ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಯಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಶ್ರೀಚಕ್ರ ಪೂಜೆ ನಡೆಯಿತು. ಬ್ರಹ್ಮಶ್ರೀ ವೇ.ಮೂ.ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ಸಂಗೀತ, ಭಜನೆ, ಯಕ್ಷಗಾನ, ನೃತ್ಯ, ನಾದ ಸಹಿತ ಅಷ್ಟಾವಧಾನ ಸೇವೆಗಳು ಹಾಗೂ ನವವರಣ ಕೀರ್ತನೆಗಳೊಂದಿಗೆ ಪೂಜೆ ನಡೆಯಿತು.
ಈ ಸಂದರ್ಭ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ. ರಮೇಶಾನಂದ ಸೋಮಯಾಜಿ, ಕಾರ್ಯಾಧ್ಯಕ್ಷ ಸಂಜೀವ ಪೂಜಾರಿ ಗುರುಕೃಪಾ, ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿ ಸೇವಾ ಸಮಿತಿ ಅಧ್ಯಕ್ಷ ಬಿ.ವಿಶ್ವನಾಥ್, ಕಾರ್ಯದರ್ಶಿ ಎನ್. ಶಿವಶಂಕರ್, ಕೋಶಾಧಿಕಾರಿ ಬಿ.ಮೋಹನ್, ಸೇವಾ ಸಮಿತಿ ಪದಾಧಿಕಾರಿಗಳು, ಅರ್ಚಕ ರಘುಪತಿ ಭಟ್, ಪ್ರಮುಖರಾದ ಚಂದ್ರಹಾಸ ಶೆಟ್ಟಿ ರಂಗೋಲಿ, ಅಶ್ವನಿ ಕುಮಾರ್ ರೈ, ಐತಪ್ಪ ಪೂಜಾರಿ, ನಾರಾಯಣ ಹೆಗ್ಡೆ ಸಹಿತ ಪ್ರಮುಖರು ಉಪಸ್ಥಿತರಿದ್ದರು. ಮಂಗಳವಾರ ಬೆಳಗ್ಗೆ ಅನುಜ್ಞಾಕಲಶಾಭಿಷೇಕ, ಸಂಜೆ ಧಾರ್ಮಿಕ ಸಭೆ ನಡೆಯಲಿದ್ದು, ಮಧ್ಯಾಹ್ನ ಯಕ್ಷತೆಲಿಕೆ, ಸಂಜೆ ಪುತ್ತೂರು ಶ್ರೀದೇವಿ ನೃತ್ಯಾರಾಧನಾ ಕೇಂದ್ರದಿಂದ ನೃತ್ಯರಂಜಿನಿ, ರಾತ್ರಿ 8ರಿಂದ ಕಲಾನಿಕೇತನ ಕಲ್ಲಡ್ಕದಿಂದ ನೃತ್ಯಸಿಂಚನ ನಡೆಯಲಿದೆ. ಬುಧವಾರ ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮ ನಡೆಯಲಿದೆ.
Be the first to comment on "ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಯಲ್ಲಿ ಶ್ರೀಚಕ್ರಪೂಜೆ"