ಅಂದಿನ ಬದುಕಿನ ನೋವು ಕಷ್ಟ ಜೀವನ ಶೈಲಿಗಳು ಇಂದು ಕೂಟ, ದಿನಾಚರಣೆಯ ರೂಪ – 📝ಸುರೇಶ್ ಎಸ್.ನಾವೂರು ಲೇಖನ

ಪ್ರಕೃತಿಯಲ್ಲಿ ಹವಾಮಾನಕ್ಕೆ ಸಂಬಂಧಿಸಿದಂತೆ ಮೂರು ವಿಧಗಳ ಜೊತೆಗೆ ತಿಂಗಳಲ್ಲಿ ವಿಂಗಡಿಸಲಾಗಿದೆ. ಬೇರೆ ಬೇರೆ ತಿಂಗಳುಗಳಿಗೆ ತನ್ನದೇ ಆದ ಮಹತ್ವವಿದೆ.ಇವುಗಳಲ್ಲಿ ಕರ್ಕಾಟಕ ಸಂಕ್ರಮಣದ ಮರುದಿನದಿಂದ ಆರಂಭಗೊಳ್ಳುವ ಆಷಾಢ ತಿಂಗಳು ಕೂಡ ಒಂದು. ಈ ಆಷಾಢ ತಿಂಗಳು ಬದುಕಿನ ಹಲವು ವಿಚಾರಗಳ ವಿವಿಧ ಮಜಲುಗಳಲ್ಲಿ ಬೆಸೆದುಕೊಂಡಿದೆ. – 📝ಸುರೇಶ್ ಎಸ್.ನಾವೂರು ಲೇಖನ

ಜಾಹೀರಾತು

 1. ಕೌಟುಂಬಿಕ ಬದುಕಿನ ಹೊಂದಾಣಿಕೆಗೆ ಸಹಕಾರಿ

ಮದುವೆ ಮಾಡಿಕೊಟ್ಟ‌ ಮನೆ ಮಗಳನ್ನು,ಗಂಡನ ಮನೆಯಿಂದ ತವರು ಮನೆಯ ಕುಟುಂಬದವರು ಹೋಗಿ ಕರೆದುಕೊಂಡು ತವರು ಮನೆಗೆ ಬರುವುದು,ತಿಂಗಳ ಬಳಿಕ ಗಂಡ ಹಾಗೂ ಗಂಡನ ಮನೆಯವರು ಪುನಃ ಗಂಡನ ಮನೆಗೆ ಕರೆದುಕೊಂಡು ಬರುವ   ಸಂಪ್ರದಾಯಗಳು ಇದು ಎರಡು ಮನೆಯ ಕೌಟುಂಬಿಕ ಬದುಕಿನ ಹೊಂದಾಣಿಕೆಗೆ ಸಹಕಾರಿಯಾಗುತ್ತದೆ.

2.ಪ್ರಕೃತಿಯನ್ನು ಕಾಪಾಡುವ ಸಂದೇಶ:

ವಿಶೇಷ ಹೆಚ್ಚಾಗಿ ಆಷಾಢ ತಿಂಗಳಿನಲ್ಲಿಯೇ ಬರುವ ಆಟಿ ಅಮಾವಾಸ್ಯೆ, ನಾಗರ ಪಂಚಮಿ ಹಬ್ಬಗಳು ಪ್ರಕೃತಿ ಆರಾಧನೆಯ ಮಹತ್ವವನ್ನು ಸಾರಿ ಹೇಳುತ್ತದೆ. ಆಷಾಢ ಅಮವಾಸ್ಯೆಯ ಹಬ್ಬದ ದಿನ ನೀರಿನಲ್ಲಿ ದಾನ ಬಿಡುವ ಸಂಪ್ರದಾಯಗಳು ಜಲಚರಗಳಿಗೆ ಆಹಾರವನ್ನು ಸಿಗುವಂತೆ ಮಾಡಿ ಪ್ರಕೃತಿಯ ಸಮತೋಲನವನ್ನು ಕಾಪಾಡುವ ಸಂದೇಶವನ್ನು ಸಮಾಜಕ್ಕೆ ಸಾರುತ್ತದೆ.

3. ಆರೋಗ್ಯ ಹಾಗೂ ಆಹಾರ

ಪ್ರಕೃತಿಯಲ್ಲಿ ಸಿಗುವ ಕೆಸು, ಮರಕೆಸು,ಕನಲೆ,ಸೊನೆ ಸೊಪ್ಪು,ಅಥಾವ  ಹೊನಗೊನ್ನೆ ಸೊಪ್ಪು, ತಗಟೆ ಅಥವಾ ತಗತೆ ಸೊಪ್ಪು,ಅರಸಿನ ಸೊಪ್ಪು, ಕಾಡು ಸುವರ್ಣ ಗಡ್ಡೆ , ಮಣ್ಣಿಗೆ ರಸಾಯನಿಕ ಗೊಬ್ಬರದ ಬಳಕೆಯಿಂದಾಗಿ ಅಪರೂಪವಾದ, ಗದ್ದೆ ತೋಡು ಕೆರೆಯಲ್ಲಿ ಸಿಗುವ ಏಡಿ,ಹಲವು ಜಾತಿಯ ಮೀನು, ಜಗಟೆ ( ನರ್ತೆ)ಗಳು, ಬಳಕೆ ಮಾಡುವ ಪ್ರತಿಯೊಂದು ಆಹಾರ ಪದಾರ್ಥಗಳಲ್ಲಿ ಕೂಡ ಒಂದಲ್ಲ ಒಂದು ರೀತಿಯಲ್ಲಿ ನಮ್ಮದೇಹಕ್ಕೆ ಅಮೂಲ್ಯವಾದ ಜೌಷಧಿ ಸತ್ವಗಳನ್ನು ನೀಡುತ್ತದೆ,ವಿಶೇಷವಾಗಿ ಕೆಲವು ಆಷಾಢದಲ್ಲಿಯೇ ಸಿಗುತ್ತದೆ ಅದೇ ಸಮಯದಲ್ಲಿಯೇ ತಿನ್ನಬೇಕು ಎಂಬುದು ಹಿರಿಯರ ಅನುಭವದ ಅಭಿಪ್ರಾಯಗಳಿಗೆ ಇಂದು ನಡೆಯುವ “ಆಟಿಡೊಂಜಿ ಕೂಟ” ಎಂಬ ದಿನಾಚರಣೆಯ ಕಾರ್ಯಕ್ರಮಗಳು ಸಾಕ್ಷಿಯಾಗಿದೆ.

 4. ಔಷಧಿ ಹಾಗೂ ಪ್ರಕೃತಿ

ಆಷಾಢದಲ್ಲಿರುವ ವಿಶೇಷ ದಿನ ಆಟಿ ಅಮವಾಸ್ಯೆ.ಈ ದಿನ ಪಾಲೆದ ಮರ(ಸಪ್ತಪರ್ಣಿ)  ತೊಗಟೆಯನ್ನು ಕಲ್ಲಿನಿಂದ ಜಜ್ಜಿ ತಂದು ಅವುಗಳಿಗೆ ಕರಿಮೆಣಸು,ಬೆಳ್ಳುಳ್ಳಿ,ಹೋಮ, ಹಾಕಿ ಜೊತೆ ರುಬ್ಬಿ ಬಿಸಿಯಾದ ಬಿಳಿ ಕಲ್ಲಿನ ಶಾಖ ನೀಡಿ ಬಳಿಕ ಕಷಾಯದ ರೂಪದಲ್ಲಿ ಸ್ವೀಕಾರ ಮಾಡುವ ಆಚರಣೆ ಇದು ಪ್ರಕೃತಿಯಿಂದ ಸಿಗುವ ಔಷಧಿಯ ಗುಣದ ಸತ್ವ ಸಾರುತ್ತದೆ.

 5. ಸಂಬಂಧದ ನೆನಪು

ತೀರಿ ಹೋದ ಕಿರಿಯರು ಹಿರಿಯರಿಗೆ ಆಷಾಢ ತಿಂಗಳಲ್ಲಿ ಸಾಗೊನಿ ಮರದ ಎಲೆಯಲ್ಲಿ ಮಡಚಿಟ್ಟ ಹಲಸಿನ ಹಣ್ಣಿನಗಟ್ಟಿ ಯನ್ನು ಅಗೇಲು ಬಡಿಸುವ ಸಂಪ್ರದಾಯಗಳು,ವರ್ಷಕ್ಕೆ ಒಮ್ಮೆಯಾದರೂ ಶಾಶ್ವತವಾಗಿ ದೂರ ಹೋದ ಕುಟುಂಬದವರನ್ನು ನೆನಪಿಸುವ ಕುಟುಂಬದ ಇತರಿಗೆ ಹೆಸರನ್ನು ಸಂಬಂಧವನ್ನು ಪರಿಚಯಿಸುವ ಪ್ರಕ್ರಿಯೆಗಳು ಇಂದಿಗೂ ಕೌಟುಂಬಿಕ ಪದ್ದತಿಯ ಸಾರವನ್ನು ಯುವ ಜನತೆಗೆ ತಿಳಿಸಲು ಸಹಕಾರಿ ಯಾಗಿದೆ.

 ಕೊನೆಯ ಮಾತು :

ಇಂದು ಪರಿಸ್ಥಿತಿಗಳು ಬದಲಾಗಿದೆ. ಅಂದಿನ ಬದುಕಿನ ನೋವು ಕಷ್ಟಗಳು ಜೀವನ ಶೈಲಿಗಳು ಇಂದು ಕೂಟ,ಆಚರಣೆಯ,ರೂಪ ಪಡೆಯಿತು.ಇದು ಅಗತ್ಯವು ಇದೆ.ಯಾಕೆಂದರೆ,ಅತಿಯಾದ ಅಕ್ಷರ ಜ್ಞಾನ ಹೆಚ್ಚಾದಂತೆ,ಜೀವನ ನಿರ್ವಹಣೆಯ ಅಜ್ಞಾನ,ಕಾಡುತ್ತಿರುವಾಗ ಜೀವನದ ಜೀವಸತ್ವಗಳು ಮೌಲ್ಯಗಳು,ಹಾಗೂ ನಂಬಿಕೆ ಸಂಪ್ರದಾಯದ ರೂಪದಲ್ಲಿ ಪರಸರವನ್ನು ಕಾಪಾಡಿಕೊಂಡು ಬರುತ್ತಿದ್ದ ರೀತಿ ನೀತಿಗಳು ಈ ಕಾಲ ಘಟ್ಟಕ್ಕೆ ಅಧ್ಯಯನದ ಪಾಠಗಳು ಎಂಬುದನ್ನು ಸಮಾಜ ಅರಿಯಬೇಕಿದೆ. ಜೋರು ಮಳೆಯಿಂದಾಗಿ ಕೆಲಸ ಇಲ್ಲದ ಅಂದಿನ ದಿನಗಳಲ್ಲಿ ಜಾತಿ ಮತಗಳನ್ನು ಮೀರಿದ ಸಹಕಾರ ನೀಡುತ್ತಿದ್ದ ನಿಷ್ಕಲ್ಮಶ ಭಾವದ ಸಹಾಯ ಹಸ್ತಗಳು, ಸಮಾಜದಲ್ಲಿ ಸಹಬಾಳ್ವೆ ಬೆಸೆದ ಕೊಂಡಿಗಳಾಗಿದ್ದವು.ಇಂದು ಆಚರಣೆಯ ಹೆಸರಿನಲ್ಲಿ ನಡೆಯುವ ಹಲವು ಕಾರ್ಯಕ್ರಮಗಳು ಆಡಂಬರದ ಆಚರಣೆಯಲ್ಲಿ, ಮೂಲ ನಂಬಿಕೆಯ ಕಳೆ ಕಳೆದುಕೊಂಡಿರುವುದು ವಿಪರ್ಯಾಸವೇ ಸರಿ. ಯಾಕೆಂದರೆ ಇಂದು ಆಷಾಢದ ಹೆಸರಿನಲ್ಲಿ ಮಾಡುವ ಕೂಟಗಳು ಆಚರಣೆಗಳು ಕೆಸರುಗದ್ದೆ ಕ್ರೀಡಾ ಕೂಟ ಅಂದು ಕೃಷಿ ಬದುಕಾಗಿತ್ತು. ಆಡಂಬರ ಇಲ್ಲದ ಬಹಳ ನೋವು ಕಷ್ಟ ನಷ್ಟದ ಬಡತನದ ದಿನವಾಗಿತ್ತು.

ಲೇಖನ: 📝ಸುರೇಶ್ ಎಸ್.ನಾವೂರು.

(ಲೇಖಕರು ನಾಟಕ ರಚನೆಗಾರರು, ಸಮುದಾಯ ಕಾರ್ಯನಿರ್ವಾಹಕರು., ಡಾ.ಎ.ವಿ.ಬಾಳಿಗ ಆಸ್ಪತ್ರೆ ದೊಡ್ಡಣಗುಡ್ಡೆ, ಉಡುಪಿ)

ಜಾಹೀರಾತು

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಅಂದಿನ ಬದುಕಿನ ನೋವು ಕಷ್ಟ ಜೀವನ ಶೈಲಿಗಳು ಇಂದು ಕೂಟ, ದಿನಾಚರಣೆಯ ರೂಪ – 📝ಸುರೇಶ್ ಎಸ್.ನಾವೂರು ಲೇಖನ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*