ಬಂಟ್ವಾಳ: ಹಿದಾಯ ವಿಶೇಷ ಮಕ್ಕಳ ವಸತಿಯುತ ಶಾಲೆ ಕಾವಳಕಟ್ಟೆ ಇದರ ವಾರ್ಷಿಕ ಪ್ರತಿಭಾ ದಿನಾಚರಣೆ ಭಾನುವಾರ ಮೊಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ಸ್ಥಾಪಕ ಜೋಸೆಫ್ ಕ್ರಾಸ್ಟಾ ನೆರವೇರಿಸಿದರು. ಎಂ.ಆರ್.ಪಿ.ಎಲ್. ಪ್ರಧಾನ ವ್ಯವಸ್ಥಾಪಕ ( ಆಡಳಿತ) ಮನೋಜ್ ಕುಮಾರ್ ಅವರನ್ನು ಸಮಾರಂಭ ದಲ್ಲಿ ಸನ್ಮಾನಿಸಲಾಯಿತು.
ಅತಿಥಿಗಳಾಗಿ ಹಾಜಿ ಪಿ.ಎಸ್.ಅಬ್ದುಲ್ ಹಮೀದ್, ಹಿದಾಯ ಫೌಂಡೇಶನ್ ಉಪಾದ್ಯಕ್ಷರಾದ ಇದ್ದಿನ್ ಕುಂಞಿ, ಆಸಿಫ್ ಇಕ್ಬಾಲ್, ಹಿದಾಯ ಟ್ರಸ್ಟಿ ಎಫ್.ಎಂ.ಬಶೀರ್, ಹಿದಾಯ ಫೌಂಡೇಶನ್ ಯೂತ್ ವಿಂಗ್ ಅಧ್ಯಕ್ಷ ಇಬ್ರಾಹಿಂ ಖಲೀಲ್ ಉಪಸ್ಥಿತರಿದ್ದರು.
ಕ್ರೀಡಾ ಮತ್ತು ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು. ಹಿದಾಯ ಸದಸ್ಯರಾದ ಕೆ.ಎಸ್ ಅಬೂಬಕ್ಕರ್ , ಪಿ.ಮೊಹಮ್ಮದ್, ಅಬ್ದುಲ್ ರಹಿಮಾನ್ ಯೂನಿಕ್, ಇಲ್ಯಾಸ್ ಕಕ್ಕಿಂಜೆ, ಸಾದಿಕ್ ಹಸನ್ , ಹಕೀಂ ಸುನ್ನತ್ ಕೆರೆ, ಆಶಿಕ್ ಕುಕ್ಕಾಜೆ, ಬಶೀರ್ ವಗ್ಗ, ಇಬ್ರಾಹಿಂ ಪರ್ಲಿಯಾ ಮತ್ತಿತರರು ಉಪಸ್ಥಿತರಿದ್ದರು. ಅಬ್ದುಲ್ ರಝಾಕ್ ಅನಂತಾಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯಶಿಕ್ಷಕಿ ಆಶಾಲತಾ ವರದಿ ವಾಚಿಸಿದರು. ಹಕೀಂ ಕಲಾಯಿ ಸನ್ಮಾನಿತರ ಸನ್ಮಾನ ಪತ್ರ ವಾಚಿಸಿದರು, ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು, ಸದಸ್ಯ ಹಂಝ ಬಸ್ತಿಕೋಡಿ ವಂದಿಸಿದರು.
Be the first to comment on "ಹಿದಾಯ ವಿಶೇಷ ಮಕ್ಕಳ ವಸತಿಯುತ ಶಾಲೆ ವಾರ್ಷಿಕ ಪ್ರತಿಭಾ ದಿನಾಚರಣೆ"