
https://www.opticworld.net/
ಬಂಟ್ವಾಳ ತಾಲೂಕಿನ ಕರ್ಪೆ ಗ್ರಾಮದ ಕುಪ್ಪೆಟ್ಟು ಬರ್ಕೆಯ ಶ್ರೀ ಕುಪ್ಪೆಟ್ಟು ಪಂಜುರ್ಲಿ ಮೂಲಸ್ಥಾನ ಸೇವಾ ಟ್ರಸ್ಟ್ ವತಿಯಿಂದ ಫೆಬ್ರವರಿ 18ರಿಂದ 22ರವರೆಗೆ ಶ್ರೀ ಕೊಡಮಣಿತ್ತಾಯ, ಲೆಕ್ಕೆಸಿರಿ, ಮೈಸಂದಾಯ, ಹಿರಿಯಜ್ಜ, ಕುಪ್ಪೆಟ್ಟು ಕಲ್ಲುರ್ಟಿ ಪಂಜುರ್ಲಿ, ಮಂತ್ರಜಾವದೆ, ಬಂಟ ಪಂಜುರ್ಲಿ ಮತ್ತು ಗಡುಪಾಡಿ ಜಾಗದ ಕಲ್ಲುರ್ಟಿ ಪಂಜುರ್ಲಿ ದೈವಗಳ ಪುನರ್ ಪ್ರತಿಷ್ಠಾ ಮಹೋತ್ಸವ ಮತ್ತು ನೇಮೋತ್ಸವ ಕಾರ್ಯಕ್ರಮಗಳು ನಡೆಯಲಿದೆ.
ಈ ವಿಷಯವನ್ನು ಪ್ರತಿಷ್ಠಾ ಮಹೋತ್ಸವದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಈ ಸಂದರ್ಭ ಪೂರಕ ಮಾಹಿತಿ ನೀಡಿದ ಪ್ರಚಾರ ಸಮಿತಿ ಅಧ್ಯಕ್ಷ ದಿನೇಶ ಸುವರ್ಣ ರಾಯಿ, ಸ್ಥಳದ ಮಹಿಮೆಯನ್ನು ಹಾಗೂ ಇತಿಹಾಸವನ್ನು ವಿವರಿಸಿ, ಕಾರ್ಯಕ್ರಮಗಳ ವಿವರ ನೀಡಿದರು. 16ರಂದು ಸಂಗಬೆಟ್ಟು ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನದಿಂದ ಹೊರೆಕಾಣಿಕೆ ಮೆರವಣಿಗೆಗೆ ಶ್ರೀ ಕ್ಷೇತ್ರ ಪೂಂಜದ ಕೃಷ್ಣಪ್ರಸಾದ್ ಆಸ್ರಣ್ಣ ಚಾಲನೆ ನೀಡಲಿದ್ದಾರೆ ೧೮ರಂದು ಬೆಳಗ್ಗೆ ಸಾನಿಧ್ಯದಲ್ಲಿ ಆಶ್ಲೇಷಾ ಪೂಜೆಯೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳುತ್ತವೆ. ೧೯, ೨೦ರಂದು ಧಾರ್ಮಿಕ ಕಾರ್ಯಕ್ರಮಗಳು ಇರಲಿದ್ದು, ೨೧ರಂದು ಸಂಜೆ ಶ್ರೀ ಹಿರಿಯಜ್ಜ ದೈವದ ಕೋಲೋತ್ಸವ, ರಾತ್ರಿ ೧೧ರಿಂದ ಶ್ರೀ ಕುಪ್ಪೆಟ್ಟು ಪಂಜುರ್ಲಿ ದೈವದ ನೇಮೋತ್ಸವ ನಡೆಯಲಿದೆ. ಫೆ.೧೯, ೨೦ರಂದು ಧಾರ್ಮಿಕ ಸಭೆ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರಭಾಕರ ಪ್ರಭು ಕರ್ಪೆ, ಟ್ರಸ್ಟ್ ಅಧ್ಯಕ್ಷ ಹರೀಶ್ ಸನಿಲ್ ಕುಪ್ಪೆಟ್ಟು, ಪ್ರತಿಷ್ಠಾ ಮಹೋತ್ಸವ ಸಮಿತಿ ಕಾರ್ಯದರ್ಶಿ ರತ್ನಾಕರ ಪೂಜಾರಿ ಮದಂಗೋಡಿ ಉಪಸ್ಥಿತರಿದ್ದರು.
Be the first to comment on "ಕುಪ್ಪೆಟ್ಟು ಪಂಜುರ್ಲಿ ಮೂಲಸ್ಥಾನ: 18ರಿಂದ 22ರವರೆಗೆ ಪುನರ್ ಪ್ರತಿಷ್ಠಾ ಮಹೋತ್ಸವ, ನೇಮೋತ್ಸವ"