
https://www.opticworld.net/
ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಶತಚಂಡಿಕಾಯಾಗ ಹಾಗೂ ಸೇವಾರೂಪದಲ್ಲಿ ದೊಡ್ಡರಂಗಪೂಜೆ ಉತ್ಸವ ನಡೆಯಲಿದೆ. ಲೋಕಕಲ್ಯಾಣಾರ್ಥ ಹಾಗೂ ಸಾನಿಧ್ಯ ವೃದ್ಧಿಗಾಗಿ ಮಾರ್ಚ್ 3ರಿಂದ 07ರವರೆಗೆ ನಡೆಯುವ ದೊಡ್ಡರಂಗಪೂಜೆ ಉತ್ಸವದ ಪೂರ್ವ ಸಿದ್ಧತೆ ಬಗ್ಗೆ ಭಕ್ತಾದಿಗಳ ಸಭೆಯನ್ನು ಫೆ.14ರಂದು ಸಂಜೆ 5ವರೆಗೆ ಪೊಳಲಿಯಲ್ಲಿ ಕರೆಯಲಾಗಿದೆ. ಪೊಳಲಿಗೆ ಸಂಭಂಧಪಟ್ಟ ಗ್ರಾಮಗಳಾದ ಬಡಗ ಉಳಿಪ್ಪಾಡಿ, ತೆಂಕ ಉಳಿಪ್ಪಾಡಿ, ಅಮ್ಮುಂಜೆ, ಕರಿಯಂಗಳ, ಮುತ್ತೂರು, ಕೊಳವೂರು, ಮೊಗರು, ಅಡ್ಡೂರು, ಮಲ್ಲೂರು, ಪೆರ್ಮಂಕಿ, ಮೇರಮಜಲು, ಕೊಡ್ಮಾಣ್, ಅಬ್ಬೆಟ್ಟು, ನೆತ್ತರಕೆರೆ, ಪುದು, ಸುಜೆರ್, ಅರ್ಕುಳ ಗ್ರಾಮದ ಸರ್ವ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ದೇವಸ್ಥಾನದ ಆಡಳಿತ ಮಂಡಳಿ ಸಮಿತಿ ಪದಾಧಿಕಾರಿಗಳು, ಭಜನಾ ಮಂದಿರ ಸಮಿತಿ ಪದಾಧಿಕಾರಿಗಳು, ಎಲ್ಲಾ ಗ್ರಾಮಸ್ಥರು ಸಭೆಯಲ್ಲಿ ಭಾಗವಹಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕೆಂದು ಪ್ರಕಟಣೆ ತಿಳಿಸಿದೆ.
Be the first to comment on "ಪೊಳಲಿ ಶತಚಂಡಿಕಾಯಾಗ ಹಾಗೂ ದೊಡ್ಡರಂಗಪೂಜೆ ಉತ್ಸವ: 14ರಂದು ಪೂರ್ವಭಾವಿ ಸಭೆ"