ಬಂಟ್ವಾಳ ತಾಲೂಕು ಕೃಷಿ ಇಲಾಖೆ ವತಿಯಿಂದ ೨೦೨೫-೨೬ನೇ ಸಾಲಿನ ನೈಸರ್ಗಿಕ ಕೃಷಿ ರಾಷ್ಟ್ರೀಯ ಅಭಿಯಾನ ಎನ್‌ಎಂಎನ್‌ಎಫ್ ಕಾರ್ಯಕ್ರಮವು ಬಂಟ್ವಾಳ ತಾಲೂಕಿನ ೫ ಗ್ರಾ.ಪಂ.ಗಳಲ್ಲಿ ಚಾಲ್ತಿಯಲ್ಲಿದ್ದು, ಶುಕ್ರವಾರ ನರಿಕೊಂಬು ಗ್ರಾ.ಪಂ.ಕಚೇರಿಯಲ್ಲಿ ಕೃಷಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶ್ ಕೆ.ಎ. ಅವರು ಉದ್ಘಾಟಿಸಿದರು. ಗ್ರಾ.ಪಂ.ಅಧ್ಯಕ್ಷ ಸಂತೋಷ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅರುಂಧತಿ ಒಕ್ಕೂಟದ ಅಧ್ಯಕ್ಷೆ ವಿದ್ಯಾ ಪುಷ್ಪರಾಜ್, ಕೃಷಿ ಅಽಕಾರಿ ನಂದನ್ ಶೆಣೈ ಪಿ, ತೋಟಗಾರಿಕಾ ಅಽಕಾರಿ ಹರೀಶ್‌ಕುಮಾರ್, ಕೃಷಿ ಇಲಾಖೆ ಸಿಬಂದಿ ಹನುಮಂತ ಕಾಳಗಿ, ವೀಣಾ ಡಿಸೋಜ, ಪ್ರವೀಣ್‌ಕುಮಾರ್ ಉಪಸ್ಥಿತರಿದ್ದರು.
ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಪ್ರವೀಣ್ ಹಾಗೂ ವನಿತಾ ಕಾರ್ಯಕ್ರಮ ನೆರವೇರಿಸಿದರು. ವೀರಕಂಭ ಸಿಆರ್‌ಪಿ ಪುಷ್ಪಾವತಿ ಕಾರ್ಯಕ್ರಮ ನಿರ್ವಹಿಸಿದರು.
Be the first to comment on "Narikombu: ನರಿಕೊಂಬು ಗ್ರಾಪಂನಲ್ಲಿ ನೈಸರ್ಗಿಕ ಕೃಷಿ ರಾಷ್ಟ್ರೀಯ ಅಭಿಯಾನ"