ಈ ಪದವಿ ಎನ್ನುವ ಮೈಲುಗಲ್ಲು ಅಂತ್ಯವಲ್ಲ, ಇದು ಒಂದು ಉಡಾವಣಾ ವೇದಿಕೆ. ಜೀವನದ ಹೊಸ ಪಾಠಗಳು, ಹೊಸ ಸವಾಲುಗಳು ಮತ್ತು ಹೊಸ ಸಂತೋಷಗಳನ್ನು ನೀಡುತ್ತದೆ. ನಿಮಗೆ ನನ್ನ ಸಲಹೆ ಸರಳವಾಗಿದೆ. ಕುತೂಹಲದಿಂದಿರಿ, ಧೈರ್ಯಶಾಲಿಯಾಗಿರಿ ಮತ್ತು ದಯೆಯಿಂದಿರಿ ಎಂದು ಎ ಎಂ ಸ್ಟುಡಿಯೋ ಸಂಸ್ಥೆಯ ಆರ್ಕಿಟೆಕ್ಟ್ ಆಸೀಫ್ ಮೊಹಮ್ಮದ್ ಹೇಳಿದರು.

ಮೆಲ್ಕಾರ್ ಮಹಿಳಾ ಕಾಲೇಜಿನ ವಾರ್ಷಿಕೋತ್ಸವ ಮತ್ತು ಪದವಿ ಪ್ರದಾನ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಪದವಿಪೂರ್ವ ತರಗತಿಗಳಲ್ಲಿ 90 ಶೇಕಡಕ್ಕಿಂತ ಅಧಿಕ ಅಂಕಗಳನ್ನು ಗಳಿಸಿ ಮೆಲ್ಕಾರ್ ಮಹಿಳಾ ಕಾಲೇಜಿನಲ್ಲಿ ದಾಖಲಾತಿ ಪಡೆದರೆ ಶೇಕಡ 50ರಷ್ಟು ಶುಲ್ಕವನ್ನು ತಾವು ಪಾವತಿಸುವುದಾಗಿ ಗಡಿಯಾರ ಗ್ರೂಪ್ ಆಫ್ ಕಂಪನಿಸ್ ಮಾಲೀಕ ಇಬ್ರಾಹಿಂ ಗಡಿಯಾರ ಘೋಷಿಸಿದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥಾಪಕ ಹಾಜಿ ಎಸ್ ಎಂ ರಶೀದ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು.
ಜಗತ್ತಿಗೆ ನಿಮ್ಮ ವಿಶಿಷ್ಟ ಪ್ರತಿಭೆಗಳು, ನಿಮ್ಮ ಹೊಸ ದೃಷ್ಟಿಕೋನಗಳು ಮತ್ತು ನಿಮ್ಮ ಸಹಾನುಭೂತಿಯ ಹೃದಯಗಳು ಬೇಕಾಗಿವೆ ಮತ್ತು ಯಾವುದೇ ಕಾರಣಕ್ಕೂ ವಿದ್ಯಾಭ್ಯಾಸವನ್ನು ಮೊಟಕುಗೊಳಿಸದಿರಿ, ನಮ್ಮ ಸಂಸ್ಥೆಯಲ್ಲಿ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯಲು ಅತ್ಯಂತ ಕಡಿಮೆ ಶುಲ್ಕದಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಲು ಅವಕಾಶ ಮಾಡಿಕೊಡುತ್ತಿದ್ದೇವೆ ಎಂದು ಹೇಳಿದರು.
ಕೆನರಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಅಧ್ಯಕ್ಷರಾದ ಪಿ. ಬಿ. ಅಹ್ಮದ್ ಮುದಸ್ಸಿರ್, ಕೆನರಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ನಿರ್ದೇಶಕರಾದ ನಿಸಾರ್ ಫಕೀರ್ ಮೊಹಮ್ಮದ್, ಅಲ್ ಬದ್ರಿಯಾ ಎಜುಕೇಶನಲ್ ಅಸೋಸಿಯೇಷನ್ ಸಂಚಾಲಕಬಿ.ಎ ನಝೀರ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ದಾರುಲ್ ಇಸ್ಲಾಂ ಅನುದಾನಿತ ಶಾಲೆಯ ಮುಖ್ಯೋಪಾಧ್ಯಾಯ ಹಮೀದ್ ಕೆ ಮಾಣಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಿನ್ಸಿಪಾಲ್ ಅಬ್ದುಲ್
ಮಜೀದ್ ಎಸ್ ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು. ಪದವಿ ಪ್ರದಾನ ಸಮಾರಂಭ ಉಪಪ್ರಾಂಶುಪಾಲರಾದ ಅಂಜಲಿನಾ ಸುನೀತಾ ಪಿರೇರ ನಿರೂಪಿಸಿದರು.
ವಿದ್ಯಾರ್ಥಿನಿ ಪಾತಿಮಾ ನಿಧಾ ಸ್ವಾಗತಿಸಿದರು. ಕೆಪಿ ಆಯಿಷತ್ ಸುಹಾನ ವಂದಿಸಿದರು. ಮಶ್ಮೂಮ್ ಫಾತಿಮಾ ನಿರ್ವಹಿಸಿದರು.


Be the first to comment on "ಮೆಲ್ಕಾರ್ ಮಹಿಳಾ ಕಾಲೇಜು ವಾರ್ಷಿಕೋತ್ಸವ, ಪದವಿ ಪ್ರದಾನ"