ಬಂಟ್ವಾಳ ತಾಲೂಕಿನ ಸಜಿಪಮೂಡ ಗ್ರಾಮದಲ್ಲಿ ಕೇಂದ್ರ ಸರ್ಕಾರದ ಡಿರ್ಪಾಟ್ಮೆಂಟ್ ಆಫ್ ಲ್ಯಾಂಡ್ ರಿಸೋರ್ಸಸ್ ಗ್ರಾಮೀಣ ಮಂತ್ರಾಲಯ, ಕೃಷಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಲಾನಯನ ಯಾತ್ರೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕೇಂದ್ರ ಭೂಸಂಪನ್ಮೂಲ ಇಲಾಖೆಯ ತಜ್ಞ ಡಾ. ಎನ್.ಕೆ. ರಾಜೇಶ್ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಮಣ್ಣು ನೀರಿನ ಸಂರಕ್ಷಣೆ ಮಾಡುವುದು ಅತಿ ಅವಶ್ಯಕವಾಗಿದೆ. ಮಣ್ಣಿನ ಸವಕಳಿ ತಪ್ಪಿಸಲು ಬದುಗಳನ್ನು ನಿರ್ಮಿಸಿಕೊಳ್ಳಬೇಕು ಹಾಗೂ ಜಲಾನಯನ ಯಾತ್ರೆಯು ಮಣ್ಣು ಮತ್ತು ನೀರಿನ ಸಂರಕ್ಷಣೆ, ನೀರು ಕೊಯ್ಲು ಮತ್ತು ಪುನರಭರ್ತಿ ಚಟುವಟಿಕೆಗಳಂತಹ ಸುಸ್ಥಿರ ಅಭ್ಯಾಸಗಳನ್ನು ಉತ್ತೇಜಿಸುವ ಗುರಿ ಹೊಂದಿದೆ ಎಂದರು.
೭೭೫೦ ಜನಸಂಖ್ಯೆ ಮತ್ತು ಶೇ.೯೮ ರಷ್ಟು ಸಾಕ್ಷರತೆಯನ್ನು ಹೊಂದಿರುವ ಸಜಿಪಮೂಡ ಎಂಬ ಸಣ್ಣ ಗ್ರಾಮಕ್ಕೆ ಈ ಉಪಕ್ರಮವು ವಿಶೇಷ ಮಹತ್ವದ್ದಾಗಿದೆ. ಜಲಾನಯನ ಯಶಸ್ವಿಗೆ ಸಮುದಾಯ, ಸ್ಥಳೀಯ ಅಧಿಕಾರಿಗಳು ಮತ್ತು ನೀರಿನ ಸಂರಕ್ಷಣೆಯಲ್ಲಿ ತಜ್ಞರ ಸಾಮೂಹಿಕ ಪ್ರಯತ್ನಗಳು ಕಾರಣ ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಮುಂದಿನ ಪೀಳಿಗೆಗೆ ನೀರಿನ ಸುರಕ್ಷಿತ ಭವಿಷ್ಯವನ್ನು ಖಚಿತಪಡಿಸಿಕೊಳ್ಳಬಹುದು ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷರಾದ ಶೋಭಾ ಶೆಟ್ಟಿ ರವರು ವಹಿಸಿದ್ದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ವೀಣಾ ಕೆ.ಆರ್ ಸ್ವಾಗತಿಸಿದರು. ಆತ್ಮ ಯೋಜನೆ ಎಟಿಎಂ ಹನಮಂತ ಕಾಳಗಿ ಭೂಮಿ ಮತ್ತು ಜಲ ಸಂರಕ್ಷಣೆಯ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಕಾರ್ಯಕ್ರಮ ಅನುಷ್ಟಾನದಲ್ಲಿ ಸಹಕರಿಸಿದ ಕೆ. ಪ್ರಭಾಕರ ಶೆಟ್ಟಿ, ಪದ್ಮನಾಭ ಕುಂದರ್ ಕಂದೂರು, ಗ್ರಾಪಂ ಅಧ್ಯಕ್ಷೆ ಶೋಭಾ ಶೆಟ್ಟಿ, ಉಪಾಧ್ಯಕ್ಷರಾದ ಫೌಝೀಯ, ಪಂಚಾಯತಿ ಸಿಬ್ಬಂದಿ ಲಕ್ಷ್ಮೀಶ, ಕೃಷಿಸಖಿ ವಿನೋದ, ಕೃಷಿಕರಾದ ಪಾರ್ವತಿ, ಆನಂದ ಪೂಜಾರಿ, ಪುರುಷೋತ್ತಮ ಪೂಜಾರಿ, ಜಲಾನಯನ ಸಹಾಯಕರಾದ ವಿನೀತ್ ಜಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಮಾಯಾ ಕುಮಾರಿ ಅವರಿಗೆ ಜಲಾನಯನ ಮಾರ್ಗದರ್ಶಕ ಪ್ರಮಾಣಪತ್ರ ವಿತರಿಸಲಾಯಿತು.
ಜಲಾನಯನ ಯಾತ್ರೆ ವಾಹನದಲ್ಲಿ ಜಲಾನಯನ ಚಟುವಟಿಕೆಗಳ ಕುರಿತ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ಮಾರ್ನಬೈಲ್ ದ್ವಾರದಿಂದ ಸಜಿಪಮೂಡ ಪಂಚಾಯತ್ ರವರೆಗೆ ಜಲಾನಯನ ಜಾಥಾ ಕಾರ್ಯಕ್ರಮ ಆಯೋಜಿಸಲಾಯಿತು. ಯಾತ್ರೆ ಕಾರ್ಯಕ್ರಮದ ಪೂರ್ವಭಾವಿಯಾಗಿ ಆಯೋಜಿಸಲಾಗಿದ್ದ ಮಣ್ಣು ಮತ್ತು ನೀರು ಸಂರಕ್ಷಣೆ ವಿಷಯದಲ್ಲಿ ಆಯೋಜಿಸಲಾಗಿದ್ದ ರಂಗೋಲಿ ಸ್ವರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು. ಕಾರ್ಯಕ್ರಮದ ನಿಮಿತ್ತ ಪಂಚಾಯತ್ ಮುಂಭಾಗದಲ್ಲಿ ಸಪೋಟ ಗಿಡ ನಾಟಿ ಮಾಡುವುದರ ಮೂಲಕ ವನಮಹೋತ್ಸವ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಮುನ್ನ ಮಾರ್ನಬೈಲು ದ್ವಾರದ ಬಳಿಯಿಂದ ಸಜಿಪಮೂಡ ಪಂಚಾಯತ್ ರವರೆಗೆ ಜಲಾನಯನ ಜಾಥಾ ಕಾರ್ಯಕ್ರಮ ಆಯೋಜಿಸಲಾಯಿತು. ಯಾತ್ರೆ ಕಾರ್ಯಕ್ರಮದ ಪೂರ್ವಭಾವಿಯಾಗಿ ಆಯೋಜಿಸಲಾಗಿದ್ದ ಮಣ್ಣು ಮತ್ತು ನೀರು ಸಂರಕ್ಷಣೆ ವಿಷಯದಲ್ಲಿ ಆಯೋಜಿಸಲಾಗಿದ್ದ ರಂಗೋಲಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು. ಕಾರ್ಯಕ್ರಮದ ನಿಮಿತ್ತ ಪಂಚಾಯತ್ ಮುಂಭಾಗದಲ್ಲಿ ಸಪೋಟ ಗಿಡ ನಾಟಿ ಮಾಡುವುದರ ಮೂಲಕ ವನಮಹೋತ್ಸವ ಆಚರಿಸಲಾಯಿತು. ಜಲಾನಯನ ಯೋಜನೆಯಡಿ ಕಂದೂರಿನ ಪದ್ಮನಾಭ ಕುಂದರ್ ರವರ ಜಮೀನಿನಲ್ಲಿ ರಚಿಸಲಾದ ಕಿಂಡಿಅಣೆಕಟ್ಟು ಕಾಮಗಾರಿಗೆ ಬಾಗಿನ ಅರ್ಪಿಸಲಾಯಿತು. ಬಳಿಕ ಸಂಸಾರ ಜೋಡುಮಾರ್ಗ ದ ನಿರ್ದೇಶಕ ಮೌನೇಶ ವಿಶ್ವಕರ್ಮ ಅವರ ಸಂಯೋಜನೆಯಲ್ಲಿ ಮಣ್ಣು ಮತ್ತು ನೀರು ಸಂರಕ್ಷಣೆಯ ಕುರಿತಾದ ಜಲ ಉಜ್ಜಲ ಎಂಬ ಯಕ್ಷಗಾನನಡೆದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಜಲಾನಯನ ಯೋಜನೆಯಡಿ ಮುಕ್ತಾಯಗೊಂಡ ಕಂದೂರಿನ ಪದ್ಮನಾಭ ಕುಂದರ್ ಆವರ ಜಮೀನಿನಲ್ಲಿ ರಚಿಸಲಾದ ಕಿಂಡಿಅಣೆಕಟ್ಟು ಕಾಮಗಾರಿಗೆ ಬಾಗಿನ ಅರ್ಪಿಸಲಾಯಿತು. ಜಲ ಉಜ್ಜಲ ಎಂಬ ಮಣ್ಣು ಮತ್ತು ನೀರು ಸಂರಕ್ಷಣೆಯ ಯಕ್ಷಗಾನ ಕಾರ್ಯಕ್ರಮ ಪ್ರದರ್ಶಿಸಲಾಯಿತು.ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಜೋ ಪ್ರದೀಪ್ ಡಿಸೋಜ , ದ.ಕ ಜಿಲ್ಲೆ ಜಂಟಿ ಕೃಷಿ ನಿರ್ದೇಶಕರಾದ ಹೊನ್ನಪ್ಪ ಗೋವಿಂದೇ ಗೌಡ, ಮಂಗಳೂರು ಉಪವಿಭಾಗದ ಉಪಕೃಷಿ ನಿರ್ದೇಶಕರಾದ ಕುಮುದ, ಸಹಾಯಕ ಕೃಷಿ ನಿರ್ದೇಶಕರಾದ ವೀಣಾ ಕೆ ಆರ್, ಕೃಷಿ ಅಧಿಕಾರಿಯಾದ ನಂದನ್ ಶೆಣೈ ಪಿ , ಸಜೀಪಮುನ್ನೂರು ಗ್ರಾಪಂ ಅಧ್ಯಕ್ಷೆ ಅನಿತಾ ಬಂಟ್ವಾಳ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾದ ಪದ್ಮರಾಜ ಬಲ್ಳಾಳ್ ಮಾವಂತೂರು, ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಪದ್ಮನಾಭ ರೈ ಗೋಳ್ತಮಜಲು, ಪಂಚಾಯಿತಿ ಸದಸ್ಯರಾದ ವಿಶ್ವನಾಥ ಬೆಳ್ಚಡ, ಯೋಗೀಶ್ ಬೆಳ್ಚಡ, ಹಮೀದ್, ಸಿದ್ಧೀಕ್ , ಅಬ್ದುಲ್ ಕರೀಂ, ಸೋಮನಾಥ, ಸೀತಾರಾಮ ವಿಜಯ , ಅರುಂದತಿ, ಮಹಾದೇವಿ, ಪ್ರಮೀಳಾ ಪಂಚಾಯತ್ ಕಾರ್ಯದರ್ಶಿ ಸುಜಾತ, ಪಂಚಾಯತ್ ಸಿಬ್ಬಂದಿಗಳಾದ ರವಿರಾಜ್, ಭವಾನಿ, ರೇಷ್ಮಾ, ಲಾವಣ್ಯ,ಎಂಬಿಕೆ ಅಕ್ಷತಾ, ಯಲ್ ಸಿ ಆರ್ ಪಿ ಹರಿಣಾಕ್ಷಿ ಕೃಷಿ ಇಲಾಖೆ ಬಂಟ್ವಾಳ ಮೀನಾಕ್ಷಿ ಆತ್ಮಯೋಜನೆಯ ಬಿಟಿಯಂ ದೀಕ್ಷಾ, ಆತ್ಮಯೋಜನೆಯ ಎಟಿಯಂ ಹಣಮಂತ ಕಾಳಗಿ, ವಿರೂಪಾಕ್ಷಿ ಹಡಪದ, ತ್ರಿನೇತ್ರಾ, ದಿವ್ಯ, ಯಶೋದಾ, ಸಂದೀಪ್ ಜಲಾನಯನ ಸಹಾಯಕರಾದ ಪ್ರವೀಣ್ ಈಶ್ವರನಾಯ್ಕ್, ವೀಣಾ ಡಿಸೋಜ ವಿನೀತ್, ಹರ್ಷಿತ್, ಉದಯ್, ಸಾತ್ವಿಕ್, ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರು, ಎಯನ್ ಯಮ್, ಶಿಶು ಅಭಿವೃದ್ಧಿ ಇಲಾಖೆಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಯನ್ ಆರ್ ಯಲ್ ಯಮ್ ಯೋಜನೆಯ ಕೃಷಿ ಸಖಿಯರು, ಸುಭಾಷ್ ನಗರದ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.
Be the first to comment on "ಸಜಿಪಮೂಡ ಗ್ರಾಮದಲ್ಲಿ ಜಲಾನಯನ ಯಾತ್ರೆ"