ಕಲ್ಲಡ್ಕ ಸಮೀಪ ನೆಟ್ಲ ನಿಟಿಲಾಪುರದ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನ ಸನ್ನಿಧಿಯಲ್ಲಿ ನಡೆಯಲಿರುವ ಅತಿಮಹಾರುದ್ರಯಾಗದ ಪೂರ್ವಭಾವಿ ಸಭೆ ಏಪ್ರಿಲ್ 13ರಂದು ಬೆಳಗ್ಗೆ 10ಕ್ಕೆ ದೇವಸ್ಥಾನ ವಠಾರದಲ್ಲಿ ನಡೆಯಲಿದೆ.

ವರುಣ್ ಕಲ್ಲಡ್ಕ ಚಿತ್ರ
ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಥಮವೆಂಬಂತೆ ನಡೆಯುತ್ತಿರುವ ಈ ಯಾಗಕ್ಕೆ ಜಿಲ್ಲೆಯ ಸ್ವಯಂಸೇವಾ ಸಂಘಗಳು, ಮಹಿಳಾ ಸಮಿತಿಗಳು ಭಜನಾ ಮಂದಿರದ ಸದಸ್ಯರುಗಳು ಭಾಗವಹಿಸಬೇಕು ಎಂದು ಸಮಿತಿ ಕೋರಿದೆ. ಭಾನುವಾರ ಕ್ಷೇತ್ರದಲ್ಲಿ ಸುಮಾರು 150 ವೈದಿಕರಿಂದ ವಿಶೇಷ ರುದ್ರಪಾರಾಯಣ ನಡೆಯಲಿದೆ. ಕ್ಷೇತ್ರದಲ್ಲಿ ನಿತ್ಯ ಅನ್ನಸಂತರ್ಪಣೆ ಜರುಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.
ಶ್ರೀ ನಿಟಿಲಾಕ್ಷ ಸದಾಶಿವ ದೇವರ ವಠಾರದಲ್ಲಿ ನಡೆಯಲಿರುವ ಅತಿಮಹಾರುದ್ರ ಯಾಗದ ರುದ್ರಪಾರಾಯಣ ಕಾರ್ಯಕ್ರಮದ ಶನಿವಾರದ ದೀಪ ಪ್ರಜ್ವಲನೆಯನ್ನು ರಘುರಾಮ್ ರಾವ್ ಮಂಗಳೂರು, ಜಯರಾಮ್ ಗಟ್ಟಿ ನೆಟ್ಲಾ ಮಾಡಿದರು. ಈ ವೇಳೆ ಜಿ. ವಿ ಫ್ರೆಂಡ್ಸ್, ಯಕ್ಷಗಾನ ಬಯಲಾಟ ಸಮಿತಿ ಮಾರ್ನಬೈಲ್, ಸೂರ್ಯನಾರಾಯಣ ಸೇವಾ ಬಳಗ ಮರೋಲಿ, ಯಾಗ ಸಮಿತಿ ಸದಸ್ಯರು, , ಇತರ ಪ್ರಮುಖರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.
Be the first to comment on "ಅತಿಮಹಾರುದ್ರಯಾಗ: ನೆಟ್ಲದಲ್ಲಿ ಪೂರ್ವಭಾವಿ ಸಭೆ"