿಕುನ್ಹಾ, ನವೀನ್ ರಾಜೇಶ್ ಡಿಕುನ್ಹಾ, ರೋಶನ್ ಬರ್ಬೋಝಾ ಉಪಸ್ಥಿತರಿದ್ದರು


Be the first to comment on "ಮೊಗರ್ನಾಡು ದೇವಮಾತಾ ಚರ್ಚ್: 250ನೇ ವರ್ಷಾಚರಣೆ ಹಿನ್ನೆಲೆ ಹಲವು ಕಾರ್ಯಕ್ರಮ"