

ಮೊಬೈಲ್ ಆಪ್ ಮೂಲಕ ಪರಿಚಯವಾಗಿ ಹಣ ಹೂಡಿಕೆ ಮಾಡಿದರೆ ಲಾಭವಿದೆ ಎಂದು ನಂಬಿಸಿ ಲಕ್ಷಾಂತರ ರೂ ವಂಚನೆ ಎಸಗಿದ ಕುರಿತು ಮಂಗಳೂರಿನ ಸೆನ್ ಪೊಲೀಸ್ ಠಾಣೆಗೆ ಪ್ರಶಾಂತ್ ಕುಮಾರ್ ಎಂಬವರು ದೂರು ನೀಡಿದಂತೆ ಪ್ರಕರಣ ದಾಖಲಾಗಿದೆ.
ಚಾಟ್ ಜಿಪಿಟಿ ಮೂಲಕ ಕ್ವಾಕ್ ಕ್ವಾಕ್ ಡೇಟ್ ಫ್ರೆಂಡ್ರ ಚಾಟ್ ಎಂಬ ಆಪ್ ಅನ್ನು ಡೌನ್ಲೋಡ್ ಮಾಡಿಕೊಂಡು ಅದರ ಮೂಲಕ ಇಶಾ ಸಿಂಗ್ ಎಂಬುವವರು ಪರಿಚಯವಾಗಿ, ಆಕೆ ಸೆ.11ರಂದು ಟೆಲಿಗ್ರಾಂ ಲಿಂಕ್ ಕಳುಹಿಸಿದ್ದು ಇದರ ಮೂಲಕ ಟೆಲಿಗ್ರಾಂನಲ್ಲಿ ಚಾಟಿಂಗ್ ಮಾಡಿಕೊಂಡಿದ್ದಾರೆ. ನಂತರ ಆಕೆ ದೂರುದಾರರಿಗೆ ಕ್ರಿಪ್ಟೊ ಕರೆನ್ಸಿ ಇನ್ವೆಸ್ಟ್ ಮೆಂಟ್ ಆಂಡ್ ಟ್ರೇಡಿಂಗ್ ಮಾಡಲು ತಿಳಿಸಿದಂತೆ ದೂರುದಾರರು ಒಪ್ಪಿಕೊಂಡು ಸೆ.15ರಂದುಟೆಲಿಗ್ರಾಂ ಮೂಲಕ ಕಳುಹಿಸಿದ ಲಿಂಕ್ ಕ್ಲಿಕ್ ಮಾಡಿದಾಗ ಝೆನ್ವಿಸ್ಟ್ ಎಂಬ ವೆಬ್ ಸೈಟ್ ತೆರೆದಿದ್ದು ಮೊದಲಿಗೆ 50 ಸಾವಿರ ಪ್ರತಿಯಾಗಿ ಲಾಭಂಶದ ರೂಪದಲ್ಲಿ 2900 ರೂ ಹಾಗೂ 8000 ರೂ ಬಂದಿರುತ್ತದೆ. ಹಣವನ್ನು ಅವರು ಮಾಡಿದ್ದು, ಬಳಿಕ ಸೆ.25ರಂದು 2,40,000 ರೂ ಹಣವನ್ನು ಹಾಕಲು ತಿಳಿಸಿದಕ್ಕೆ ವಾಟ್ಸಾಪ್ ಮೂಲಕ ಮೇಸೆಜ್ ಮತ್ತು ಕಾಲ್ ಮಾಡಿ ಹಣವನ್ನು ಹಾಕಿದ್ದಾರೆ. ಝೆನ್ ವಿಸ್ಟ್ ವೆಬ್ ಸೈಟ್ ನಲ್ಲಿರುವ ತನ್ನ ಖಾತೆಯಲ್ಲಿ ವಿದ್ ಪ್ರಾಫಿಟ್ ಎಂದು ತೋರಿಸುತ್ತಿದ್ದು, ಹಣವನ್ನು ವಿದ್ ಡ್ರಾ ಮಾಡಲು ಕೇಳಿದಾಗ ಖಾತೆಯ ಕೊನೆಯ ನಂಬ್ರವನ್ನು ಬದಲಾಯಿಸಿರುವುದು ಕಂಡುಬಂದಿದೆ. ಈ ಬಗ್ಗೆ ಸಂಶಯಗೊಂಡು ವಿಚಾರಿಸಿದಾಗ ಇದೊಂದು ಮೋಸದ ಜಾಲ ಎಂಬುದಾಗಿ ತಿಳಿದುಬಂದ ನಂತರ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.


Be the first to comment on "Dakshina Kannada: ಆನ್ಲೈನ್ ಹೂಡಿಕೆ ಮಾಡಿಸುವುದಾಗಿ ಹೇಳಿ ವಂಚನೆ: ಲಕ್ಷಾಂತರ ರೂ ದೋಖಾ"