ಬಂಟ್ವಾಳ: ಜೇಸಿ ಜೋಡುಮಾರ್ಗ ನೇತ್ರಾವತಿಯಿಂದ ಜೇಸಿ ಸಪ್ತಾಹ ಸೆ.9ರ ಮಂಗಳವಾರದಿಂದ ಆರಂಭಗೊಂಡಿದ್ದು, ಸೆ.15ರವರೆಗೆ ನಡೆಯಲಿದೆ. ಈ ಸಂದರ್ಭ ಜೇಸಿ ಭಾರತದ ಸೂಚನೆ, ಮಾರ್ಗಸೂಚಿಯಂತೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಕುರಿತು ಅಧ್ಯಕ್ಷೆ ತೃಪ್ತಿ ಅವರು ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಸಂಜೆ ಮಾಹಿತಿ ನೀಡಿದರು.


1986ರಲ್ಲಿ ಆರಂಭಗೊಂಡ ಜೋಡುಮಾರ್ಗ ನೇತ್ರಾವತಿ ಸ್ಥಳೀಯ ಸಂಸ್ಥೆಗಳನ್ನು ಬಳಸಿಕೊಂಡು ಸಪ್ತಾಹ ಆಚರಿಸುತ್ತಿದ್ದು, ಕೊಯಿಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಕೋಶಾಧಿಕಾರಿ ರಮ್ಯಾ ಸೋಮಯಾಜಿ ನೇತೃತ್ವದಲ್ಲಿ ಜೇಸಿ ಕುರಿತು ಮಾಹಿತಿ ನೀಡಲಾಯಿತು. ಸೆ.10ರಂದು ಬಂಟ್ವಾಳ ಗಿರಿಗುಡ್ಡೆಯ ಸರಕಾರಿ ಪಾಲಿಟೆಕ್ನಿಕ್ ನಲ್ಲಿ ಜೀವನ ಕೌಶಲ ಕುರಿತು ಪ್ರಾವಿಷನಲ್ ನ್ಯಾಷನಲ್ ತರಬೇತುದಾರ ವಿಕ್ರಮ್ ನಾಯಕ್ ಅವರಿಂದ ತರಬೇತಿ, ಕೊಯಿಲ ಸರಕಾರಿ ಹಿರಯ ಪ್ರಾಥಮಿಕ ಶಾಲೆಯಲ್ಲಿ ಪ್ರವೀಣ್ ಕಾಮತ್ ಅವರಿಂದ ನಿರುದ್ಯೋಗಿಗಳಿಗೆ ಕೌಶಲಾಧಾರಿತ ಕಾರ್ಯಾಗಾರ, ಸೆ.11ರಂದು ಎಕ್ಸ್ ಟ್ರೀಮ್ ಡ್ಯಾನ್ಸ್ ಸ್ಕ್ರೀವ್ ನಲ್ಲಿ ಜುಂಬಾ ಸೆಷನ್, ಕೊಯಿಲ ಶಾಲೆಯಲ್ಲಿ ಯೋಗ ಸ್ಪರ್ಧೆ, ಸೆ.12ರಂದು ಜೇಸಿ ವ್ಯವಹಾರ ರೀಲ್ ಮ್ಯಾರಥಾನ್, ವ್ಯವಹಾರ ನೆಟ್ವರ್ಕಿಕ್ ಸಭೆ ಬಿ.ಸಿ.ರೋಡಿನ ಪ್ರೀತಿ ಕಾಂಪ್ಲೆಕ್ಸ್ ನಲ್ಲಿ , ಸೆ.13ರಂದು ಬಿ.ಸಿ.ರೋಡಿನ ಪ್ರೀತಿ ಕಾಂಪ್ಲೆಕ್ಸ್ ನಲ್ಲಿ ಕರ್ತವ್ಯಕ್ಕಾಗಿ ಧ್ವನಿ ಅಭಿಯಾನ,ಅಂತಾರಾಷ್ಟ್ರೀಯ ಮಾನವ ಕರ್ತವ್ಯಗಳ ಮನವಿಪತ್ರ ಸಹಿ ಅಭಿಯಾನ ಮತ್ತು ನಿಮ್ಮ ಕರ್ತವ್ಯಗಳ ತಿಳಿಯಿರಿ ವಿಷಯದ ತರಬೇತಿ, ಸೆ.14ರಂದು ಯುವಕ, ಯುವತಿಯರಿಗೆ ನಾಯಕತ್ವ, ಜಾಗತಿಕ ಪ್ರಭಾವ ಸೃಷ್ಟಿಸಲು ಪ್ರೇರೇಪಿಸುವ ಕಾರ್ಯಕ್ರಮ, ಸ್ನೇಹಿತರು, ಕುಟುಂಬ, ಸಹೋದ್ಯೋಗಿಗಳಿಗೆ ಜೇಸಿ ಉದ್ದೇಶ ಮತ್ತು ನಾಯಕತ್ವ ತರಬೇತಿ, ಸೆ.15ರಂದು ಎಕ್ಸ್ಟ್ರೀಮ್ ಡ್ಯಾನ್ಸ್ ಸ್ಕ್ರೀವ್ ನ ಬಿ.ಸಿ.ರೋಡ್ ಸಭಾಂಗಣದಲ್ಲಿ ಸಾಂಸ್ಕೃತಿಕ ಸಂಜೆಯ ಪ್ರತಿಭಾ ಪ್ರದರ್ಶನ, ಸದಸ್ಯರಿಗೆ ಗ್ರ್ಯಾಟಿಟ್ಯೂಡ್ ಲೆಟರ್ ವಿತರಣಾ ಕಾರ್ಯ ನಡೆಯಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಝೋನ್ ಆಫೀಸರ್ ಗಾಯತ್ರಿ ಲೋಕೇಶ್, ಪೂರ್ವಾಧ್ಯಕ್ಷ ಜಯಾನಂದ ಪೆರಾಜೆ, ಸದಸ್ಯೆ ತೃಷಾ ಉಪಸ್ಥಿತರಿದ್ದರು.


Be the first to comment on "Bantwal: ಜೇಸಿ ಜೋಡುಮಾರ್ಗ ನೇತ್ರಾವತಿಯಿಂದ ಜೇಸಿ ಸಪ್ತಾಹ, ಕಾರ್ಯಕ್ರಮಗಳು ಹೀಗಿವೆ"