ಬಂಟ್ವಾಳ: ಬಂಟ್ವಾಳದ ಲೊರೆಟ್ಟೋ ಮಾತಾ ಚರ್ಚ್ ಪಾಲಕಿ ಮಾತೆ ಮರಿಯಮ್ಮ ಅವರ ವಾರ್ಷಿಕ ದಿನದ ಅಂಗವಾಗಿ ಪರಮ ಪ್ರಸಾದದ ಆಚರಣೆಯನ್ನು ಮೆರವಣಿಗೆಯ ಮೂಲಕ ಸಂಭ್ರಮ ಸಡಗರ ಭಕ್ತಿಯಿಂದ ಆಚರಿಸಲಾಯಿತು
ಲೊರೆಟ್ಟೊ ಚರ್ಚ್ ನಿಂದ ಆರಂಭವಾದ ಭವ್ಯ ಪರಮ ಪ್ರಸಾದ ಮೆರವಣಿಗೆ, ಲೊರೆಟ್ಟೊ ಅಂಚೆ ಕಚೇರಿ ಹೊರಗೆ ತಲುಪಿ ಅಲ್ಲಿಂದ ಪದವು ತನಕ ಹೋಗಿ ಚರ್ಚ್ ನಲ್ಲಿ ಪರಮ ಪ್ರಸಾದದ ಆಶೀರ್ವಾದದೊಂದಿಗೆ ಕೊನೆಗೊಂಡಿತು
ಪ್ರಧಾನ ಧರ್ಮಗುರುಗಳಾಗಿ ವೈಡ್ ಡೌಸ್ ಅಧ್ಯಾತ್ಮಿಕ ನಿರ್ದೇಶಕರಾದ ವಂ ಸ್ವಾಮಿ ಆಲ್ವಿನ್ ಡಿಕುನ್ಹಾ “ಪ್ರಾರ್ಥನೆಯ ಬಲದಿಂದ ಭರವಸೆಯ ಯಾತ್ರಿಕರಾಗೋಣ “ಎಂಬ ಧ್ಯೇಯ ವಾಕ್ಯದೊಂದಿಗೆ ನೂರಾರು ಭಕ್ತರೊಂದಿಗೆ ಪವಿತ್ರ ಬಲಿಪೂಜೆ ಅರ್ಪಿಸಿ ದೇವರ ವಾಕ್ಯದ ಬಗ್ಗೆ ಪ್ರವಚನ ನೀಡಿ ಪವಿತ್ರ ಬಲಿ ಪೂಜೆಯನ್ನು ಭಕ್ತಿಪೂರ್ವಕವಾಗಿ ಅರ್ಪಿಸಲಾಯಿತು. ಲೊರೆಟ್ಟೊ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ವಂದನೀಯ ಜೆಸನ್ ಮೋನಿಸ್ ಬಲಿಪೂಜೆಯಲ್ಲಿ ಪಾಲ್ಗೊಂಡಿದ್ದರು. ಪಾಲನಾ ಮಂಡಳಿ ಸಂಭ್ರಮದ ಮೇಲುಸ್ತುವಾರಿಯನ್ನು ವಹಿಸಿತ್ತು.
Be the first to comment on "ಲೊರೆಟ್ಟೊ ಚರ್ಚ್: ಪರಮಪ್ರಸಾದ ಮೆರವಣಿಗೆ"