ವಿಟ್ಲ-ಸಾಲೆತ್ತೂರು ರಸ್ತೆಯ ಕಾಡುಮಠ ಅಳ್ಳಿಗಂಡೆ ರಸ್ತೆ ತಿರುವಿನಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿದು ವಿದ್ಯುತ್ ಕಂಬಗಳಿಗೆ ಹಾನಿಯಾಗಿ ವಾಹನ ಸಂಚಾರ ಅರ್ಧ ದಿನ ಸ್ಥಗಿತಗೊಂಡಿತು. ಕಾಡುಮಠ ಅಳ್ಳಿಗಂಡೆ ಎಂಬಲ್ಲಿನ ಅಪಾಯಕಾರಿಯಾಗಿರುವ ರಸ್ತೆ ತಿರುವಿನಲ್ಲಿ ಶನಿವಾರ ತಡರಾತ್ರಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿದಿದೆ
ರಸ್ತೆ ಬದಿಯ ವಿದ್ಯುತ್ ಕಂಬಗಳ ಮೇಲೆ ಮರಗಳು ಬಿದ್ದ ಪರಿಣಾಮ ವಿದ್ಯುತ್ ಸಂಚಾರ ವ್ಯತ್ಯಯಗೊಂಡಿತು. ರಾತ್ರಿಯೇ ಅಗ್ನಿಶಾಮಕ, ಮೆಸ್ಕಾಂ ಇಲಾಖೆಯ ಸಿಬ್ಬಂದಿಗಳು, ವಿಟ್ಲ ಪೊಲೀಸರು ಆಗಮಿಸಿ ತಾತ್ಕಾಲಿಕ ಪರಿಹಾರ ಕೈಗೊಂಡಿದ್ದಾರೆ.
ಭಾನುವಾರ ದಿನವಿಡೀ ವಿಟ್ಲ ಕಂದಾಯ ನಿರೀಕ್ಷಕರು, ಕೊಳ್ನಾಡು ಗ್ರಾಮ ಪಂಚಾಯತಿ ಆಡಳಿತಾಧಿಕಾರಿ ಹಾಗೂ ಸಾಲೆತ್ತೂರು ಮೆಸ್ಕಾಂ ಅಧಿಕಾರಿ, ಸಿಬ್ಬಂದಿಗಳುತೆರವು ಕಾರ್ಯಾಚರಣೆ ನಡೆಸಿ ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು. ಅಧಿಕಾರಿಗಳ ಜೊತೆ ಸ್ಥಳೀಯರು ಸಹಕರಿಸಿದರು.
Be the first to comment on "ಕಾಡುಮಠ: ಗುಡ್ಡ ಕುಸಿದು ವಿದ್ಯುತ್ ಕಂಬಗಳಿಗೆ ಹಾನಿ, ವಾಹನ ಸಂಚಾರ ಸ್ಥಗಿತ"