
ಬಿ.ಸಿ.ರೋಡಿನ ತುಳು ಶಿವಳ್ಳಿ ಸಭಾಭವನದಲ್ಲಿ ವಿಶ್ವಭಾರತಿ ಯಕ್ಷ ಸಂಜೀವಿನಿ ಟ್ರಸ್ಟ್ ಮುಡಿಪು ಅವರಿಂದ ತುಳು ಶಿವಳ್ಳಿ ಸೇವಾ ಟ್ರಸ್ಟ್ ಬಂಟ್ವಾಳ ತಾಲೂಕು ಸಹಭಾಗಿತ್ವದಲ್ಲಿ ಭಾರತ ದರ್ಶನ ಎಂಬ ಯಕ್ಷಗಾನ ತಾಳಮದ್ದಳೆ ನವಾಹ ನಡೆಯಲಿದೆ. ಜುಲೈ 19ರಂದು ಆರಂಭಗೊಂಡು 27ರವರೆಗೆ ಈ ಸರಣಿ ಕಾರ್ಯಕ್ರಮ ನಡೆಯಲಿದ್ದು, 27ರಂದು ಸಮಾರೋಪದ ದಿನ ಕುಬಣೂರು ಸ್ಮರಣೆ ಕಾರ್ಯಕ್ರಮ ನಡೆಯಲಿದೆ. ಪ್ರತಿದಿನ ಸಂಜೆ 4 ಗಂಟೆಗೆ ತಾಳಮದ್ದಳೆ ನಡೆಯುತ್ತದೆ ಎಂದು ವಿಶ್ವಭಾರತಿ ಸಂಚಾಲಕ ಪ್ರಶಾಂತ್ ಹೊಳ್ಳ ತಿಳಿಸಿದ್ದಾರೆ.
ಕುಬಣೂರು ಸ್ಮರಣೆ:

ಜುಲೈ 27ರಂದು ಕರ್ಣಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ ತಾಳಮದ್ದಳೆ ಹಾಗೂ ಹಿರಿಯ ಭಾಗವತ ಕೀರ್ತಿಶೇಷ ಕುಬಣೂರು ಶ್ರೀಧರ ರಾವ್ ನೆನಪು ಕಾರ್ಯಕ್ರಮ ನಡೆಯಲಿದೆ. ವಿಶ್ವಭಾರತಿ ಯಕ್ಷ ಸಂಜೀವಿನಿ ಟ್ರಸ್ಟ್ (ರಿ) ಮುಡಿಪು ವತಿಯಿಂದ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಜುಲೈ 27ರಂದು ಸಂಜೆ 4ರಿಂದ ಕಾರ್ಯಕ್ರಮ ನಡೆಯುವುದು.
ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಲಿದೆ. ಹಿರಿಯ ಅರ್ಥಧಾರಿ ಜಬ್ಬಾರ್ ಸಮೋ ಅವರು ಕೀರ್ತಿಶೇಷ ಕುಬಣೂರು ಶ್ರೀಧರ ರಾವ್ ಅವರ ಸ್ಮೃತಿಯನ್ನು ಮಾಡಲಿದ್ದಾರೆ. ಮಾಜಿ ಸಚಿವ ಬಿ.ರಮಾನಾಥ ರೈ, ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಟಿ.ಶ್ಯಾಮ ಭಟ್, ಮಂಗಳೂರಿನ ಮಾಂಡವಿ ಮೋಟರ್ಸ್ ಸೇಲ್ಸ್ ಡಿಜಿಎಂ ಶಶಿಧರ ಕಾರಂತ, ಯಕ್ಷಗಾನ ಸಂಘಟಕ ಭುಜಬಲಿ ಧರ್ಮಸ್ಥಳ, ಸಜಿಪ ಶ್ರೀ ಷಣ್ಮುಖ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್, ಯಕ್ಷಗಾನ ಮಹಾಪೋಷಕ ಅರವಿಂದ ಹೊಳ್ಳ ಬೆಂಗಳೂರು, ಯಕ್ಷಗಾನ ಅಕಾಡೆಮಿ ಸದಸ್ಯ ಕೃಷ್ಣಪ್ಪ ಕಿನ್ಯ, ಗುರುರಾಜ ಭಟ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ತಾಳಮದ್ದಳೆಯಲ್ಲಿ ಕಲಾವಿದರಾಗಿ ಗಿರೀಶ್ ರೈ ಕಕ್ಯಪದವು, ಜನಾರ್ದನ ತೋಳ್ಪಡಿತ್ತಾಯ, ಸೀತಾರಾಮ ತೋಳ್ಪಡಿತ್ತಾಯ (ಹಿಮ್ಮೇಳ), ಕೆ.ಗೋವಿಂದ ಭಟ್, ಸುಣ್ಣಂಬಳ ವಿಶ್ವೇಶ್ವರ ಭಟ್, ಜಬ್ಬಾರ್ ಸಮೊ, ಗುಂಡ್ಯಡ್ಕ ಈಶ್ವರ ಭಟ್, ಪ್ರಶಾಂತ್ ಹೊಳ್ಳ, ಭಾಸ್ಕರ ರೈ ಕುಕ್ಕುವಳ್ಳಿ, ಉದಯ ವೆಂಕಟೇಶ ಭಟ್, ರವಿರಾಜ ಶೆಟ್ಟಿ ಪೆರುವಾಯಿ, ಕುಶಲ ಮುಡಿಪು (ಅರ್ಥಧಾರಿಗಳು) ಭಾಗವಹಿಸಲಿದ್ದಾರೆ ಎಂದು ವಿಶ್ವಭಾರತಿ ಯಕ್ಷಸಂಜೀವಿನಿ ಟ್ರಸ್ಟ್ ನ ಪ್ರಶಾಂತ್ ಹೊಳ್ಳ ತಿಳಿಸಿದ್ದಾರೆ.
ಯಕ್ಷಗಾನ ತಾಳಮದ್ದಳೆ ನವಾಹ:
ವಿಶ್ವಭಾರತಿ ಯಕ್ಷ ಸಂಜೀವಿನಿ ಟ್ರಸ್ಟ್ ಮುಡಿಪು ಅವರಿಂದ ತುಳು ಶಿವಳ್ಳಿ ಸೇವಾ ಟ್ರಸ್ಟ್ ಬಂಟ್ವಾಳ ತಾಲೂಕು ಸಹಭಾಗಿತ್ವದಲ್ಲಿ ಭಾರತ ದರ್ಶನ ಎಂಬ ಯಕ್ಷಗಾನ ತಾಳಮದ್ದಳೆ ನವಾಹ ನಡೆಯಲಿದೆ. ಜುಲೈ 19ರಂದು ಆರಂಭಗೊಂಡು 27ರವರೆಗೆ ಈ ಸರಣಿ ಕಾರ್ಯಕ್ರಮ ನಡೆಯಲಿದ್ದು, 27ರಂದು ಸಮಾರೋಪದ ದಿನ ಕುಬಣೂರು ಸ್ಮರಣೆ ಕಾರ್ಯಕ್ರಮ ನಡೆಯಲಿದೆ. ಪ್ರತಿದಿನ ಸಂಜೆ 4 ಗಂಟೆಗೆ ತಾಳಮದ್ದಳೆ ನಡೆಯುತ್ತದೆ.
19ರಂದುಇ ಸಂಜೆ ಯಕ್ಷದಶಾವತಾರಿ ಕೆ.ಗೋವಿಂದ ಭಟ್ ದೀಪಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ತುಳು ಶಿವಳ್ಳಿ ಸಂಘ ಅಧ್ಯಕ್ಷ ರಾಜಾರಾಮ ಭಟ್ ಅಧ್ಯಕ್ಷತೆ ವಹಿಸುವರು. ಅಂದು ಭೀಷ್ಮವಿಜಯ ತಾಳಮದ್ದಳೆ ಮಹಮ್ಮಾಯಿ ಯಕ್ಷಗನಾ ಕಲಾ ಸಂಘ ಬಾಯಾರುಪದವು ಅವರಿಂದ ನಡೆಯಲಿದೆ. 20ರಂದು 4.30ರಿಂದ ಬೊಳುವಾರು ಆಂಜನೇಯ ಯಕ್ಷಗಾನ ಕಲಾ ಸಂಘದ ವತಿಯಿಂದ ಪಾರ್ಥಸಾರಥ್ಯ, 21ರಂದು ಮಂಜೇಶ್ವರ ಮಜಿಬೈಲು ಶ್ರೀ ವಿಷ್ಣು ಯಕ್ಷ ಬಳಗದಿಂದ ಶ್ರೀಕೃಷ್ಣ ಸಂಧಾನ ತಾಳಮದ್ದಳೆ, 22ರಂದು ವಿಶ್ವಭಾರತಿ ಯಕ್ಷಸಂಜೀವಿನಿ ಟ್ರಸ್ಟ್ ಮುಡಿಪು ಅವರಿಂದ ಕರ್ಣಬೇಧನ, 23ರಂದು ಭೀಷ್ಮಸೇನಾಧಿಪತ್ಯ, 24ರಂದು ಭೀಷ್ಮಾರ್ಜುನ, 25ರಂದು ಮೀಯಪದವು ಮಂಜೇಶ್ವರ ಗುರುನರಸಿಂಹ ಯಕ್ಷಬಳಗದಿಂದ ಅಭಿಮನ್ಯು ಕಾಳಗ, 26ರಂದು ಸುಪ್ರಸಿದ್ಧ ಕಲಾವಿದರಿಂದ ಕರ್ಣಾರ್ಜುನ ತಾಳಮದ್ದಳೆ ನಡೆಯಲಿದೆ. 27ರಂದು ಸಮಾರೋಪದಲ್ಲಿ ಗದಾಯುದ್ಧ ತಾಳಮದ್ದಳೆ ನಡೆಯುವುದು ಎಂದು ಪ್ರಶಾಂತ್ ಹೊಳ್ಳ ತಿಳಿಸಿದ್ದಾರೆ.


Be the first to comment on "Bantwal: ಜುಲೈ 19ರಿಂದ 27ರವರೆಗೆ ಯಕ್ಷಗಾನ ಸರಣಿ ತಾಳಮದ್ದಳೆ – ಭಾರತ ದರ್ಶನ, 27ರಂದು ಕುಬಣೂರು ಶ್ರೀಧರ ರಾವ್ ಸ್ಮರಣೆ – Details"