ಬಂಟ್ವಾಳ ತಾಲೂಕು ಪಿಂಚಣಿದಾರರ ಸಂಘದ ಮಹಾಸಭೆ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು. ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೆ ಕೃಷ್ಣಕುಮಾರ ಪೂಂಜಾ ಉದ್ಘಾಟಿಸಿ ಮಾತನಾಡಿ ನಿವೃತ್ತರಾದರೂ ಸಮಾಜ ಸೇವೆ ಮಾಡುವುದರ ಮೂಲಕ ಪ್ರವೃತ್ತರಾಗಬೇಕು. ನಾವು ಗಳಿಸಿದ ಒಂದಂಶ ಸಮಾಜಕ್ಕೆ ನೀಡಬೇಕು ಆ ಮೂಲಕ ಜೀವನ ಸಾರ್ಥಕ ಪಡಿಸಿದಾಗ ಶಾರೀರಿಕವಾಗಿ ಆರೋಗ್ಯವಾಗಿ ಇರಲು ಸಾಧ್ಯ ಎಂದರು.
ಮುಖ್ಯಅತಿಥಿ ನಿವೃತ್ತ ಉಪನ್ಯಾಸಕ ಡಾ.ಟಿ.ಕೆ ರವೀಂದ್ರನ್ ಮಾತನಾಡಿ ನಿವೃತ್ತರಾದ ಮೇಲೆ ಸಂಘಟನೆಯೊಂದಿಗೆ ಕೈ ಜೋಡಿಸಿ ಸಮಾಜಮುಖಿ ಚಟುವಟಿಕೆ ಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಪಿ. ಲೋಕನಾಥ ಶೆಟ್ಟಿ ಮಾತನಾಡಿ ಒಂದೇ ಕುಟುಂಬದವರಂತೆ ನಮ್ಮ ಸಂಘಟನೆಯಲ್ಲಿ ನಾವು ತೊಡಗಿಸಿಕೊಂಡು ಕಾರ್ಯಪ್ರವೃತ್ತ ರಾಗುತ್ತಿದ್ದೇವೆ ಎಂದರು. ವಿ.ಶಂಕರ್ ಪ್ರಾರ್ಥಿಸಿದರು.
ಗತವರ್ಷದಲ್ಲಿ ನಿಧನರಾದ ಸಂಘದ ಹತ್ತು ಮಂದಿ ಸದಸ್ಯರಿಗೆ ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸದಸ್ಯರ ಪಟ್ಟಿಯನ್ನು ದೇವರಾಜ ಭಂಡಾರಿ ಓದಿ ಹೇಳಿದರು. ಸಂಘದ ಸದಸ್ಯರಲ್ಲಿ 75ವರ್ಷ ತುಂಬಿದ ಸದಸ್ಯರಾದ ಗೋಪಾಲ ರಾವ್ ಸಂಚಯಗಿರಿ, ಕೆ ಎಚ್. ವಸಂತ ಕುಮಾರ್, ಅಪ್ಪಯ್ಯ ಶೆಟ್ಟಿ, ನರಸಿಂಹ ಭಟ್, ವೆಂಕಟ್ರಮಣ ಭಟ್, ಆನಂದಿ, ಟಿ ಕೆ ದಯಾನಂದ, ದಾಮೋದರ ಶೆಟ್ಟಿಗಾರ್, ಲಕ್ಷ್ಮೀ ನೇರಳಕಟ್ಟೆ, ಪದ್ಮನಾಭ ರಾವ್ ಕೈಕುಂಜೆ, ಮಾಧವ ಮಾರ್ಲ ಮೊಡಂಕಾಪು, ಜಿ ಎ ಬಾವಾ ಅಮ್ಮುಂಜೆ, ವನಿಲಾ ಅಲೆತ್ತೂರು, ಗೋಪಾಲಕೃಷ್ಣ ರೈ ಬರಿಮಾರ್, ಗೋವರ್ಧನ್ ಶೆಣೈ, ಲಕ್ಶ್ಮಿ ಅಮ್ಮ ಬೊಕ್ಕಸ ಅವರನ್ನು ಸನ್ಮಾನಿಸಲಯಿತು.ಸನ್ಮಾನಿತರ ಹೆಸರನ್ನು ಮಹಾಬಲೇಶ್ವರ ಹೆಬ್ಬಾರ್, ಜಯಂತ ಶೆಟ್ಟಿ, ಸುಂದರ ಮೂಲ್ಯ ಹಾಗೂ ಸಂಘಟನಾ ಕಾರ್ಯದರ್ಶಿ ಸೋಮಪ್ಪ ಬಂಗೇರ, ಚಂದು ನಾಯ್ಕ ಓದಿ ಹೇಳಿದರು ಅನಂತರಾಮ ಹೆರಳೆಯವರು ಸಭಿಕರ ಭಾಷಣ ಮಾಡಿ ಸಲಹೆ ನೀಡಿದರು. ಉಪಾಧ್ಯಕ್ಷ ಸಂಕಪ್ಪ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ನಿಲೋಜಿ ರಾವ್ ವರದಿ ಮಂಡಿಸಿದರು. ಕೋಶಾಧಿಕಾರಿ ಜಲಜಾಕ್ಸಿ ಕುಲಾಲ್ ಲೆಕ್ಕ ಪತ್ರ ಮಂಡಿಸಿದರು. ಸಂಘದ ಜತೆಕಾ ರ್ಯದರ್ಶಿ ಜಯರಾಮ ಪೂಜಾರಿ ಧನ್ಯವಾದ ಸಲ್ಲಿಸಿದರು. ಸಂಘದ ಉಪಾಧ್ಯಕ್ಷರಾದ ಮಧುಕರ ಮಲ್ಯ, ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಗಟ್ಟಿ ಸಹಕರಿಸಿದರು.ಶೇಷಪ್ಪ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ಬಂಟ್ವಾಳ ತಾಲೂಕು ಪಿಂಚಣಿದಾರರ ಸಂಘದ ಮಹಾಸಭೆ"