ಮಂಗಳೂರು: ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ (ಕೆ.ಜಿ.ಟಿ.ಟಿ.ಐ.)ಯಲ್ಲಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳ ಆಸಕ್ತ ಅರ್ಹ ಅಭ್ಯರ್ಥಿಗಳಿಗೆÀ ಉಚಿತ ಕೌಶಲ್ಯ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

ADVERTISMENT
ಸಿಸ್ಕೊ ಸರ್ಟಿಫೈಡ್ ನೆಟ್‍ವರ್ಕ್ ಅಸೋಸಿಯೇಟ್ (ಸಿ.ಸಿ.ಎನ್.ಎ), ಸಿಸ್ಕೊ ಐ.ಟಿ. ಎಸೆನ್ಸಿಯಲ್ಸ್, ಬೇಸಿಕ್ ವೆಲ್ಡಿಂಗ್, ಟಿಗ್ ವೆಲ್ಡಿಂಗ್, ಮಿಗ್ ವೆಲ್ಡಿಂಗ್, ರೆಫ್ರಿಜರೇಶನ್ ಮತ್ತು ಏರ್ ಕಂಡೀಷನಿಂಗ್, ಟ್ಯಾಲಿ ಪ್ರೈಮ್ ಹಾಗೂ ಕಾರ್ಕಳದ ಸರ್ಕಾರಿ ಪಾಲಿಟೆಕ್ನಿಕ್ ಆವರಣದಲ್ಲಿರುವ ಕೆಜಿಟಿಟಿಐ ವಿಸ್ತರಣಾ ಕೇಂದ್ರದಲ್ಲಿ ಹೆಚ್ಚುವರಿಯಾಗಿ ಸಿ.ಎನ್.ಸಿ ಮಿಲ್ಲಿಂಗ್, ಸಿ.ಎನ್.ಸಿ ಟರ್ನಿಂಗ್, ಮಾಸ್ಟರ್ ಕ್ಯಾಮ್ ಮತ್ತು ಕ್ಯಾಟಿಯಾ ಅಲ್ಪಾವಧಿ ಕೋರ್ಸ್‍ಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಅರ್ಹ ಅಭ್ಯರ್ಥಿಗಳು ಮಂಗಳೂರಿನ ಕದ್ರಿ ಹಿಲ್ಸ್‍ನಲ್ಲಿರುವ ಮಹಿಳಾ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಎರಡನೇ ಮಹಡಿಯಲ್ಲಿರುವ ಅಥವಾ ಕಾರ್ಕಳದಲ್ಲಿರುವ ಕೆಜಿಟಿಟಿಐ ಕಛೇರಿಯಿಂದ ಅರ್ಜಿ ಪಡೆದು ತರಬೇತಿಗೆ ಹೆಸರು ನೊಂದಾಯಿಸಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 0824-2211477, 08258-200451 ಸಂಪರ್ಕಿಸಬಹುದು ಎಂದು ಮಂಗಳೂರು ಕೆ.ಜಿ.ಟಿ.ಟಿ.ಐ ನಿರ್ದೇಶಕ ಡಾ. ಗಿರಿಧರ್ ಸಾಲಿಯಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Be the first to comment on "ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಿಗೆ ಉಚಿತ ಅಲ್ಪಾವಧಿ ಕೌಶಲ್ಯ ತರಬೇತಿ"