
ಕೆಂಪುಕಲ್ಲು ಮತ್ತು ಮರಳಿನ ಅಭಾವದಿಂದ ಕಾರ್ಮಿಕರಿಗೆ ಕೆಲಸ ಲಭಿಸುತ್ತಿಲ್ಲ, ಇದರಿಂದ ಕಾರ್ಮಿಕರಿಗೆ ತೀವ್ರ ತೊಂದರೆ ಆಗುತ್ತಿದೆ ಎಂದು ವಿಟ್ಲದಲ್ಲಿ ಬಿಎಂಎಸ್ ವತಿಯಿಂದ ಉಪತಹಸೀಲ್ದಾರ್ ಅವರಿಗೆ ಮನವಿ ಅರ್ಪಿಸಲಾಯಿತು.

OPTIC WORLD
ವಿಟ್ಲ ಬಿಎಂಎಸ್ ನ ಅಧ್ಯಕ್ಷ ನಾಗೇಶ್ ಸುವರ್ಣ, ಪ್ರಧಾನ ಕಾರ್ಯದರ್ಶಿ ಸಂತೋಷ್ ಕೆಲಿಂಜ ನೇತೃತ್ವ ವಹಿಸಿದ್ದರು. ಜಿಲ್ಲೆಯಲ್ಲಿ ತಲೆದೋರಿರುವ ಕೆಂಪುಕಲ್ಲು ಹಾಗೂ ಮರಳಿನ ಅಭಾವದ ಸಮಸ್ಯೆಯನ್ನು ದ.ಕ.ಜಿಲ್ಲಾಧಿಕಾರಿಗಳು ಬಗೆಹರಿಸಿ ಕಟ್ಟಡ ಕಾರ್ಮಿಕರಿಗೆ ಜೀವನ ನಿರ್ವಹಿಸಲು ಅನುವು ಮಾಡಿಕೊಡುವಂತೆ ಒತ್ತಾಯಿಸಲಾಯಿತು. ಈ ಸಂದರ್ಭ ಬಿಎಂಎಸ್ ನ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಸಂತ ಕುಮಾರ್ ಮಣಿಹಳ್ಳ, ಸಹಿತ ಪ್ರಮುಖರಾದ ಪರಮೇಶ್ವರ್, ಸಂತೋಷ್ ಕೆಲಿಂಜ, ಪುಷ್ಪರಾಜ್ ಕೆಲಿಂಜ, ಶಿವಪ್ರಸಾದ್ ಕಟ್ಟೆ, ಅನಂತೇಶ್, ಸಚ್ಚಿದಾನಂದ ಮತ್ತಿತರರು ಉಪಸ್ಥಿತರಿದ್ದರು.


Be the first to comment on "ಕೆಂಪುಕಲ್ಲು, ಮರಳಿನ ಅಭಾವ – ವಿಟ್ಲದಲ್ಲಿ ಮನವಿ ಅರ್ಪಿಸಿದ ಬಿಎಂಎಸ್ ಸಂಘಟನೆ"