ಗೊಬ್ಬರದ ಗುಂಡಿಗೆ ಬಿದ್ದು ಎರಡು ವರ್ಷದ ಮಗು ಸಾವನ್ನಪ್ಪಿದ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳವಳ್ಳಿ ಎಂಬಲ್ಲಿ ನಡೆದಿದೆ.
ಹಳವಳ್ಳಿ ಗ್ರಾಮದ ಮೂಲೆಮನೆಯ ಶ್ರೀಕಾಂತ್ ಹೆಬ್ಬಾರ ಮತ್ತು ರೂಪಾ ದಂಪತಿ ಪುತ್ರಿ ಸಾಧ್ವಿ 2 ವರ್ಷ ಮೂರು ತಿಂಗಳು) ಮೃತಪಟ್ಟ ಮಗು.
ಎಂದಿನಂತೆ ಗುರುವಾರ ಬೆಳಗ್ಗೆ ಸಾಧ್ವಿ ಅಪ್ಪನ ಜತೆ ಕೊಟ್ಟಿಗೆ ಬಳಿಗೆ ತೆರಳಿದ್ದು, ತಂದೆ ಕೆಲಸದಲ್ಲಿ ತೊಡಗಿದ್ದಾಗ ಅಲ್ಲೇ ಆಟವಾಡಿಕೊಂಡಿದ್ದಳು. ಸ್ವಲ್ಪ ಹೊತ್ತು ಕಳೆದಾಗ ಮಗುವಿನ ದನಿ ಕೇಳಿಸದೇ ಇದ್ದಾಗ, ಶ್ರೀಕಾಂತ್ ಕೊಟ್ಟಿಗೆ ಸುತ್ತಮುತ್ತ ಹುಡುಕಿದ್ದಾರೆ. ಈ ಸಂದರ್ಭ, ಮಗು, ಸಮೀಪದಲ್ಲಿದ್ದ ಗೊಬ್ಬರದ ಗುಂಡಿಗೆ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಮೇಲಕ್ಕೆತ್ತಿ ತಾಲೂಕು ಆಸ್ಪತ್ರೆಗೆ ಕರೆತಂದರೂ ಪ್ರಯೋಜನವಾಗಲಿಲ್ಲ.
In a tragic incident, a two–year–old baby girl died after falling into a manure pit at Halavalli under Dongri gram panchayat limits in Ankola taluk of Uttara Kannada district. The deceased has been identified as Sadhvi, daughter of Srikanth Hebbar and Roopa, a resident of Halavalli village.
As usual, on Thursday morning, the sadhvi went to the shed with her father and played there while her father was at work. When the child‘s voice was not heard after some time, Srikanth searched around the shed. the child was found lying in a compost pit nearby. She was immediately lifted up and brought to the taluk hospital but to no avail.
Be the first to comment on "ಗೊಬ್ಬರದ ಗುಂಡಿಗೆ ಬಿದ್ದು ಎರಡು ವರ್ಷದ ಮಗು ಸಾವು"