ಬಂಟ್ವಾಳ: ಜೋಡುಮಾರ್ಗ ಜೇಸಿ ವತಿಯಿಂದ ಶನಿವಾರ ಮಜಿ ವೀರಕಂಭ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಹಸ್ತಾಂತರಿಸುವ ಮೂಲಕ ವಿಶ್ವ ಜಲ ದಿನ ಆಚರಿಸಲಾಯಿತು.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಜೇಸಿ ರಾಷ್ಟ್ರೀಯ ಉಪಾಧ್ಯಕ್ಷ ಜಿ.ಎಸ್.ಎನ್. ವರ್ಮಾ ಹಸ್ತಾಂತರಿಸಿ ಮಾತನಾಡಿ ನೀರಿನ ಮಹತ್ವವನ್ನು ವಿವರಿಸಿದರು.ಮುಖ್ಯ ಶಿಕ್ಷಕಿ ಬೆನೆಡಿಕ್ಟ ನೊರೊನ್ಹಾ ಹಾಗೂ ಶಿಕ್ಷಕವೃಂದಕ್ಕೆ ಘಟಕವನ್ನು ಹಸ್ತಾಂತರಿಸಲಾಯಿತು. ಶಿಕ್ಷಕಿ ಸಂಗೀತಾ ಶರ್ಮ ಮಾತನಾಡಿ ವಿಶ್ವ ಜಲದಿನವಾದ ಇಂದು ಶಾಲೆ ಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಿರುವುದು ಅರ್ಥಪೂರ್ಣವಾಗಿದೆ ಎಂದರು. ಈ ಸಂದರ್ಭ ಜೇಸಿ ವಲಯಾಧ್ಯಕ್ಷ ಅಭಿಲಾಷ್ ಬಿ.ಎ, ವಲಯ ಉಪಾಧ್ಯಕ್ಷ ಸುಹಾಸ್ ಮರಿಕೆ, ರಂಜಿತ್ ಎಚ್.ಡಿ, ವಲಯ ನಿರ್ದೇಶಕ ಅಜಿತ್ ರೈ, ವಿಘ್ನೇಶ್ ಪ್ರಸಾದ್ ರಾವ್, ಕಾಶಿನಾಥ್ ಗೋಗಟೆ, ವಲಯ ಸಂಯೋಜಕರಾದ ಸುಮಾ ಆಚಾರ್ಯ, ವಿನೀತ್ ಶಗ್ರಿತ್ತಾಯ, ಮಂಜುನಾಥ್, ಪ್ರಚಿತ್, ಗಾಯತ್ರಿ ಲೋಕೇಶ್, ಜೋಡುಮಾರ್ಗ ಜೇಸಿ ಅಧ್ಯಕ್ಷೆ ತೃಪ್ತಿ, ಪಿ, ನಿಕಟಪೂರ್ವಾಧ್ಯಕ್ಷ ಎಂ.ಸುಬ್ರಹ್ಮಣ್ಯ ಪೈ, ಪೂರ್ವಾಧ್ಯಕ್ಷರಾದ ಅಹಮದ್ ಮುಸ್ತಾಫ, ಜಯಾನಂದ ಪೆರಾಜೆ, ಕಾರ್ಯಕ್ರಮ ನಿರ್ದೇಶಕ ನಿಕೇಶ್ ಕೆ, ಜೋಡುಮಾರ್ಗ ಜೇಸಿಯ ಹರೀಶ್ ಮಾಂಬಾಡಿ, ಕಿಶೋರ್, ಸಮತಾ ಕಿಶೋರ್, ಹಿರಿಯ ವಿದ್ಯಾರ್ಥಿ ಚಿನ್ನ ಮೈರ ಉಪಸ್ಥಿತರಿದ್ದರು.
Be the first to comment on "ಜೋಡುಮಾರ್ಗ ಜೇಸಿಯಿಂದ ಮಜಿ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಹಸ್ತಾಂತರ ಮೂಲಕ ವಿಶ್ವ ಜಲ ದಿನ ಆಚರಣೆ"