ದೇಶಕ್ಕೆ ಆಪತ್ತು ತಂದವರ ಸರ್ವನಾಶ ; ಸೈನಿಕರಿಗೆ ಶ್ರೀರಕ್ಷೆ ನೀಡುವಂತೆ ನೆಟ್ಲ ದೇವಸ್ಥಾನದಲ್ಲಿ ಅಮ್ಟೂರು ಬಿಜೆಪಿಯಿಂದ ವಿಶೇಷ ಪೂಜೆ, ಪ್ರಾರ್ಥನೆ

ಬಂಟ್ವಾಳ: ದೇಶಕ್ಕೆ ಆಪತ್ತು ತಂದವರ ಸರ್ವನಾಶವಾಗಬೇಕು, ಭಾರತಕ್ಕೆ ವಿಜಯದ ಸಿಂದೂರವನ್ನು ಇಟ್ಟ ಸೈನಿಕರ ಶ್ರೀರಕ್ಷೆಯಾಗಬೇಕು ಎಂದು ಪ್ರಾರ್ಥಿಸಿ, ಭಾಠತಕ್ಕೆ ವಿಜಯ ತಂದುಕೊಡುವಂತೆ ಮೊಗರ್ನಾಡು ಸಾವಿರ ಸೀಮೆಯ ಒಡೆಯ ನಿಟಿಲಾಕ್ಷ ಸದಾಶಿವ ದೇವರ ಸನ್ನಿಧಿಯಲ್ಲಿ ಅಮ್ಟೂರು ಬಿಜೆಪಿ ವತಿಯಿಂದ ಶನಿವಾರ ವಿಶೇಷ ಪೂಜೆ, ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

ಜಾಹೀರಾತು

ಭಾರತ ಮಾತೆಗೆ ವಿಜಯದ ಸಿಂಧೂರವಿಟ್ಟ ಭಾರತ ದೇಶದ ಸೈನಿಕರಿಗೆ ಬಲ ನೀಡಬೇಕು, ಭವ್ಯ ಭಾರತದ ಸ್ವಾಭಿಮಾನದ ಬದುಕಿನಲ್ಲಿ ದುಷ್ಟತನದ ಅಟ್ಟಹಾಸ ಮೆರೆದ ಪಾಕಿಸ್ತಾನದ ಶತ್ರುಗಳ ಸಂಹಾರಕ್ಕೆ ಮತ್ತು ಪಾಕಿಸ್ತಾನದ ಪರವಿರುವ ದೇಶ ವಿರೋಧಿಗಳನ್ನ ಸಂಪೂರ್ಣವಾಗಿ ನಾಶಗೊಳಿಸುವಂತೆ ಆಮ್ಟೂರು ಬಿಜೆಪಿ ಸಮಿತಿಯ ವತಿಯಿಂದ ಮೋಗರ್ನಾಡು ಸಾವಿರ ಸೀಮೆಯ ಒಡೆಯ ನೀಟಿಲಾಕ್ಷ ಸದಾಶಿವ ದೇವರ ಸನ್ನಿಧಿಯಲ್ಲಿ  ಕ್ಷೇತ್ರದ ಪ್ರಧಾನ ಅರ್ಚಕರಾದ ಸಂಪ್ರೀತ್ ಭಟ್ ಇವರು ವಿಶೇಷ ಪೂಜೆ ಪ್ರಾರ್ಥನೆಯ ಮೂಲಕ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭ ಬಿಜೆಪಿಯ ಜಿಲ್ಲಾ ಕಾರ್ಯದರ್ಶಿ ದಿನೇಶ್ ಅಮ್ಟೂರು.  ಬಿಜೆಪಿಯ ಹಿರಿಯ ನಾಯಕರಾದ  ವಿಠಲ ಪ್ರಭು. ಬಿಜೆಪಿಯ ಪ್ರಮುಖರಾದ ಬಿ ಎನ್ ಪ್ರಭಾಕರ ಶೆಟ್ಟಿ ಬೈದರಡ್ಕ. ಶೇಖರ್ ಕೊಟ್ಟಾರಿ. ಮಹಾಬಲ ಸಾಲಿಯನ್. ನವೀನ್ ಶೆಟ್ಟಿ ನೆಟ್ಲ. ನವೀನ್ ಗಟ್ಟಿ ನೆಟ್ಲ. ಗುರುವಪ್ಪ ಗೌಡ ನೆಟ್ಲ.  ಪ್ರೇಮ ಗುರುಪ್ರಸಾದ್. ಸಂದೀಪ್ ಶೆಟ್ಟಿ ಬೈದರಡ್ಕ. ಕೌಶಿಲ್ ಶೆಟ್ಟಿ ಬಾಳಿಕೆ.  ಹರಿಣಾಕ್ಷಿ ನೆಟ್ಲ. ಪ್ರಶಾಂತ್ ನಾಯ್ಕ್ ನೆಟ್ಲ. ಕಿಶೋರ್ ಕಟ್ಟೆಮಾರ್.  ದಿವಾಕರ ಪಡಿಲ್.  ಅಮಿತ್ ಕಲ್ಲಡ್ಕ.  ದೇವಕಿ ದಿವಾಕರ ಪೂಜಾರಿ. ಕಾರ್ತಿಕ್ ಕುಲಾಲ್. ವಿಶ್ವನಾಥ್ ಕುಲಾಲ್.  ತ್ರಿವೇಣಿ ದಿನೇಶ್  ಮತ್ತು ಪ್ರಮುಖ ಕಾರ್ಯಕರ್ತರು  ಉಪಸ್ಥಿತರಿದ್ದರು.

ಜಾಹೀರಾತು

About the Author

Harish Mambady
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ದೇಶಕ್ಕೆ ಆಪತ್ತು ತಂದವರ ಸರ್ವನಾಶ ; ಸೈನಿಕರಿಗೆ ಶ್ರೀರಕ್ಷೆ ನೀಡುವಂತೆ ನೆಟ್ಲ ದೇವಸ್ಥಾನದಲ್ಲಿ ಅಮ್ಟೂರು ಬಿಜೆಪಿಯಿಂದ ವಿಶೇಷ ಪೂಜೆ, ಪ್ರಾರ್ಥನೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*