
ಸುಮಾರು 2.2 ಲಕ್ಷ ರೂ ಮೌಲ್ಯದ ಅಡಕೆಯನ್ನು ಮಣಿನಾಲ್ಕೂರು ಗ್ರಾಮದ ಪುಂಜೂರು ಎಂಬಲ್ಲಿ ಜುಲೈ 3ರಿಂದ 22ರ ಅವಧಿಯಲ್ಲಿ ಕಳವು ಮಾಡಲಾದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸುವಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸರ ಯಶಸ್ವಿಯಾಗಿದ್ದಾರೆ.ಆರೋಪಿಗಳಲ್ಲಿ ಒರ್ವನಾದ ಸುಳ್ಯ ತಾಲೂಕಿನ ಪೈಚಾರು ಗ್ರಾಮದ ಸತೀಶ್ (29)ನನ್ನು ದಸ್ತಗಿರಿ ಮಾಡಿ, ಕಳವುಗೈದ ರೂ. 74000 ಮೌಲ್ಯದ 15 ಚೀಲ ಒಣ ಅಡಿಕೆ, ಕಳವು ಅಡಿಕೆಯನ್ನು ಮಾರಾಟ ಮಾಡಿದ ನಗದು ಹಣ ರೂ 70,000 ವನ್ನು ಒಟ್ಟು ಹಾಗೂ ಕೃತ್ಯಕ್ಕೆ ಬಳಸಿದ ಆಪೆ ಗೂಡ್ಸ್ ವಾಹನ ಸೇರಿ 2,24,000 ರೂ ಮೌಲ್ಯದ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ

OPTIC WORLD
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಣಿನಾಲ್ಕೂರು ಗ್ರಾಮದ ಪೂಂಜೂರು ಎಂಬಲ್ಲಿ, ಜುಲೈ 3ರಿಂದ 22ರ ಅವಧಿಯಲ್ಲಿ ಸುಮಾರು 45 ಪ್ಲಾಸ್ಟಿಕ್ ಚೀಲದಲ್ಲಿದ್ದ ರೂ. 2,20,000 ಮೌಲ್ಯದ , ಒಣ ಅಡಿಕೆ ಕಳವಿನ ಬಗ್ಗೆ ಜುಲೈ 23ರಂದು ಪ್ರಕರಣ ದಾಖಲಾಗಿತ್ತು.
ಪತ್ತೆ ಕಾರ್ಯಕ್ಕಾಗಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶಿವಕುಮಾರ ಬಿ. ನೇತೃತ್ವದಲ್ಲಿ, ಉಪನಿರೀಕ್ಷಕರಾದ ಮಂಜುನಾಥ್ ಟಿ. ಎ.ಎಸ್. ಐ. ಜಿನ್ನಪ್ಪ ಗೌಡ, ಪೊಲೀಸ್ ಹೆಡ್ ಕಾನ್ಸ್ಟೇಬಲ್ ಗಳಾದ ರಾಜೇಶ್, ನಝೀರ್, ಲೋಕೇಶ್, ಪ್ರಶಾಂತ ಪೊಲೀಸ್ ಕಾನ್ಸಟೇಬಲ್‌ಗಳಾದ ಮಾರುತಿ, ಹನುಮಂತ ಅವರನ್ನು ಒಳಗೊಂಡ ತನಿಖಾ ತಂಡವು ತನಿಖೆ ನಡೆಸಿತ್ತು. .ಆರೋಪಿಯನ್ನು ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.


Be the first to comment on "Bantwal : ಅಡಿಕೆ ಕಳ್ಳತನ ಪ್ರಕರಣ: ಆರೋಪಿ ಬಂಧನ"