ವಕೀಲರ ಸಂಘ) ಬಂಟ್ವಾಳದ 2024-25ನೇ ಸಾಲಿನ ವಾರ್ಷಿಕ ಸ್ನೇಹ ಮಿಲನ ಕಾರ್ಯಕ್ರಮ ಬಿಸಿರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಿತು.ಉದ್ಘಾಟಿಸಿದ ಬೆಂಗಳೂರು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಅಮೃತ ಎಸ್.ರಾವ್ ಮಾತನಾಡಿ, ಕೆಲಸದ ಮೇಲೆ ಪ್ರೀತಿಯಿಟ್ಟು ಕಾರ್ಯನಿರ್ವಹಿಸಿದಾಗ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ರಿಚರ್ಡ್ ಕೋಸ್ತಾ ಎಂ. ಮಾತನಾಡಿ, ವಕೀಲರ ಸಂಘದ ಶ್ರೇಯೋಭಿವೃದ್ದಿಗಾಗಿ ಸಮಯವನ್ನು ಮೀಸಲಿಟ್ಟು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದೇನೆ ಎಂದರು.ಮುಖ್ಯ ಅತಿಥಿಗಳಾಗಿ ಪ್ರಧಾನ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ.ಎಮ್.ಎಫ್ ಸಿ ಭಾಗ್ಯಮ್ಮ , ಹೆಚ್ಚುವರಿ ಸಿವಿಲ್ ಜಡ್ಹ್, ಮತ್ತು ಜೆ.ಎಮ್.ಎಪ್ ಸಿ ಬಂಟ್ವಾಳ ಕೃಷ್ಣಮೂರ್ತಿ ಎನ್, ನಿವೃತ್ತ ನ್ಯಾಯಾಧೀಶ ಎನ್.ಶ್ರೀವತ್ಸ ಕೆದಿಲಾಯ, ನಿವೃತ್ತ ನ್ಯಾಯಾಧೀಶ ಕೆ.ರಾಧಾಕೃಷ್ಣ ,ನಿವೃತ್ತ ನ್ಯಾಯಾಧೀಶ ಹಾಗೂ ಹಿರಿಯ ನ್ಯಾಯವಾದಿ ಬಿ.ಗಣೇಶಾನಂದ ಎನ್.ಸೋಮಯಾಜಿ, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಚ್.ವಿ.ರಾಘವೇಂದ್ರ, ವಕೀಲರ ಸೌಹಾರ್ದ ಸಹಕಾರಿ ಸಂಘ (ರಿ) ಮಂಗಳೂರು ಅಧ್ಯಕ್ಷ ವಿನಯ ಕುಮಾರ್ ಉಪಸ್ಥಿತರಿದ್ದರು. ವಕೀಲ ವೃತ್ತಿಜೀವನದ ನಿವೃತ್ತಿಯನ್ನು ಪಡೆದ ನ್ಯಾಯವಾದಿ ಜತ್ತನಕೋಡಿ ಶಂಕರ್ ಭಟ್ ಅವರನ್ನು ಸನ್ನಾನಿಲಾಯಿತು. ಹಿರಿಯ ನ್ಯಾಯವಾದಿ ಜಯರಾಮ ರೈ ಸ್ವಾಗತಿಸಿದರು. ಅಭಿನಯ ಚಿದಾನಂದ ವಂದಿಸಿದರು ವಾರ್ಷಿಕ ವರದಿಯನ್ನು ಸಂಘದ ಕಾರ್ಯದರ್ಶಿ ಚಂದ್ರಶೇಖರ್ ಬೈರಿಕಟ್ಟೆ ವಾಚಿಸಿದರು. ವಕೀಲರಾದ ನಿತಿನ್ ಹಾಗೂ ಅಭಿನಯ ಚಿದಾನಂದ ಅವರು ಕಾರ್ಯಕ್ರಮ ನಿರೂಪಿಸಿದರು.
Be the first to comment on "ಬಂಟ್ವಾಳ ವಕೀಲರ ಸಂಘದ ವಾರ್ಷಿಕ ಸ್ನೇಹಮಿಲನ"