ಬಂಟ್ವಾಳ: ಬಂಟ್ವಾಳದ ಲೊರೆಟ್ಟೋ ಮಾತಾ ಚರ್ಚ್ ಪಾಲಕಿ ಮಾತೆ ಮರಿಯಮ್ಮನವರ ವಾರ್ಷಿಕಹಬ್ಬವನ್ನು ಸಂಭ್ರಮ ಸಡಗರ ಭಕ್ತಿಯಿಂದ ಆಚರಿಸಲಾಯಿತು
” ಪ್ರಾರ್ಥನೆಯ ಬಲದಿಂದ ಭರವಸೆಯ ಯಾತ್ರಿಕಾ ರಾಗೋಣ”ಎಂಬ ಧ್ಯೇಯವಾಕ್ಯದೊಂದಿಗೆ ಪ್ರಧಾನ ಧರ್ಮಗುರುಗಳಾದ ಉಡುಪಿ ಧರ್ಮಪ್ರಾಂತ್ಯದ ಕಥೋಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ವಂ ವಿನ್ಸೆಂಟ್ ಕ್ರಾಸ್ತಾ ದೇವರ ವಾಕ್ಯದ ಮೇರೆಗೆ ಪ್ರವಚನ ನೀಡಿ ನೂರಾರು ಭಕ್ತಾದಿಗಳು ಹಾಗೂ ಮಂಗಳೂರು ಧರ್ಮಪ್ರಾಂತ್ಯದ ವಿವಿಧ ಧರ್ಮಕ್ಷೇತ್ರದ ಧರ್ಮಗುರುಗಳೊಂದಿಗೆ ಪವಿತ್ರ ಬಲಿ ಪೂಜೆಯನ್ನು ಭಕ್ತಿಪೂರ್ವಕವಾಗಿ ಅರ್ಪಿಸಲಾಯಿತು.
9 ದಿನಗಳ ಮಾತೆ ಮರಿಯಮ್ಮನವರ ಚರಣಕ್ಕೆ ನೊವೆನಾ ಪ್ರಾರ್ಥನೆ, ಬಲಿಪೂಜೆಯನ್ನು ಅರ್ಪಿಸಲಾಯಿತು. ಚರ್ಚ್ ಧರ್ಮಗುರುಗಳಾದ ವಂದನೀಯ ಪ್ರಾನ್ಸಿಸ್ ಕ್ರಾಸ್ತಾ ದಾನಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ಈ ಸಂದರ್ಭ ಹಬ್ಬವನ್ನು ಆಚರಿಸಲು ಸಹಕರಿಸಿದವರಿಗೆ ಗೌರವಪೂರ್ವಕವಾಗಿ ಮೇಣದ ಬತ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಲೊರೆಟ್ಟೊ ಸಿಬಿಎಸ್ ಇ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ವಂದನೀಯ ಜೆಸನ್ ಮೋನಿಸ್ , ಬಂಟ್ವಾಳ ವಲಯದ ವಿವಿಧ ಚರ್ಚ್ ಗಳ ಧರ್ಮಗುರುಗಳು ಉಪಸ್ಥಿತರಿದ್ದರು.
Be the first to comment on "ಲೊರೆಟ್ಟೊ: ಮಾತೆ ಮರಿಯಮ್ಮನವರ ವಾರ್ಷಿಕ ಹಬ್ಬ"