ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಬಂಟ್ವಾಳ ತಾಲೂಕು ಇದರ ವತಿಯಿಂದ ನರಿಕೊಂಬು, ಸಜಿಪಮೂಡ, ಸಜಿಪಮೂನ್ನೂರು ಗ್ರಾಮಗಳನ್ನು ಒಳಗೊಂಡು ಸಜಿಪಮೂಡ ಗ್ರಾ.ಪಂ ವಠಾರದಲ್ಲಿ ನೋಂದಾವಣೆ ಬಾಕಿ ಇರುವ ಮತ್ತು ತಿರಸ್ಕೃತ ಅರ್ಜಿಗಳ ವಿಲೇವಾರಿ ಶಿಬಿರ ನಡೆಯಿತು…
ಕಾರ್ಯಕ್ರಮವನ್ನು ಮಾಜಿ ಸಚಿವ ಬಿ.ರಮಾನಾಥ ರೈ ದೀಪ ಬೆಳಗಿಸಿ ಉದ್ಘಾಟಿಸಿ..ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿ ಈ ದೇಶದಲ್ಲಿ ಇರುವ ಸಮಯದಲ್ಲಿ ಬಡವರ ಕಲ್ಯಾಣಕ್ಕಾಗಿ ಅನೇಕ ಕಾರ್ಯಕ್ರಮವನ್ನು ಜಾರಿಗೆ ತಂದಿದೆ ಉಳುವವನೆ ಬೂಮಿ ಒಡೆಯ,ಆಹಾರ ಭದ್ರತೆ ಕಾಯ್ದೆ,ಮಕ್ಕಳಿಗಾಗಿ ಬಿಸಿ ಊಟ, ,ಕ್ಷೀರ ಭಾಗ್ಯ, ಸಿ.ಇ.ಟಿ, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಸರ್ಕಾರವು ಪಂಚ ಗ್ಯಾರಂಟಿ ಯೋಜನೆ ಕೊಟ್ಟಿದೆ. ಈ ಎಲ್ಲಾ ಕಾರ್ಯಕ್ರಮಗಳು ಬಡವರ ಕಲ್ಯಾಣಕ್ಕಾಗಿ ಇದೆ. ಇದನ್ನೂ ವಿರೋದಿಸುವವರು ಪ್ರಸ್ತುತ ದಿನಗಳಲ್ಲಿ ಇದ್ದಾರೆ ಅದರೆ ನಾವು ಯಾವತ್ತು ಸಹಾಯ ಮಾಡಿದವರನ್ನು ಮರೆಯಬಾರದು ವಲಯ ಮಟ್ಟದಲ್ಲಿ ನಡೆಯುವ ಕಾರ್ಯಕ್ರಮದ ಉದ್ದೇಶ ಉತ್ತಮವಾಗಿದೆ ಯಶಸ್ವಿಯಾಗಿ ನಡೆಯಲಿ ಎಂದರು.
ಮುಖ್ಯ ಅತಿಥಿಯಾಗಿ ಅಗಮಿಸಿದ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಮಾತನಾಡಿ ಕರ್ನಾಟಕ ರಾಜ್ಯದಲ್ಲಿಯೇ ಪ್ರಥಮವಾಗಿ ಬಂಟ್ವಾಳದಲ್ಲಿ ಸಮಿತಿಯ ಅಧ್ಯಕ್ಷರಾದ ಜಯಂತಿ ವಿ.ಪೂಜಾರಿ ಹಾಗೂ ಸರ್ವಸದಸ್ಯರ ಪರಿಕಲ್ಪನೆಯಲ್ಲಿ ಶಿಬಿರ ನಡೆಯುತ್ತಿರುವುದು ಸಂತೋಷದ ವಿಷಯ..ಪ್ರತಿಯೊಬ್ಬರಿಗು ಇದರ ಪ್ರಯೋಜನ ದೊರಕಲಿ ಎಂದು ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಜಿಪಂ ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿ ಈ ಕಾರ್ಯಕ್ರಮದಿಂದ ಎಷ್ಟೋ ಕುಟುಂಬಗಳು ಇವತ್ತು ನೆಮ್ಮದಿಯ ಜೀವನ ಸಾಗಿಸುತ್ತ ಇದ್ದಾರೆ ಎಂದರು.
ಅಧ್ಯಕ್ಷತೆಯನ್ನು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಬಂಟ್ವಾಳ ತಾಲೂಕು ಅಧ್ಯಕ್ಷರಾದ ಜಯಂತಿ ವಿ.ಪೂಜಾರಿ ನಡೆಯಿತು..ಈ ಯೋಜನೆಯಿಂದ ಯಾರು ಕೂಡ ಹೊರಗೆ ಉಳಿಯಬಾರದು..ಐ.ಟಿ.ಹಾಗೂ ಜಿ.ಎಸ್.ಟಿ ಸಮಸ್ಯೆಯಿಂದ ಕೆಲವರಿಗೆ ಗೃಹಲಕ್ಷ್ಮಿ ಯೋಜನೆಯ ಪ್ರಯೋಜನ ಪಡೆಯಲು ಸಾದ್ಯವಾಗುತ್ತಿಲ್ಲ ಇನ್ನೆರಡು ತಿಂಗಳ ಒಳಗೆ ಈ ಸಮಸ್ಯೆಗಳನ್ನು ಸರ್ಕಾರ ಮಟ್ಟದಲ್ಲಿ ಸರಿ ಪಡಿಸಲಾಗುವುದು ಎಂದು ತಿಳಿಸಿದರು..ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಕಾರ್ಯನಿರ್ವಾಹಣಾಧಿಕಾರಿ ಹಾಗೂ ಪಂಚ ಗ್ಯಾರಂಟಿ ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳು ಕಾರಣ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಸಜಿಪಮೂಡ ಗ್ರಾಪಂ ಅದ್ಯಕ್ಷರಾದ ಶೋಭಾ ಶೆಟ್ಟಿ,ಉಪಾಧ್ಯಕ್ಷರಾದ ಪೌಝಿಯಾ,ಬೂಡ ಅಧ್ಯಕ್ಷರಾದ ಬೇಬಿ ಕುಂದಾರ್, ತಾ.ಪಂ ಮಾಜಿ ಸದಸ್ಯರಾದ ಸಂಜೀವ ಪೂಜಾರಿ, ತಾ.ಪಂ ಮಾಜಿ ಉಪಾಧ್ಯಕ್ಷರಾದ ಅಬ್ಬಸ್ ಆಲಿ, ವಿವಿ ಸಿಂಡಿಕೇಟ್ ಸದಸ್ಯರಾದ ಸುರೇಶ್ ಕುಲಾಲ್, ಪ್ರಮುಖರಾದ ಚಂದ್ರಶೇಖರ್ ಭಂಡಾರಿ, ಪದ್ಮನಾಭ ರೈ,ದೇವಿಪ್ರಸಾದ್ ಪೂಂಜಾ,ಸ್ಟೀವಾನ್, ವಿಶ್ವನಾಥ ಬೆಳ್ಚಡ, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಲಕ್ಷ್ಮಣ, ಮಾಯಾ ಕುಮಾರಿ, ಹರೀಶ್ ಉಪಸ್ಥಿತರಿದ್ದರು.
ಗ್ರಾ.ಪಂ ಸದಸ್ಯರಾದ ಗಿರೀಶ್ ಪೆರ್ವ ಸ್ಚಾಗತಿಸಿದರು,ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರು ಗ್ರಾ.ಪಂ ಸದಸ್ಯರಾದ ಅಬ್ದುಲ್ ಕರೀಂ ಧನ್ಯವಾದ ಸಲ್ಲಿಸಿದರು, ಇರಾ ಗ್ರಾ.ಪಂ ಮಾಜಿ ಅಧ್ಯಕ್ಷರಾದ ರಝಾಕ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಸಹಾಯ ಮಾಡಿದವರನ್ನು ಮರೆಯಬಾರದು: ಗ್ಯಾರಂಟಿ ಶಿಬಿರದಲ್ಲಿ ರಮಾನಾಥ ರೈ"