ಕಲ್ಲಡ್ಕದ ಶ್ರೀ ಶಾರದ ಸೇವಾ ಪ್ರತಿಷ್ಠಾನ ಆಶ್ರಯದಲ್ಲಿ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ಸಹಯೋಗದೊಂದಿಗೆ ಕಲ್ಲಡ್ಕದ ಸಂತೆಕಟ್ಟೆಯಲ್ಲಿ ದ್ವಿತೀಯ ಬಾರಿಗೆ ಆಧಾರ್ ಮೇಳ ಮತ್ತು ಅಂಚೆ ಇಲಾಖೆಯ ಅಪಘಾತ ವಿಮೆಯ ನೊಂದಾವಣೆಯು ನಡೆಯಿತು.
ಗೋಳ್ತಮಜಲು ಪಂಚಾಯತ್ ಅಧ್ಯಕ್ಷರಾದ ಪ್ರೇಮ ಪುರುಸೋತ್ತಮ್ ಆಧಾರ್ ಮೇಳವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕೊಳಕೀರು ತುಡರ್ ನ ಅಧ್ಯಕ್ಷರಾದ ಶಿವಪ್ರಸಾದ್ ಕೊಟ್ಟಾರಿ ಈ ರೀತಿಯ ಜನೋಪಯೋಗಿ ಕಾರ್ಯ ಪ್ರತಿಷ್ಠಾನದ ಕಡೆಯಿಂದ ನಿರಂತರ ನಡೆಯಲಿ ಎಂದರು. ಅಂಚೆ ವಿಭಾಗದ ಮುಖ್ಯಸ್ಥರಾದ ನೂತನ್ ಬಂಗೇರ ಆಧಾರ್ ತಿದ್ದುಪಡಿ ಮತ್ತು ನೊಂದಾವಣೆ ಮತ್ತು ದುರಾದೃಷ್ಟಕರ ಘಟನೆಯಿಂದ ಸುರಕ್ಷತೆ ಪಡೆಯುವುದಕ್ಕಾಗಿ ಅಪಘಾತ ವಿಮೆಯ ಪ್ರಯೋಜನ ಹೇಗೆ ಪಡೆಯಬಹುದೆಂಬುದನ್ನು ಹೇಳಿದರು.
ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡ ಪಂಚಾಯತ್ ಸದಸ್ಯರಾದ ರಾಜೇಶ್ ಕೊಟ್ಟಾರಿ, ಲಖಿತ ಆರ್ ಶೆಟ್ಟಿ, ಲೀಲಾವತಿ ಇವರನ್ನು ವಿಟ್ಲದ ಮಾಜಿ ಶಾಸಕರಾದ ಎ ರುಕ್ಮಯ ಪೂಜಾರಿಯವರು ಅಭಿನಂದಿಸಿ ಸನ್ಮಾನಿಸಲಾಯಿತು. ಕಲ್ಲಡ್ಕ ಬ್ಯಾಂಕ್ ಅಪ್ ಬರೋಡದ ಹಿರಿಯ ಪ್ರಬಂಧಕರಾದ ನಾಗರಾಜ ಗೌಡರ್ ಅಧ್ಯಕ್ಷತೆ ವಹಿಸಿ ಆಧಾರ್ ಕಾರ್ಡ್ ನಮ್ಮ ಬದುಕಿನ ಮತ್ತು ಭವಿಷ್ಯದ ಆಧಾರ. ಆಧಾರ ಸರಿ ಇದ್ದರೆ ಬದುಕು ಚೆನ್ನಾಗಿರುವಂತೆ ಆಧಾರ್ ಕಾರ್ಡ್ ಸರಿ ಇದ್ದರೆ ಭವಿಷ್ಯವೂ ಚೆನ್ನಾಗಿರುತ್ತದೆ. ಇ ನಿಟ್ಟಿನಲ್ಲಿ ಪ್ರತಿಷ್ಠಾನವೂ ಜನೋಪಯೋಗಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಶುಭ ಹಾರೃಸಿದರು.
ವೇದಿಕೆಯಲ್ಲಿ ರೂಪ ಸೈಕಲ್ ಮಾರ್ಟ್ ನ ನೋಣಯ ಪೂಜಾರಿ, ನಿತ್ಯಾನಂದ ಟಯರ್ಸ್ ನ ಲೋಕೇಶ್ ಪೂಜಾರಿ, ದುರ್ಗಾ ಜೆರಾಕ್ಸಿನ ವಿನೋದ್ ಮುರಬೈಲು, ಉತ್ಸವ ಸಮಿತಿಯ ಅದ್ಯಕ್ಷರಾದ ಯೋಗೀಶ್ ಪೂಜಾರಿ ಉಪಸ್ಥಿತರಿದ್ದರು. ಪ್ರತಿಷ್ಠಾನದ ಅದ್ಯಕ್ಷರಾದ ಯತೀನ್ ಕುಮಾರ್ ಪ್ರಾಸ್ತವಿಕ ಮಾತಿನೊಂದಿಗೆ ಸ್ವಾಗತಿಸಿ ಪ್ರಧಾನ ಕಾರ್ಯದರ್ಶಿ ವಜ್ರನಾಥ ಕಲ್ಲಡ್ಕ ವಂದಿಸಿದರು. ಕೋಶಾದಿಕಾರಿ ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ಶಾರದಾ ಸೇವಾ ಪ್ರತಿಷ್ಠಾನ ಆಶ್ರಯದಲ್ಲಿ ಆಧಾರ್ ಮೇಳ, ವಿಮೆ ನೋಂದಣಿ"