Dhurandhar : ಧುರಂಧರ್ ನಾಗಾಲೋಟ: ಬಾಕ್ಸ್ ಆಫೀಸ್ ಧೂಳೀಪಟ | ವಿಶ್ವದಾದ್ಯಂತ 500 ಕೋಟಿ ಕಲೆಕ್ಷನ್ ಮಾಡಿದ ರಣವೀರ್ ಸಿಂಗ್-ಅಕ್ಷಯ್ ಖನ್ನಾ ತಾರಾಗಣದ ಸಿನಿಮಾ

ಎರಡನೇ ವಾರಾಂತ್ಯದಲ್ಲಿ ಭಾರೀ ಚರ್ಚಿತ ಸಿನಿಮಾ ಧುರಂಧರ್ ಅತ್ಯುತ್ತಮ ಗಳಿಕೆಯನ್ನೇ ಮಾಡಿದೆ. ಭಾರತೀಯ ಬಾಕ್ಸ್ ಆಫೀಸ್ ಸಂಗ್ರಹದಲ್ಲಿ 300 ಕೋಟಿ ರೂ ದಾಟಿಸಿ, (ವಿಶ್ವದಾದ್ಯಂತ ಸೇರಿ 500 ಕೋಟಿಗೂ ಅಧಿಕ) ಇಂದಿಗೂ ಹೌಸ್ ಫುಲ್ ಪ್ರದರ್ಶನ ನೀಡುತ್ತಿದೆ.

ಜಾಹೀರಾತು

ರಣವೀರ್ ಸಿಂಗ್, ಅಕ್ಷಯ್ ಖನ್ನಾ, ಆರ್. ಮಾಧವನ್, ಅರ್ಜುನ್ ರಾಮ್ ಪಾಲ್, ಸಂಜಯ್ ದತ್, ಸಾರಾ ಅರ್ಜುನ್, ರಾಕೇಶ್ ಬೇಡಿ ಸಹಿತ ಅನುಭವಿ ತಾರಾಗಣವೇ ಇರುವ ಈ ಸಿನಿಮಾವನ್ನು ನಿರ್ಮಿಸಿ, ಬರೆದು, ನಿರ್ದೇಶಿಸಿದವರು ಆದಿತ್ಯ ಧರ್. (ಲೋಕೇಶ್ ಧರ್ ಮತ್ತು ಜ್ಯೋತಿ ದೇಶಪಾಂಡೆ ಸಹನಿರ್ಮಾಪಕರು)

ವಿಕಾಸ್ ನೌಲಾಖಾ ಸಿನಿಮಾಟೊಗ್ರಫಿ, ಶಿವಕುಮಾರ್ ಪಣಿಕ್ಕರ್ ಸಂಕಲನದ ಈ ಚಿತ್ರಕ್ಕೆ ಸಂಗೀತ ನೀಡಿದವರು ಶಾಶ್ವತ್ ಸಚ್ ದೇವ್. ಡಿ.5ರಂದು ಬಿಡುಗಡೆಗೊಂಡ ಈ ಸಿನಿಮಾ 214 ನಿಮಿಷಗಳ ಅವಧಿಯದ್ದಾಗಿದೆ. ಅಂದರೆ ಮೂರುವರೆ ತಾಸು. ಆದರೆ ಅಷ್ಟೂ ಹೊತ್ತು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂಬುದಕ್ಕೆ 140 ಕೋಟಿ ರೂ ಅಂದಾಜು ಬಜೆಟ್ ನಲ್ಲಿ ನಿರ್ಮಾಣವಾದ ಸಿನಿಮಾಕ್ಕೆ 545.6 ಕೋಟಿ ರೂ (ಡಿ.15ರ ವೇಳೆಗೆ) ಗಳಿಕೆಯಾದದ್ದೇ ಸಾಕ್ಷಿ.

ರಣವೀರ್ ಸಿಂಗ್ ಇಡೀ ಸಿನಿಮಾವನ್ನು ಆವರಿಸಿಬಿಡುತ್ತಾರೆ ಎಂದು ಚಿತ್ರ ನೋಡಿದ ಹಲವು ವಿಮರ್ಶಕರು ಬಣ್ಣಿಸಿದ್ದಾರೆ. ಅಕ್ಷಯ್ ಖನ್ನಾ ರಣವೀರ್ ಸಿಂಗ್ ಜೊತೆ ಪರಸ್ಪರ ಪೈಪೋಟಿಯಲ್ಲಿ ನಟಿಸಿದ್ದಾರೆ. ಆರ್. ಮಾಧವನ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡರೆ, ಸಂಜಯ್ ದತ್ ಎಸ್ಪಿ ಆಗಿದ್ದಾರೆ.  ಚರಿತ್ರನಟ ರಾಕೇಶ್ ಬೇಡಿ ಉತ್ತಮ ಪಾತ್ರದಲ್ಲಿದ್ದರೆ, ಸೌಮ್ಯಾ ಟಂಡನ್, ರಾಜ್ ಜುಸ್ಟಿ, ಡಾನಿಶ್ ಪಂಡೊರ್, ಮಾನವ್ ಗೋಹಿಲ್, ಬಿಮಲ್ ಒಬೆರಾಯ್ ಸಹಿತ ಹಲವು ನಟರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

CAUTION: SMOKING IS INJURIOUS TO HEALTH. DO NOT IMITATE THIS ACTION

 ಮೊದಲ ದಿನ ದೊಡ್ಡ ಸದ್ದೇನನ್ನೂ ಮಾಡದೆ ದಿನಕಳೆದಂತೆ ಜನರನ್ನು ಆಕರ್ಷಿಸಿದ ಸಿನಿಮಾ, ಎರಡನೇ ವಾರಾಂತ್ಯ ಪ್ರವೇಶಿಸುವಾಗ ಧುರಂಧರ್ ಇಡೀ ಬಾಕ್ಸ್ ಆಫೀಸ್ ಆಕ್ರಮಿಸಿಕೊಂಡಿದ್ದ.

Dhurandhar is a 2025 Indian Hindi-language spy action thriller film written, co-produced and directed by Aditya Dhar. Produced by Jyoti Deshpande’s Jio Studios and Aditya and Lokesh Dhar’s B62 Studios, the film stars Ranveer Singh, Akshaye Khanna, R. Madhavan, Arjun Rampal, Sanjay Dutt, Sara Arjun and Rakesh Bedi, alongside Manav Gohil, Danish Pandor, Saumya Tandon, Gaurav Gera and Naveen Kaushik in supporting roles. This is the first of a two-part film series

ಜಾಹೀರಾತು

About the Author

Harish Mambady
ಕಳೆದ 27 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ. Harish Mambady - who has experience working as a Journalist in various Print and Digital Media in Dakshina Kannada, Udupi (Mangalore, Manipal, and Bantwal) for the past 27 years, He Started digital Media www.bantwalnews.com in 2016.

Be the first to comment on "Dhurandhar : ಧುರಂಧರ್ ನಾಗಾಲೋಟ: ಬಾಕ್ಸ್ ಆಫೀಸ್ ಧೂಳೀಪಟ | ವಿಶ್ವದಾದ್ಯಂತ 500 ಕೋಟಿ ಕಲೆಕ್ಷನ್ ಮಾಡಿದ ರಣವೀರ್ ಸಿಂಗ್-ಅಕ್ಷಯ್ ಖನ್ನಾ ತಾರಾಗಣದ ಸಿನಿಮಾ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*