ಮಂಗಳೂರು: ಕಲರ್ಸ್ ಕನ್ನಡ, ಸದಾ ಪ್ರೇಕ್ಷಕರ ಹೃದಯವನ್ನು ಮುಟ್ಟುವ ಮನಮಿಡಿಯುವ ಕತೆಗಳ ಮೂಲಕ ಜನಪ್ರಿಯವಾಗಿದೆ. ಇದೀಗ, ನ್ಯಾಯ ಮತ್ತು ಅಧಿಕಾರದ ಮುಖಾಮುಖಿಯಾಗುವ ಹೃದಯಸ್ಪರ್ಶಿ ಕತೆ ‘ಭಾರ್ಗವಿ ಎಲ್ ಎಲ್ ಬಿ ’ಪ್ರೇಕ್ಷಕರಿಗೆ ತಲುಪಿಸುತ್ತಿದೆ. ಈ ಬಹು ನಿರೀಕ್ಷಿತ ಧಾರಾವಾಹಿ ಮಾ.3 ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ 8.30ಕ್ಕೆ ನಿಮ್ಮ ಕಲರ್ಸ್ ಕನ್ನಡದಲ್ಲಿ ಪ್ರಸಾರಗೊಳ್ಳಲಿದೆ.

https://www.opticworld.net/
ಈ ಕಥೆ, ಧೈರ್ಯಶಾಲಿ ಹಾಗೂ ಮಧ್ಯಮ ವರ್ಗದ ಯುವತಿ ಭಾರ್ಗವಿ ಮತ್ತು ಅತ್ಯಂತ ಪ್ರಭಾವಶಾಲಿ ಮತ್ತು ಬಲಿಷ್ಠ ವಕೀಲ ಜಯಪ್ರಕಾಶ್ ಪಾಟೀಲ್ ನಡುವಿನ ಸ್ವಾಭಿಮಾನದ ಮಹಾ ಸಂಘರ್ಷದ ಕಥೆ ಹೇಳುತ್ತದೆ. ಭಾರ್ಗವಿಯ ಲಾಯರ್ ತಂದೆಯನ್ನು ಕೋರ್ಟಿನಲ್ಲಿ ಹೀನಾಯವಾಗಿ ಅವಮಾನಿಸಿ ತಲೆ ತಗ್ಗಿಸುವ ಹಾಗೆ ಮಾಡಿ ವಕೀಲಿಕೆಯನ್ನೇ ತ್ಯಜಿಸುವಂತೆ ಮಾಡಿದವನು ಜೆ.ಪಿ. ಪಾಟೀಲ್. ತನ್ನ ವೃತ್ತಿಜೀವನದಲ್ಲಿ ಒಂದೇ ಒಂದು ಸೋಲು ಕಾಣದ, ಗೆಲ್ಲಲು ಯಾವುದೇ ಕಾನೂನನ್ನು ಮುರಿಯುವ ಅವನಿಗೆ ವಕೀಲಿಕೆ ಎಂದರೆ ಅಧಿಕಾರ, ಇಂಥ ಸನ್ನಿವೇಶದಲ್ಲಿ ತನ್ನ ತಂದೆಯ ಗೌರವವನ್ನು ಮರಳಿ ಗಳಿಸಲು ಮತ್ತು ಅನ್ಯಾಯದ ವಿರುದ್ಧ ಹೋರಾಡಿ ಗೆಲ್ಲಲು ಭಾರ್ಗವಿ ಯಶಸ್ವಿಯಾಗುತ್ತಾಳಾ ಎನ್ನುವುದು ‘ಭಾರ್ಗವಿ ಎಲ್. ಎಲ್. ಬಿ’ಯ ಮುಖ್ಯ ಕಥಾಹಂದರವಾಗಿದೆ.
‘ಭಾರ್ಗವಿ ಎಲ್. ಎಲ್. ಬಿ ’ -ಸಾಮಾಜಿಕ ಸಂಘರ್ಷ ಮತ್ತು ಕೌಟುಂಬಿಕ ಕಥನ ಹೊಂದಿರುವ ಅತ್ಯಂತ ಶಕ್ತಿಶಾಲಿಯಾಗಿ ನಿರೂಪಿತವಾಗಿರುವ ಎಲ್ಲರೂ ನೋಡಲೇಬೇಕಾದ ಧಾರಾವಾಹಿಯಾಗಿದೆ. ದಿಟ್ಟ ಭಾರ್ಗವಿ ಪಾತ್ರದಲ್ಲಿ ರಾಧಾ ಭಗವತಿ, ಅರ್ಜುನ್ ಪಾಟೀಲ್ ಪಾತ್ರದಲ್ಲಿ ಮನೋಜ್ ಕುಮಾರ್ ಕನ್ನಡ ಟೆಲಿವಿಶನ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಜೆಪಿ ಪಾಟೀಲ್ ಪಾತ್ರದಲ್ಲಿ ರಂಗಭೂಮಿಯ ಪ್ರಸಿದ್ಧ ಕಲಾವಿದ ಕೀರ್ತಿ ಭಾನು, ಹಾಗೂ ಕನ್ನಡದ ಖ್ಯಾತ ಕಲಾವಿದರಾದ ಅರುಣಾ ಬಾಲರಾಜ್, ಹನುಮಂತೇ ಗೌಡ, ಸುಜಾತಾ ಅಕ್ಷಯ, ‘ಮಾಯಾಬಜಾರ್’ ಖಾತಿಯ ಚೈತ್ರಾ ರಾವ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ‘ಅಂತರಪಟ’ ಧಾರಾವಾಹಿ ಮೂಲಕ ಶಕ್ತಿಶಾಲಿ ಮಹಿಳಾ ಪಾತ್ರ ಗಳನ್ನು ತೆರೆಗೆ ತಂದವರು ನಿರ್ಮಾಪಕಿ ಸ್ವಪ್ನ ಕೃಷ್ಣ, ‘ಭಾರ್ಗವಿ ಎಲ್. ಎಲ್. ಬಿ ’ ಮೂಲಕ ಮತ್ತೊಂದು ಮಹಿಳಾ ಪ್ರಧಾನ ಧಾರಾವಾಹಿಯನ್ನು ಮುಂದಿಡುತ್ತಿದ್ದಾರೆ “ಮುಂಗಾರು ಮಳೆ” ಕೃಷ್ಣ ಈ ಶೋಗೆ ಕ್ರಿಯೇಟಿವ್ ಹೆಡ್ ಆಗಿದ್ದಾರೆ. ಸಂಗೀತ ರಚನೆ ಮತ್ತು ಗಾಯನ ಶಶಾಂಕ್ ಶೇಷಗಿರಿ ಅವರದು, ಹಾಗೂ ಪ್ರಮೋದ ಮರವಂತೆ ಮನಸಿಗೆ ಮುಟ್ಟುವಂತಹ ಸಾಹಿತ್ಯ ರಚಿಸಿದ್ದಾರೆ.
Be the first to comment on "ಭಾರ್ಗವಿ ಎಲ್. ಎಲ್. ಬಿ ’ — ಸ್ವಾಭಿಮಾನದ ಮಹಾ ಸಂಘರ್ಷದ ಕಥೆ ತಪ್ಪದೆ ನೋಡಿ!"