
https://www.opticworld.net/
ಬಂಟ್ವಾಳ: ಶ್ರೀನಿವಾಸ ಯುನಿವರ್ಸಿಟಿ ಮತ್ತು ಶ್ರೀನಿವಾಸ ಸಂಸ್ಥೆ ಮಂಗಳೂರಿನವರು ಎ. ಶ್ಯಾಮರಾವ್ ಸ್ಮರಣಾರ್ಥ ನೀಡುವ ಅತ್ಯುತ್ತಮ ಶಿಕ್ಷರಿಗೆ ನೀಡುವ ಸಾಧನಾ ಶ್ರೀ -2025 ಪ್ರಶಸ್ತಿಗೆ ಪಾಣೆಮಂಗಳೂರು ಪ್ರೌಢಶಾಲೆಯ ಶಿಕ್ಷಕಿ ಸುಧಾ ನಾಗೇಶ್ ಆಯ್ಕೆಯಾಗಿದ್ದಾರೆ. ಕಳೆದ 35 ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು ಸಾಹಿತಿಯಾಗಿಯೂ ಗುರುತಿಸಲ್ಪಟ್ಟಿದ್ದಾರೆ. ಮೂಡಲ ಮನೆ, ಹೃದಯರಾಗ, ಹೀಗೆ ಸುಮ್ಮನೆ, ಹನಿ, ಮಿನಿ ಎನ್ ಸೈಕ್ಲೋಪೀಡಿಯ ಫಾರ್ ಸ್ಟೂಡೆಂಟ್ಸ್ , ಜೀನಿಯಸ್ ಮೊದಲಾದ ಎಂಟು ಸಾಹಿತ್ಯ ಕೃತಿಗಳನ್ನು ಪ್ರಕಟಿಸಿದ್ದಾರೆ.
ಬಂಟ್ವಾಳ ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷೆಯಾಗಿರುವ ಇವರು ನೂರಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದು ದುಬೈಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯೆಯಾಗಿದ್ದು ,”ಬೇಸಿಗೆಯ ತಾಪಕ್ಕೆ ಬಿಸಿಯೇರುತ್ತಿದೆ ಭೂಮಿ ” ಲೇಖನವು ಕೇರಳ ರಾಜ್ಯದ 6ನೇ ತರಗತಿಯ ಪಠ್ಯಪುಸ್ತಕವಾಗಿದೆ. ಫೆ.14ರಂದು ಶ್ರೀನಿವಾಸ ಕಾಲೇಜು ಮುಕ್ಕದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
Be the first to comment on "ಶಿಕ್ಷಕಿ ಸುಧಾ ನಾಗೇಶರಿಗೆ ಸಾಧನಾ ಶ್ರೀ ಪ್ರಶಸ್ತಿ"