ರೋಟರಿ ಮೀನ್ಸ್ ಬ್ಯುಸಿನೆಸ್ ಫೆಲೋಶಿಪ್ ಮಂಗಳೂರು ಕ್ಲಬ್ ನ 2025 ಸಾಲಿನ ನೂತನ ಅಧ್ಯಕ್ಷ ಜಯರಾಜ್ ಎಸ್ ಬಂಗೇರ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜ.4 ರಂದು ಬಿ.ಸಿ.ರೋಡಿನ ರೋಟರಿ ಗೋಲ್ಡನ್ ಜುಬಿಲಿ ಹಾಲ್ ನಲ್ಲಿನಡೆಯಲಿದೆ. ಬುಧವಾರ ಸಂಜೆ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅಧ್ಯಕ್ಷ ಜಯರಾಜ್ ಬಂಗೇರ ಅವರು ಮಂಗಳೂರು ಕೆನರಾ ವಾಣಿಜ್ಯ ಮತ್ತುಕೈಗಾರಿಕೆಗಳ ಸಂಸ್ಥೆಯ ಅಧಗಯಕ್ಷ ಆನಂದ ಜಿ.ಪೈ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು,ರೋಟರಿಜಿಲ್ಲೆ 3181 ರ ಜಿಲ್ಲಾ ಗವರ್ನರ್ ವಿಕ್ರಮ್ ದತ್ತ ಅವರು ಪದಪ್ರದಾನ ಮಾಡಲಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ನೆಲ್ಸನ್ ಕ್ಯಾಸ್ಟಲಿನೋ, ಪ್ರಸನ್ನರಾವ್ ಉಪಸ್ಥಿತರಿದ್ದರು.
Be the first to comment on "ರೋಟರಿ ಮೀನ್ಸ್ ಬ್ಯುಸಿನೆಸ್ ಫೆಲೋಶಿಪ್ ಮಂಗಳೂರು ಕ್ಲಬ್ ಜ.4ರಂದು ಪದಗ್ರಹಣ"