ಪುಂಜಾಲಕಟ್ಟೆ ಸೌಹಾರ್ಧ ಫ್ರೆಂಡ್ಸ್ ವತಿಯಿಂದ ದ.ಕ.ಜಿಲ್ಲಾ ಕಬಡ್ಡಿ ಎಸೋಸಿಯೇಶನ್ ಸಹಕಾರದಲ್ಲಿ ಸಾಮಾಜಿಕ ಸೇವಾಕರ್ತ ದಿ.ಸಿಲ್ವೆಸ್ಟರ್ ಪಿಂಟೋ ನಯನಾಡು ಅವರ ಸ್ಮರಣಾರ್ಥ 55 ಕೆ.ಜಿ. ಮತ್ತು ಗ್ರಾಮ ಸೀಮಿತ ಮುಕ್ತ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ ಎ.17ರಂದು ಪುಂಜಾಲಕಟ್ಟೆ ಬಂಗ್ಲೆ ಮೈದಾನದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಅದ್ಯಕ್ಷ ಸುಧಾಕರ ಶೆಣೈ ಖಂಡಿಗ ಅವರು ತಿಳಿಸಿದ್ದಾರೆ.
ಜಾಹೀರಾತು
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಂಜೆ 6 ಗಂಟೆಗೆ ಕಾರ್ಯಕ್ರಮವನ್ನು ಮಾಜಿ ಸಚಿವ ಬಿ.ರಮಾನಾಥ ರೈ ಅವರು ಉದ್ಘಾಟಿಸಲಿರುವರು.ಈಗಾಗಲೇ ಸುಮಾರು 50ರಿಂದ 60 ತಂಡಗಳ ನೋಂದಾವಣಿ ಆಗಿದೆ. ಪಂದ್ಯಾಕೂಟ ವೀಕ್ಷಣೆಗೆ ಆಕರ್ಷಕ ಗ್ಯಾಲರಿ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ ಅವರು ಪಂದ್ಯಾಕೂಟವನ್ನು ವಿಭಿನ್ನವಾಗಿ ನಡೆಸಲಾಗುವುದು
ಮಹಿಳೆಯರಿಗೆ ಆಸನ, ವಾಹನ ವ್ಯವಸ್ಥೆ ಕಲ್ಪಿಸಲಾಗುವುದು. ಈ ಸಂದರ್ಭ ಸಾಧಕ ಕಬಡ್ಡಿ ಆಟಗಾರರಿಗೆ ಗೌರವಾರ್ಪಣೆಯೂ ನಡೆಯಲಿದೆ ಎಂದರು.. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಜಿಪಂ ಮಾಜಿ ಸದಸ್ಯ ಬಿ.ಪದ್ಮಶೇಖರ ಜೈನ್, ಮಹಮ್ಮದ್ ನಂದಾವರ, ಇಲ್ಯಾಸ್ ಬಸವನಗುಡಿ, ನೆಲ್ವಿಸ್ಟರ್ ಗ್ಲ್ಯಾನ್ ಪಿಂಟೋ ಉಪಸ್ಥಿತರಿದ್ದರು.
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಸೌಹಾರ್ದ ಫ್ರೆಂಡ್ಸ್, ಪುಂಜಾಲಕಟ್ಟೆ ವತಿಯಿಂದ ಎ.17ರಂದು ಪುಂಜಾಲಕಟ್ಟೆಯಲ್ಲಿ ಮ್ಯಾಟ್ ಕಬಡ್ಡಿ ಪಂದ್ಯಾಟ"
Be the first to comment on "ಸೌಹಾರ್ದ ಫ್ರೆಂಡ್ಸ್, ಪುಂಜಾಲಕಟ್ಟೆ ವತಿಯಿಂದ ಎ.17ರಂದು ಪುಂಜಾಲಕಟ್ಟೆಯಲ್ಲಿ ಮ್ಯಾಟ್ ಕಬಡ್ಡಿ ಪಂದ್ಯಾಟ"