ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮದ ಶ್ರೀ ಗುರುಶಿವ ಕ್ಷೇತ್ರದಲ್ಲಿ ವರ್ಕಾಡಿ ಶಂಕರ ಅಲೆವೂರಾಯರ ನೇತೃತ್ವದಲ್ಲಿ ಜನವರಿ 25ರಂದು ಭಜನಾ ಮಂಗಲೋತ್ಸವ ಹಾಗೂ ಪರಿವಾರ ದೈವಗಳಿಗೆ ನೇಮೋತ್ಸವ ನಡೆಯಲಿದೆ.
ಜಾಹೀರಾತು
ಬೆಳಗ್ಗೆ 7ಗಂಟೆಗೆ ಧ್ವಜಾರೋಹಣ, 7.30ಕ್ಕೆ ಭಜನೆ ಆರಂಭ, 9.30ಕ್ಕೆ 48 ಕಾಯಿ ಗಣಹೋಮ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, 1ಕ್ಕೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 5.30ಕ್ಕೆ ಭಜನಾ ಮಹೋತ್ಸವ, ರಾತ್ರಿ 6.30ಕ್ಕೆ ರಂಗಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ 7ರಿಂದ ಉಳ್ಳಾಕುಲು ಅಣ್ಣತಮ್ಮಂದಿರು, ಮಲರಾಯ ದೈವಗಳಿಗೆ ನೇಮೋತ್ಸವ, ರಾತ್ರಿ 10.30ರಿಂದ ಅಣ್ಣಪ್ಪ ದೈವ ಮತ್ತು ಪಾಷಾಣ ಮೂರ್ತಿಗೆ ನೇಮೋತ್ಸವ, ನಂತರ ಕೊರಗಜ್ಜ ಮತ್ತು ಮೈಯೊಂತಿ ದೈವದ ಕೋಲ ನಡೆಯಲಿದೆ ಎಂದು ಪುರಂದರ ಶೆಟ್ಟಿ ಗೋಳ್ತಮಜಲು ಹಾಗೂ ಡಾ. ರಾಮಕೃಷ್ಣ ಶೆಟ್ಟಿ ಗೋಳ್ತಮಜಲು ಹಾಗೂ ಶ್ರೀ ಗುರುಶಿವ ಕ್ಷೇತ್ರ ಸೇವಾ ಟ್ರಸ್ಟ್ ಪ್ರಕಟಣೆ ತಿಳಿಸಿದೆ.
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "25ರಂದು ಶ್ರೀ ಗುರು ಶಿವ ಕ್ಷೇತ್ರದಲ್ಲಿ ಭಜನಾ ಮಂಗಲೋತ್ಸವ, ಪರಿವಾರ ದೈವಗಳಿಗೆ ನೇಮೋತ್ಸವ"
Be the first to comment on "25ರಂದು ಶ್ರೀ ಗುರು ಶಿವ ಕ್ಷೇತ್ರದಲ್ಲಿ ಭಜನಾ ಮಂಗಲೋತ್ಸವ, ಪರಿವಾರ ದೈವಗಳಿಗೆ ನೇಮೋತ್ಸವ"