ಮಳೆ ಬಂದ ಮೇಲೆ ಮತ್ತಷ್ಟು ಹದಗೆಟ್ಟ ಬಂಟ್ವಾಳದಿಂದ ಸಿದ್ಧಕಟ್ಟೆವರೆಗಿನ ಹೆದ್ದಾರಿಯ ಮಾರ್ಗದಲ್ಲಿ ಸಂಚರಿಸುವಾಗ ಹುಷಾರು.. ಹೊಂಡಗಳಿವೆ ಎಚ್ಚರಿಕೆ

ರಸ್ತೆಯ ಮೇಲೊಂದು ದೊಡ್ಡ ಹಂಪ್. ವಾಹನದ ಚಕ್ರ ಅದರ ಮೇಲೆ ಬಂದು ಕೆಳಗಿಳಿದರೆ ಹೊಂಡ. ಇದು ಬಂಟ್ವಾಳದಿಂದ ಮೂಡುಬಿದಿರೆಗೆ ಹೊರಟರೆ, ಆರಂಭದಲ್ಲೇ ಬಂಟ್ವಾಳದ ತುಂಬ್ಯ ಜಂಕ್ಷನ್ (ಬೈಪಾಸ್) ನಲ್ಲಿ ದೊರಕುವ ಮೊದಲ ಆಘಾತ. ಹಾಗೆಯೇ ಮುಂದುವರಿದರೆ, ಸಣ್ಣಪುಟ್ಟ ಹೊಂಡಗಳು ಸಿಗುತ್ತವೆ. ಆದರೆ ಲೊರೆಟ್ಟೊ ದಾಟಿ ಸೊರ್ನಾಡು ಪ್ರವೇಶವಾದೊಡನೆ, ರಸ್ತೆ ಶೋಚನೀಯವಾಗುತ್ತದೆ. ರಾಯಿ ಸಮೀಪದವರೆಗೂ ಹೀಗೆಯೇ ಇದೆ.

OPTIC WORLD
ಅತಿಭಾರದ ವಾಹನಗಳ ಸಂಚಾರ, ಆಗಾಗ ರಸ್ತೆಯಂಚಿನಲ್ಲಿ ನಡೆಯುವ ಅನ್ಯಾನ್ಯ ಕಾಮಗಾರಿಗಳು ರಸ್ತೆಯ ಮೇಲೆ ಮತ್ತಷ್ಟು ಹೊಡೆತ ಬಿದ್ದಿವೆ.

ಪ್ರತಿ ವರ್ಷ ಮಳೆಗಾಲದಲ್ಲಿ ಬಂಟ್ವಾಳದಿಂದ ಮೂಡುಬಿದಿರೆಗೆ ಹೋಗಿ ಬರುವವರು ಹಾಗೂ ಆ ಮಾರ್ಗವನ್ನು ಬಳಸುವವರು ಈ ಯಾತನೆಯನ್ನು ಅನುಭವಿಸುತ್ತಿದ್ದಾರೆ. ಹೇಳಿಕೊಳ್ಳಲು ಇದು ರಾಜ್ಯ ಹೆದ್ದಾರಿ. ಆದರೆ ಆಗಾಗ ಹಾಳಾಗುತ್ತಿರುವುದು ವಿಪರ್ಯಾಸ. ಸ್ಥಳೀಯರು ಇವತ್ತಲ್ಲ, ನಾಳೆ ಸರಿಹೋಗುತ್ತದೆ ಎಂಬ ಆಶಾಭಾವನೆ ಹೊಂದಿದ್ದಾರೆ.

ಯಾವ ಕಡೆಯಲ್ಲಿ ಸಮಸ್ಯೆ:
ಬಂಟ್ವಾಳದಿಂದ ಸೊರ್ನಾಡು, ಅಣ್ಣಳಿಕೆ, ಕುದ್ಕುಳಿ, ರಾಯಿವರೆಗಿನ ಭಾಗ ಹದಗೆಟ್ಟ ರಸ್ತೆಯ ಪ್ರತ್ಯಕ್ಷದರ್ಶನ ಮಾಡಿಸುತ್ತವೆ. ಮಳೆ ಬಂದರಂತೂ ಯಾವ ಭಾಗದಲ್ಲಿ ಸಂಚರಿಸಿದರೂ ಹೊಂಡಕ್ಕೆ ಚಕ್ರ ಇಳಿದೇ ಸಾಗುತ್ತದೆ. ಅಣ್ಣಳಿಕೆಯಲ್ಲಂತೂ ರಸ್ತೆಯೇ ಕಾಣಿಸದಾದ ಪರಿಸ್ಥಿತಿ ಇದೆ. ಮುಲಿಯ ಬಸ್ ನಿಲ್ದಾಣದ ಬಳಿ ರಸ್ತೆಯೇ ಕೆತ್ತಿಹೋದಂತಾಗಿದೆ. ಶಾಲಾ, ಕಾಲೇಜುಗಳಿಗೆ ತೆರಳುವ ಮಕ್ಕಳು ಬಸ್ಸುಗಳಿಗೆ ಈ ಹೊಂಡಗಳ ಪಕ್ಕದಲ್ಲೇ ಕಾಯುತ್ತಾರೆ. ಬಹುತೇಕರು ಮೂಡುಬಿದಿರೆ ಅಥವಾ ಬಂಟ್ವಾಳಕ್ಕೆ ತಮ್ಮ ವ್ಯವಹಾರಗಳಿಗಾಗಿ ಸಾಗುತ್ತಾರೆ. ಇಂಥವರಿಗೆಲ್ಲಾ ಹದಗೆಟ್ಟ ರಸ್ತೆ ತಲೆನೋವಿನ ಜೊತೆಗೆ ಬೆನ್ನುನೋವು ತಂದೊದಗಿಸಿದೆ.





Be the first to comment on "Bantwal: ರಸ್ತೆಯಲ್ಲಿ ಸಂಚರಿಸುವಾಗ ಹುಷಾರು… ಹೊಂಡಗಳಿವೆ"