ಬಂಟ್ವಾಳ: ಜೋಡುಮಾರ್ಗ ಜೇಸಿ ವತಿಯಿಂದ ಕೊಡುಗೆಯಾಗಿ ನೀಡಿದ ಸ್ಮಾರ್ಟ್ ಟಿ.ವಿ.ಯನ್ನು ಬಂಟ್ವಾಳ ತಾಲೂಕಿನ ಕೊಯಿಲ ಸರಕಾರಿ ಹೈಸ್ಕೂಲ್ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಜೇಸಿ ರಾಷ್ಟ್ರೀಯ ಉಪಾಧ್ಯಕ್ಷ ಜಿ.ಎಸ್.ಎನ್. ವರ್ಮಾ ಹಸ್ತಾಂತರಿಸಿದರು. ಈ ಸಂದರ್ಭ ಮಾತನಾಡಿದ ಅವರು, ಸರಕಾರಿ ಶಾಲಾ ಮಕ್ಕಳು ಕಲಿಕೆಯಲ್ಲಿ ಮತ್ತಷ್ಟು ಪ್ರಗತಿಯನ್ನು ಹೊಂದಲು ಹಾಗೂ ಆಧುನಿಕ ತಂತ್ರಜ್ಞಾನಗಳನ್ನು ಉಪಯೋಗಿಸಿ ಜಾಗತಿಕ ವಿದ್ಯಮಾನಗಳನ್ನು ಅರಿತುಕೊಳ್ಳಲು ಸ್ಮಾರ್ಟ್ ಟಿವಿ ಪ್ರಯೋಜನಕಾರಿಯಾಗಿದೆ ಎಂದು ಶುಭ ಹಾರೈಸಿದರು.
ಕೊಯಿಲ ಸರಕಾರಿ ಹೈಸ್ಕೂಲ್ ಮುಖ್ಯ ಶಿಕ್ಷಕಿ ಸೌಜನ್ಯಾ ಹಾಗೂ ಶಿಕ್ಷಕವೃಂದಕ್ಕೆ ಟಿ.ವಿ.ಯನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭ ಜೇಸಿ ವಲಯಾಧ್ಯಕ್ಷ ಅಭಿಲಾಷ್ ಬಿ.ಎ, ವಲಯ ಉಪಾಧ್ಯಕ್ಷ ಸುಹಾಸ್ ಮರಿಕೆ, ರಂಜಿತ್ ಎಚ್.ಡಿ, ವಲಯ ನಿರ್ದೇಶಕ ಅಜಿತ್ ರೈ, ವಿಘ್ನೇಶ್ ಪ್ರಸಾದ್ ರಾವ್, ಕಾಶಿನಾಥ್ ಗೋಗಟೆ, ವಲಯ ಸಂಯೋಜಕರಾದ ಸುಮಾ ಆಚಾರ್ಯ, ವಿನೀತ್ ಶಗ್ರಿತ್ತಾಯ, ಮಂಜುನಾಥ್, ಪ್ರಚಿತ್, ಗಾಯತ್ರಿ ಲೋಕೇಶ್, ಜೋಡುಮಾರ್ಗ ಜೇಸಿ ಅಧ್ಯಕ್ಷೆ ತೃಪ್ತಿ, ಪಿ, ನಿಕಟಪೂರ್ವಾಧ್ಯಕ್ಷ ಎಂ.ಸುಬ್ರಹ್ಮಣ್ಯ ಪೈ, ಪೂರ್ವಾಧ್ಯಕ್ಷರಾದ ಅಹಮದ್ ಮುಸ್ತಾಫ, ಜಯಾನಂದ ಪೆರಾಜೆ, ಕಾರ್ಯಕ್ರಮ ನಿರ್ದೇಶಕ ನಿಕೇಶ್ ಕೆ, ಜೋಡುಮಾರ್ಗ ಜೇಸಿಯ ಹರೀಶ್ ಮಾಂಬಾಡಿ, ಕಿಶೋರ್, ಸಮತಾ ಕಿಶೋರ್, ಶಿಕ್ಷಕಿ ಹಾಗೂ ಜೇಸಿ ಕೋಶಾಧಿಕಾರಿ ರಮ್ಯಾ ಸೋಮಯಾಜಿ, ಶಿಕ್ಷಕರಾದ ಸೌಮ್ಯಾ ಎಚ್, ಜ್ಯೋತಿ ಕುಮಾರಿ, ಜನಾರ್ದನ, ಧನಂಜಯ ಪಿ, ಪ್ರವೀಣ್ ಕಾಮತ್, ರಮೇಶ್ ಮಯ್ಯ, ಆಶಾಲತಾ, ದೀಪ್ತಿ ಅತಿಕಾರಿ, ಪ್ರಶ್ನಿತಾ ಈ ಸಂದರ್ಭ ಉಪಸ್ಥಿತರಿದ್ದರು. ಶಿಕ್ಷಕ ರಮೇಶ್ ಮಯ್ಯ ಶಾಲಾ ಚಟುವಟಿಕೆಗಳಿಗೆ ಜೇಸಿ ನೀಡಿದ ಕೊಡುಗೆಗೆ ಕೃತಜ್ಞತೆ ಸಲ್ಲಿಸಿದರು. ಜೋಡುಮಾರ್ಗ ಜೇಸಿ ಅಧ್ಯಕ್ಷೆ ತೃಪ್ತಿ ಪಿ ಸ್ವಾಗತಿಸಿದರು. ಪೂರ್ವಾಧ್ಯಕ್ಷ ಅಹಮದ್ ಮುಸ್ತಫಾ ವಂದಿಸಿದರು.
Be the first to comment on "ಕೊಯಿಲ ಸರಕಾರಿ ಹೈಸ್ಕೂಲ್ ಗೆ ಜೋಡುಮಾರ್ಗ ಜೇಸಿಯಿಂದ ಸ್ಮಾರ್ಟ್ ಟಿ.ವಿ.ಹಸ್ತಾಂತರ"