ED ಅಧಿಕಾರಿಗಳು ನಾವು ಎಂದು ನಂಬಿಸಿ ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಬೋಳಂತೂರು ಸಮೀಪ ನಾರ್ಶ ಎಂಬಲ್ಲಿರುವ ಉದ್ಯಮಿಯೊಬ್ಬರ ಮನೆಗೆ ಅಪರಿಚಿತರು ಆಗಮಿಸಿ ಲಕ್ಷಾಂತರ ರೂ ಲೂಟಿ ಮಾಡಿ ತೆರಳಿದ್ದಾಗಿ ದೂರಲಾಗಿದೆ. ಈ ಕುರಿತು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಸ್ಥಳಕ್ಕೆ ಉನ್ನತ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಸುಲೈಮಾನ್ ಎಂಬವರ ಮನೆಗೆ ತಮಿಳುನಾಡು ಮೂಲದ ಕಾರ್ ನಲ್ಲಿ ಆಗಮಿಸಿದ ತಂಡ ಬಂದಿದೆ. ಬಳಿಕ ನಾವು ಇಡಿ ಅಧಿಕಾರಿಗಳು ‘ ಎಂದು ನಂಬಿಸಿ ಸುಮಾರು ಎರಡು ಗಂಟೆಗಳ ವರೆಗೆ ತನಿಖೆ ನಡೆಸಿದೆ. ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿಗಳನ್ನು ಕೊಂಡುಹೋಗಿದೆ. ಪರಾರಿಯಾದ ಬಳಿಕವಷ್ಟೇ ಇದು ನಕಲಿ ದಾಳಿ ಎಂದು ಮನೆಯವರಿಗೆ ಗೊತ್ತಾಗಿದೆ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
Be the first to comment on "ED ಅಧಿಕಾರಿಗಳೆಂದು ಹೇಳಿಕೊಂಡು ರೇಡ್ – ಲಕ್ಷಾಂತರ ರೂ ನಗದು ದೋಚಿ ಪರಾರಿ"