VIDEO 1— Ramanatha Rai Address Media.
Video 2 – Piyus L Rodrigus Address Media

https://www.opticworld.net/
ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಕೂಡಿಬೈಲು ಎಂಬಲ್ಲಿ ನಡೆಯುವ ಬಂಟ್ವಾಳ ಕಂಬಳವೆಂದೇ ಖ್ಯಾತವಾಗಿರುವ 14ನೇ ವರ್ಷದ ಮೂಡೂರು ಪಡೂರು ಜೋಡುಕರೆ ಬಯಲು ಕಂಬಳ ಮಾರ್ಚ್ 8ರಂದು ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸಲಿದ್ದಾರೆ ಎಂದು ಕಂಬಳ ಸಮಿತಿಯ ಗೌರವಾಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಬಿ.ಸಿ.ರೋಡಿನ ಹೋಟೆಲ್ ರಂಗೋಲಿ ಸಭಾಂಗಣದಲ್ಲಿ ಅವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಬಂಟ್ವಾಳ ಕಂಬಳವನ್ನು ನಡೆಸುವ ವೇಳೆ ಕರೆ ನಿರ್ಮಾಣದಿಂದ ತೊಡಗಿ, ತೀರ್ಪುಗಾರರವರೆಗೆ ನುರಿತ, ನಿಷ್ಣಾತ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಂಡು ಅದ್ದೂರಿಯಾಗಿ ನಡೆಸುತ್ತಿರುವ ಕಾರಣ ಕಳೆದ 14 ವರ್ಷಗಳಿಂದ ಕಂಬಳಪ್ರಿಯರ ಹಾಗೂ ಜನರ ಪ್ರೀತಿ, ವಿಶ್ವಾಸ ದೊರಕಿದೆ ಎಂದರು.
ಸ್ಪೀಕರ್ ಯು.ಟಿ.ಖಾದರ್ ಸಹಿತ ರಾಜ್ಯದ ನಾನಾ ಮಂತ್ರಿಗಳು ಆಗಮಿಸಲಿದ್ದಾರೆ. ಇದಕ್ಕಾಗಿ ಸಕಲ ಸಿದ್ಧತೆಗಳು ನಡೆದಿವೆ ಎಂದು ರೈ ವಿವರಿಸಿದರು. ಕಂಬಳ ಸಮಿತಿ ಅಧ್ಯಕ್ಷ ಪಿಯೂಸ್ ಎಲ್.ರೋಡ್ರಿಗಸ್ ಮಾತನಾಡಿ, ಕಂಬಳದ ಸಿದ್ಧತೆಗಳ ಕುರಿತು ಮಾಹಿತಿ ನೀಡಿದರು. ಈ ಸಂದರ್ಭ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಕಂಬಳ ಸಮಿತಿ ಕಾರ್ಯಾಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪ್ರಧಾನ ಕಾರ್ಯದರ್ಶಿ ರಾಜೀವ ಶೆಟ್ಟಿ ಎಡ್ತೂರು, ಕೋಶಾಧಿಕಾರಿ ಫಿಲಿಪ್ ಫ್ರೇಂಕ್, ಉಪಾಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಸುದರ್ಶನ ಜೈನ್, ಚಂದ್ರಶೇಖರ ಭಂಡಾರಿ, ಬಾಲಕೃಷ್ಣ ಆರ್.ಅಂಚನ್, ಅಬ್ಬಾಸ್ ಆಲಿ, ರಾಜೇಶ್ ರೋಡ್ರಿಗಸ್, ಪದ್ಮನಾಭ ರೈ, ಶಬೀರ್ ಸಿದ್ಧಕಟ್ಟೆ, ಸುರೇಶ್ ನಾವೂರು, ಬಾಲಕೃಷ್ಣ ಅಂಚನ್, ಉಮೇಶ್ ಕುಲಾಲ್ ನಾವೂರು, ವೆಂಕಪ್ಪ ಪೂಜಾರಿ. ಸುಧಾಕರ ಶೆಣೈ, ವಿನ್ಸೆಂಟ್ ಕಾರ್ಲೊ, ರಾಮಕೃಷ್ಣ ಆಳ್ವ, ಸುವರ್ಣ ಕುಮಾರ್ ಇಂದ್ರ, ಪುಷ್ಪರಾಜ್ ನಾವೂರು, ಮಹಮ್ಮದ್ ಶರೀಫ್, ರಾಜೀವ ಕಕ್ಯಪದವು, ಬಿ. ಮೋಹನ್, ಕಾಂತಾಡಿಗುತ್ತು ಸೀತಾರಾಮ ಶೆಟ್ಟಿ, ಸುದರ್ಶನ ನಾಯಕ್ ಕಂಪ, ಪ್ರವೀಣ್ ರಾಡ್ರಿಗಸ್, ಡೆನ್ಝಿಲ್ ನೊರೊನ್ಹ, ದೇವಪ್ಪ ಕುಲಾಲ್, ಸದಾಶಿವ ಬಂಗೇರ, ಹರೀಶ್ ಅಜ್ಜಿಬೆಟ್ಟು, ವೆಂಕಪ್ಪ ಪೂಜಾರಿ, ಸಿದ್ದೀಕ್ ಗುಡ್ಡೆಯಂಗಡಿ, ಮಹಮ್ಮದ್ ನಂದಾವರ ಸಹಿತ ಪ್ರಮುಖರು ಉಪಸ್ಥಿತರಿದ್ದರು.
Be the first to comment on "ಮೂಡೂರು ಪಡೂರು ಜೋಡುಕರೆ ಬಂಟ್ವಾಳ ಕಂಬಳ ವೀಕ್ಷಣೆಗೆ ಸಿಎಂ ಸಿದ್ದರಾಮಯ್ಯ ಆಗಮನ: ರಮಾನಾಥ ರೈ = DETAILS"