ಉಡುಪಿ: ಕರಾವಳಿಯ ಪ್ರಸಿದ್ಧ ಪುಣ್ಯಕ್ಷೇತ್ರ ಹಾಗೂ ಶ್ರೀಕೃಷ್ಣನ ಸನ್ನಿಧಿ ಉಡುಪಿಯ ಶ್ರೀಕೃಷ್ಣಮಠದ ರಥಬೀದಿಯಲ್ಲಿ ಇನ್ನು ಪ್ರೀವೆಡ್ಡಿಂಗ್ ಸಹಿತ ಫೊಟೋ ಶೂಟ್ ಗೆ ಅವಕಾಶವಿಲ್ಲ.
ಶ್ರೀಕೃಷ್ಣ ಮಠದ ಪರಿಸರದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿದ್ದ ಪ್ರಿವೆಡ್ ಫೋಟೋ ಶೂಟ್ ಗೆ ದೇವಸ್ಥಾನದ ಆಡಳಿತ ಮಂಡಳಿಯಿಂದ ನಿರ್ಬಂಧ ಹೇರಲಾಗಿದೆ..ದೇವಸ್ಥಾನದ ಪಾವಿತ್ರ್ಯತೆ ರಕ್ಷಣೆ ಮತ್ತು ಭಕ್ತರಿಗಾಗುವ ಮುಜುಗರದ ಪರಿಸ್ಥಿತಿ ಹಾಗೂ ಸಾರ್ವಜನಿಕರಿಂದ ಬಂದ ದೂರಿನನ್ವಯ ಈ ಕ್ರಮ ಕೈ ಗೊಳ್ಳಲಾಗಿದೆ ಎಂದು ಮಠದ ವಕ್ತಾರರು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪ್ರೀ ವೆಡ್ಡಿಂಗ್ ಶೂಟ್ ದೇವಾಲಯದ ಆವರಣಕ್ಕೂ ಕಾಲಿಟ್ಟಿದೆ. ಇದರಿಂದ ಮುಜುಗರದ ಸನ್ನಿವೇಶ ಎದುರಾಗಿದೆ. ಪ್ರೀವೆಡ್ಡಿಂಗ್ ಶೂಟ್, ಇತ್ತೀಚೆಗೆ ಮದುವೆಗೂ ಮುಂಚೆ ಮಾಡಲಾಗುತ್ತದೆ.ಉಡುಪಿ ಶ್ರೀ ಕೃಷ್ಣ ಮಠದ ರಥಬೀದಿಯಲ್ಲಿರುವ ಕನಕಗೋಪುರ, ಅಷ್ಟಮಠಗಳ ಎದುರು, ಪವಿತ್ರ ರಥದ ಬಳಿ ಹೀಗೆ ರಥಬೀದಿ ಸುತ್ತಲೂ ಬೆಳ್ಳಂಬೆಳಗ್ಗೆ ಮದುವೆಯಾಗುವ ಜೋಡಿಗಳು ಹಾಜರಾಗ್ತಾರೆ. ಅಷ್ಟಾದರೆ ಸಮಸ್ಯೆ ಇಲ್ಲ, ಕೈ ಕೈ ಹಿಡಿದು ಎತ್ತಿಕೊಂಡು ಮುದ್ದಾಡುವಷ್ಡರ ಮಟ್ಟಿಗೆ ಪ್ರೀವೆಡ್ಡಿಂಗ್ ಫೋಟೋಶೂಟ್ ನಡೆಯುತ್ತದೆ. ಪಾರ್ಕ್, ಬೀಚ್, ಬೆಟ್ಟ ಗುಡ್ಡ, ಫಾಲ್ಸ್ ಬಳಿಯಲ್ಲಿ ಫೋಟೋ ಶೂಟ್ ಮಾಡುವುದು ಈಗ ಸಾಮಾನ್ಯವಾಗಿದೆ. ಅದೀಗ ಮಠದ ರಥಬೀದಿವರೆಗೂ ಬಂದಿದೆ. ಇಲ್ಲಿ ಧಾರ್ಮಿಕ ವಿದ್ವಾಂಸರು, ಅಷ್ಟ ಮಠಾಧೀಶರು, ಭಕ್ತರು, ಮಹಿಳೆಯರು ಆಗಮಿಸುತ್ತಾರೆ. ಅವರಿಗೆ ಇದು ಮುಜುಗರಕ್ಕೀಡು ಮಾಡುತ್ತಿದೆ.
Be the first to comment on "ಉಡುಪಿ ರಥಬೀದಿಯಲ್ಲಿ ಪ್ರಿವೆಡ್ಡಿಂಗ್ ಫೊಟೋಶೂಟ್ ನಿಷೇಧ – ಕಾರಣವೇನು?"