ಬಂಟ್ವಾಳ: ಕಲ್ಲಡ್ಕದ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲಾ ಪ್ರವೇಶೋತ್ಸವ ಶಾಲೆಯಲ್ಲಿ ನಡೆಯಿತು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಶುಭ ಹಾರೈಸಿದರು.
ಮಹಾರಾಷ್ಟ್ರದ ಘಾಟ್‌ಕೋಪರ್ ಶಾಸಕ ಪರಾಗ್ ಷಾ, ನಟ ನಿರ್ಮಾಪಕ ಮತ್ತು ಚಿತ್ರಕಥೆಗಾರ ಪ್ರಕಾಶ್ ಬೆಳವಾಡಿ, ಮುಂಬಯಿಯ ಉದ್ಯಮಿಗಳಾದ ಕಿರಣ್ ಶೆಟ್ಟಿ, ನಿದರ್ಶನ್ ಗುವಾನಿ, ಹೀರೇನ್ ಭಾಯಿ, ಬಾಲಕೃಷ್ಣ ಭಂಡಾರಿ, ಮುಂಬಯಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಎನ್.ಬಿ.ಶೆಟ್ಟಿ, ಶ್ರೀರಾಮ ವಿದ್ಯಾಕೆಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಶ್ರೀರಾಮ ವಿದ್ಯಾಕೆಂದ್ರದ ಸಂಚಾಲಕ ವಸಂತ ಮಾಧವ, ಸಹ ಸಂಚಾಲಕ ರಮೇಶ್ ಎನ್, ರಾಷ್ಟ್ರ ಸೇವಿಕಾ ಸಮಿತಿಯ ಕಾರ್ಯಕಾರಿಣಿ ಸದಸ್ಯೆ ಡಾ. ಕಮಲಾ ಪ್ರಭಾಕರ್ ಭಟ್ ಹಾಗೂ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು. ಈ ಸಂಧರ್ಭ ಶ್ರೀ ರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿಯ ಸದಸ್ಯರಾದ ಲಕ್ಷ್ಮೀ ರಘುರಾಜ್ , ಮಲ್ಲಿಕಾ ಆರ್ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿಯ ಸದಸ್ಯ ಚಂದ್ರಶೇಖರ ಸಾಲ್ಯಾನ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ತನ್ಮಯಿ ರೈ ನಿರೂಪಿಸಿ, ಪ್ರಾಪ್ತಿ ಸ್ವಾಗತಿಸಿ, ಧನ್ಯ ವಂದಿಸಿದರು.
Be the first to comment on "ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲಾ ಪ್ರವೇಶೋತ್ಸವ"